ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಜನ್ಮದಿನ.. ಮೋಹಕತಾರೆಗೆ ಶುಭಾಶಯಗಳ ಮಹಾಪೂರ - ramya latest news

ನಟಿ ರಮ್ಯಾ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗ ನಟ-ನಟಿಯರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

actress ramya birthday
ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಜನ್ಮದಿನ

By

Published : Nov 29, 2022, 12:17 PM IST

ಚಂದನವನದ ಮೋಹಕ ತಾರೆ ರಮ್ಯಾ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಆತ್ಮೀಯರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಪವರ್‌ಸ್ಟಾರ್​ ಪುನೀತ್​ ರಾಜ್‌ಕುಮಾರ್ ಜೊತೆ ಅಭಿ ಸಿನಿಮಾದಲ್ಲಿ ನಟಿಸುವ ಮೂಲಕ ರಮ್ಯಾ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟರು. ಚೊಚ್ಚಲ ಸಿನಿಮಾದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ರಮ್ಯಾ, ಎಕ್ಸ್‌ಕ್ಯೂಸ್​ ಮಿ, ಆಕಾಶ್, ಅರಸು, ರಂಗ ಎಸ್​​​ಎಸ್​ಎಲ್​​ಸಿ, ಜೊತೆ ಜೊತೆಯಲಿ, ಅಮೃತಧಾರೆ, ದತ್ತ, ಅರಸು, ಮುಸ್ಸಂಜೆ ಮಾತು, ಗೌರಮ್ಮ, ಲಕ್ಕಿ.. ಹೀಗೆ ಹಲವಾರು​ ಸಿನಿಮಾಗಳ ಮೂಲಕ ಮೋಹಕ ತಾರೆ ಎಂದು ಕರೆಯಿಸಿಕೊಂಡರು.

ನಟಿ​ ರಮ್ಯಾ ಜನ್ಮದಿನ

ಇವರು ನಟಿಸಿದ ಬಹುತೇಕ ಸಿನಿಮಾಗಳು ಹಿಟ್​ ಆಗಿ ಬಹುಬೇಡಿಕೆ ನಟಿಯಾಗಿ ಮಿಂಚಿದರು. ಶಿವ ರಾಜ್​ಕುಮಾರ್, ಸುದೀಪ್, ದರ್ಶನ್, ಗಣೇಶ್, ಯಶ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇವರ ನಟನೆಗೆ ಕೆಲ ಫಿಲ್ಮ್​ಫೇರ್ ಪ್ರಶಸ್ತಿಗಳು ಲಭಿಸಿವೆ.

ಕೆಲ ಕಾಲ ರಮ್ಯಾ ಚಿತ್ರಂಗದಿಂದ ದೂರ ಉಳಿದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸದಾ ಸಕ್ರಿಯರಾಗಿದ್ದ ಅವರು ಮತ್ತೆ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​​ ಆಗಿದ್ದಾರೆ. ಚಿತ್ರರಂಗದಿಂದ ದೂರ ಉಳಿದಿದ್ದ ಸಮಯದಲ್ಲೂ ಸ್ಯಾಂಡಲ್ ವುಡ್ ಕ್ವೀನ್ ಕ್ರೇಜ್ ಮಾತ್ರ ಕಡಿಮೆ ಆಗಿರಲಿಲ್ಲ.

ಇದನ್ನೂ ಓದಿ:ಸಿನಿಮಾ ಕ್ಷೇತ್ರ ಪ್ರವೇಶಿಸಿದ ನೆನಪಿರಲಿ ಪ್ರೇಮ್​ ಮಗಳು; 'ಟಗರು ಪಲ್ಯ'ದಿಂದ ಅದೃಷ್ಟ ಪರೀಕ್ಷೆ!

ಸದ್ಯ ರಾಜ್​ ಬಿ ಶೆಟ್ಟಿ ಅಭಿನಯದ ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ನಿರ್ಮಾಪಕಿಯಾಗಿದ್ದಾರೆ. ಈ ಚಿತ್ರ ಬಿಡುಗಡೆ ಹಂತದಲ್ಲಿದೆ. ತನ್ನ ಅ್ಯಪಲ್​ ಬಾಕ್ಸ್​ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಪಕಿ ಆಗಿ ಚಿತ್ರರಂಗಕ್ಕೆ ಮರಳಿರುವ ರಮ್ಯಾ ನಟಿಯಾಗಿಯೂ ಮತ್ತೆ ಕೆಲಸ ಮಾಡಲು ಮುಂದಾಗಿದ್ದಾರೆ. ಸದ್ಯ ಉತ್ತರಾಖಂಡ ಚಿತ್ರದಲ್ಲಿ ಮೋಹಕತಾರೆ ಬ್ಯುಸಿಯಾಗಿದ್ದಾರೆ.

ABOUT THE AUTHOR

...view details