ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನಿರ್ಧಾರಕ್ಕೆ ಮಾಜಿ ಸಂಸದೆ ಹಾಗೂ ಸ್ಯಾಂಡಲ್ವುಡ್ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದು (ಗುರುವಾರ) ಮಹತ್ವದ ನಿರ್ಧಾರ ತೆಗೆದುಕೊಂಡ ಬಿಸಿಸಿಐ, ತನ್ನ ಕೇಂದ್ರೀಯ ಗುತ್ತಿಗೆ ಪಡೆದ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ಪಂದ್ಯ ಶುಲ್ಕ ನೀಡುವುದಾಗಿ ಘೋಷಿಸಿತು. ಇದನ್ನು ಅನೇಕ ಮಹಿಳಾ ಕ್ರೀಡಾಪಟುಗಳು ಸ್ವಾಗತಿಸಿದ್ದಾರೆ.
ಬಿಸಿಸಿಐ ಹೊಸ ನಿರ್ಧಾರವನ್ನು ಮೆಚ್ಚಿ, ಇದನ್ನು ಚಿತ್ರೋದ್ಯಮವೂ ಅನುಸರಿಸಲಿ ಎಂದ ರಮ್ಯಾ - ನಟಿ ರಮ್ಯಾ ಟ್ವಿಟ್
ಮಹಿಳಾ ಕ್ರಿಕೆಟಿಗರಿಗೆ ಪುರುಷರಷ್ಟೇ ವೇತನ ನೀಡುವ ಬಗ್ಗೆ ಇಂದು ಹೊರಬಂದ ಬಿಸಿಸಿಐಯ ಮಹತ್ವದ ನಿರ್ಧಾರಕ್ಕೆ ಸ್ಯಾಂಡಲ್ವುಡ್ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![ಬಿಸಿಸಿಐ ಹೊಸ ನಿರ್ಧಾರವನ್ನು ಮೆಚ್ಚಿ, ಇದನ್ನು ಚಿತ್ರೋದ್ಯಮವೂ ಅನುಸರಿಸಲಿ ಎಂದ ರಮ್ಯಾ Actress Ramya appreciates BCCI's decision](https://etvbharatimages.akamaized.net/etvbharat/prod-images/768-512-16761816-385-16761816-1666881301389.jpg)
Actress Ramya appreciates BCCI's decision
ಇವರ ಜೊತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರವನ್ನು ಶ್ಲಾಘಿಸಿದ ರಮ್ಯಾ, ಚಿತ್ರೋದ್ಯಮ ಸಹ ಇದನ್ನು ಅನುಸರಿಸಬೇಕು ಎಂದಿದ್ದಾರೆ. ತುಂಬಾ ಅಗತ್ಯವಿದ್ದ, ತುಂಬಾ ಶ್ಲಾಘನೀಯ ನಿರ್ಧಾರವಾಗಿದೆ. ಚಿತ್ರೋದ್ಯಮ ಸಹ ಇದನ್ನು ಅನುಸರಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಟ್ಯಾಗ್ ಮಾಡಿ ಅವರು ಟ್ವೀಟ್ ಮಾಡಿದ್ದಾರೆ. ಇವರಷ್ಟೇ ಅಲ್ಲದೇ ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಸಮಾನ ವೇತನ ಪ್ರಕಟಿಸಿದ ಬಿಸಿಸಿಐ ನಿರ್ಧಾರಕ್ಕೆ ಮಹಿಳಾ ಆಯೋಗ, ಆಟಗಾರ್ತಿಯರೂ ಖುಷ್