ಕರ್ನಾಟಕ

karnataka

ETV Bharat / entertainment

ಪತಿ ವಿರುದ್ಧ ದೂರು ಕೊಟ್ಟ ನಟಿ ರಾಖಿ ಸಾವಂತ್: ಆದಿಲ್ ಖಾನ್ ಅರೆಸ್ಟ್! - adil arrested

ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಅವರನ್ನು ಓಶಿವಾರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Rakhi sawant husband adil arrested
ರಾಖಿ ಸಾವಂತ್ ಪತಿ ಆದಿಲ್ ಖಾನ್ ಅರೆಸ್ಟ್

By

Published : Feb 7, 2023, 2:06 PM IST

ಮುಂಬೈ (ಮಹಾರಾಷ್ಟ್ರ):ನಟಿ ರಾಖಿ ಸಾವಂತ್ ಅವರ ಪತಿಯನ್ನು ಅರೆಸ್ಟ್ ಮಾಡಲಾಗಿದೆ. ಪತಿ ಆದಿಲ್ ಅವರು ರಾಖಿ ಅವರನ್ನು ಭೇಟಿಯಾಗಲು ಅವರ ಮನೆಗೆ ಹೊರಟಿದ್ದರು. ಅಷ್ಟರಲ್ಲಿ ಓಶಿವಾರ ಪೊಲೀಸರು ಸ್ಥಳಕ್ಕಾಗಮಿಸಿ ಆದಿಲ್ ಅವರನ್ನು ಬಂಧಿಸಿದ್ದಾರೆ. ರಾಖಿ ಸಾವಂತ್​ ಅವರು ಪತಿ ಆದಿಲ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪತಿ ಆದಿಲ್ ಖಾನ್ ದುರಾನಿ (Adil Khan Durrani) ವಿರುದ್ಧ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಾಖಿ ಸಾವಂತ್​, ಆದಿಲ್ ತನ್ನ ದಿವಂಗತ ತಾಯಿ ಜಯಾ ಭೇದಾ (Jaya Bheda) ಚಿಕಿತ್ಸೆಗೆ ಹಣ ನೀಡಿಲ್ಲ ಎಂದು ಆರೋಪಿಸಿದರು. ಬಿಗ್ ಬಾಸ್ ಶೋಗೆ ಹೋಗುವುದಕ್ಕೂ ಮುನ್ನ ತನ್ನ ತಾಯಿಯ ಚಿಕಿತ್ಸೆಗಾಗಿ ಆದಿಲ್ ಅವರಿಗೆ 10 ಲಕ್ಷ ರೂಪಾಯಿ ನೀಡಿದ್ದೆ, ಆದರೆ ಅವರು ತನ್ನ ತಾಯಿಗೆ ಚಿಕಿತ್ಸೆ ಕೊಡಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆಪರೇಷನ್ ವೇಳೆ ತಾಯಿಗೆ ನಿಜವಾಗಿಯೂ ಹಣದ ಅವಶ್ಯಕತೆ ಇದ್ದಾಗ ಆದಿಲ್ ಹಣ ಕೊಟ್ಟಿಲ್ಲ. ಆದಿಲ್ ಅವರಿಂದಾಗಿಯೇ ತನ್ನ ತಾಯಿ ಸಾವನ್ನಪ್ಪಿದ್ದಾರೆ ಎಂದೂ ಕೂಡ ಆರೋಪ ಮಾಡಿದ್ದಾರೆ.

ತನ್ನಿಂದ ಬೇರ್ಪಟ್ಟು ಗೆಳತಿ ತನು ಜೊತೆ ವಾಸಿಸುತ್ತಿದ್ದೇನೆ ಎಂದು ಆದಿಲ್ ಖಾನ್ ದುರಾನಿ ಹೇಳಿದ್ದಾಗಿ ಕೂಡ ನಟಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಕೊನೆಗೂ ಆದಿಲ್ ತನ್ನ ಗೆಳತಿ ತನು ಜೊತೆ ಇರಲು ನಿರ್ಧರಿಸಿದ್ದಾರೆ ಎಂದು ರಾಖಿ ಮಾಧ್ಯಮಗಳಿಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಅವರು ಆದಿಲ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿಲ್​ ತನ್ನನ್ನು ನಿಂದಿಸುವ ಮೂಲಕ ಬಾಲಿವುಡ್‌ನಲ್ಲಿ ಸ್ಟಾರ್ ಆಗಲು ಹೊರಟಿದ್ದಾರೆ. ತನ್ನ ಬಳಿ ಇದ್ದ ಎಲ್ಲ ಹಣವನ್ನು ತೆಗೆದುಕೊಂಡಿದ್ದಾರೆ. ಆದಿಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ರಾಖಿ ತಿಳಿಸಿದ್ದಾರೆ.

ರಾಖಿ ಅವರು ಆದಿಲ್ ಜೊತೆ ಮುಂಬೈನ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಒಬ್ಬರನ್ನೊಬ್ಬರು ಮುದ್ದಿಸುವುದೂ ಕೂಡ ಕಂಡು ಬಂದಿತ್ತು. ಕೆಲ ದಿನಗಳ ಹಿಂದೆ ಆದಿಲ್ ತಮ್ಮ ಮದುವೆಯ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಹೊಸ ವರ್ಷದ ಆರಂಭದಲ್ಲೇ ಆದಿಲ್ ಜೊತೆ ಮದುವೆ ಬಗ್ಗೆ ಸಂಚಲನದ ಮಾಹಿತಿಯನ್ನು ರಾಖಿ ಸಾವಂತ್ ಬೆಳಕಿಗೆ ತಂದಿದ್ದರು.

ಏಳು ತಿಂಗಳ ಹಿಂದೆ ಆದಿಲ್ ಅವರನ್ನು ರಾಖಿ ವಿವಾಹವಾಗಿರುವುದಾಗಿ ತಿಳಿಸಿದ್ದರು. ಆದಿಲ್ ಜೊತೆಗಿನ ರಾಖಿಯ ಮದುವೆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆದವು. ಆದರೆ, ಆದಿಲ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ರಾಖಿ ತಮ್ಮ ಅಳಲು ತೋಡಿಕೊಂಡಿದ್ದರು. ಕೆಲ ದಿನಗಳ ನಂತರ ಆದಿಲ್ ರಾಖಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದರು.

ಇದನ್ನೂ ಓದಿ:ರಾಖಿ ಸಾವಂತ್​​ಗೆ ಮಾತೃವಿಯೋಗ; ಅತ್ತು ಗೋಗರೆದ ನಟಿ

ಕೆಲ ದಿನಗಳ ಹಿಂದೆ ನಟಿ ರಾಖಿ ಸಾವಂತ್ ತಾಯಿ ಜಯಾ ಭೇದಾ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ರಾಖಿ ಸಾವಂತ್ ಮತ್ತು ಪತಿ ಆದಿಲ್ ಖಾನ್ ದುರಾನಿ ನಡೆಸಿಕೊಟ್ಟಿದ್ದರು . ಆ ವೇಳೆ ರಾಖಿ ಜೊತೆಯೇ ಇದ್ದರು ಆದಿಲ್. ಇದೀಗ ಪತಿ ಆದಿಲ್​ ವಿರುದ್ಧ ರಾಖಿ ದೂರು ನೀಡಿದ್ದು, ಓಶಿವಾರ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ABOUT THE AUTHOR

...view details