ಕರ್ನಾಟಕ

karnataka

ETV Bharat / entertainment

'ತುಪ್ಪದ ಬೆಡಗಿ' ರಾಗಿಣಿ ಮನೆಗೆ ಬಂತು ಎಂಜಿ ಹೆಕ್ಟರ್ ಕಾರು; ಬೆಲೆ ಎಷ್ಟು ಗೊತ್ತಾ? - ಈಟಿವಿ ಭಾರತ ಕನ್ನಡ

ನಟಿ ರಾಗಿಣಿ ದ್ವಿವೇದಿ, 50 ಲಕ್ಷ ರೂಪಾಯಿ ಬೆಲೆ ಬಾಳುವ ಎಂಜಿ ಹೆಕ್ಟರ್ ಟಾಪ್‌ ಹ್ಯಾಂಡ್ ಕಾರನ್ನು ಖರೀದಿಸಿದ್ದಾರೆ.

Ragini
'ತುಪ್ಪದ ಬೆಡಗಿ' ರಾಗಿಣಿ ಮನೆಗೆ ಬಂತು ಎಂಜಿ ಹೆಕ್ಟರ್ ಕಾರು

By

Published : Jun 30, 2023, 10:58 PM IST

'ತುಪ್ಪದ ಬೆಡಗಿ' ರಾಗಿಣಿ ಮನೆಗೆ ಬಂತು ಎಂಜಿ ಹೆಕ್ಟರ್ ಕಾರು

'ವೀರ ಮದಕರಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿ, ತನ್ನದೇ ಬೇಡಿಕೆ ಹೊಂದಿರುವ ನಟಿ ರಾಗಿಣಿ ದ್ವಿವೇದಿ. ಸದ್ಯ ಕನ್ನಡ, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಚೆಲುವೆ ಮನೆಗೆ ಅರ್ಧ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರಿನ ಆಗಮನವಾಗಿದೆ. ತುಪ್ಪದ ಬೆಡಗಿ ಎಂಜಿ ಹೆಕ್ಟರ್ ಟಾಪ್‌ ಹ್ಯಾಂಡ್ ಕಾರನ್ನು ಖರೀದಿಸಿದ್ದಾರೆ.

ಎಂಜಿ ಕಾರುಗಳಲ್ಲಿ ಈ ವರ್ಷದ ಆಡಿಷನ್​ಗಳಲ್ಲಿ ಇದುವೇ ಟಾಪ್​ ಹ್ಯಾಂಡ್​ ಆಗಿದೆ. ಸೇಫ್ಟಿ ಜೊತೆಗೆ ಲಾಂಗ್​ಡ್ರೈವ್​ ಹೋಗೋದಕ್ಕೂ ಇದು ಅತ್ಯುತ್ತಮ. ಜೊತೆಗೆ ಅತ್ಯಾಧುನಿಕ ಫೀಚರ್​ ಹೊಂದಿರುವ ಮಾಡೆಲ್​ ಕಾರು ಇದಾಗಿದ್ದು, ಅತೀ ವೇಗದ ಜೊತೆಗೆ ಅಷ್ಟೇ ಸೇಫ್ಟಿ ಕೂಡ ಹೊಂದಿದೆ. ಇದರ ಬೆಲೆ ಬರೋಬ್ಬರಿ 50 ಲಕ್ಷ ರೂಪಾಯಿ ಆಗಿದೆ. ಈ ಕಾರನ್ನು ರಾಗಿಣಿ ಖರೀದಿಸಿ ನಾಲ್ಕು ದಿನ ಆಗಿದೆಯಂತೆ.

ದ್ವಿಭಾಷೆಯಲ್ಲಿ ದ್ವಿವೇದಿ ಸಿನಿಮಾ ರೆಡಿ:ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ 'ಶೀಲ' ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್​ ಲುಕ್​ ಕೂಡ ರೆಡಿಯಾಗಿದೆ. 'ಶೀಲ' ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಹಿಳಾ ಪ್ರಧಾನ ಚಿತ್ರವಾಗಿದೆ. ಸಮಾಜದಲ್ಲಿ ಎದುರಾಗುವ ಸಾಕಷ್ಟು ಸವಾಲುಗಳನ್ನು ಹೆಣ್ಣು ಮಗಳೊಬ್ಬಳು ಹೇಗೆ ನಿಭಾಯಿಸುತ್ತಾಳೆ ಎಂಬುದು ಕಥಾಸಾರಾಂಶ‌. ಶೀಲ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ:Darling Krishna: 'ಕೌಸಲ್ಯಾ ಸುಪ್ರಜಾ ರಾಮ' ಬಿಡುಗಡೆಗೆ ಮುಹೂರ್ತ ಫಿಕ್ಸ್; ಹೈಪ್​, ಬಿಲ್ಡಪ್​ ಬೇಡ ಅಂತಿದ್ದಾರೆ ನಿರ್ದೇಶಕರು!

ಸದ್ಯದಲ್ಲೇ ಟ್ರೇಲರ್​ ಕೂಡ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಅಲ್ಲದೇ ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಮಾಲಿವುಡ್​ನಲ್ಲಿ ಈ ಮೊದಲು ಕಂದಹಾರ್​ ಮತ್ತು ಫೇಸ್​ ಟು ಫೆಸ್​ ಎಂಬ 2 ಸಿನಿಮಾ ಮಾಡಿದ್ದು, ಶೀಲಾ ಚಿತ್ರ ರಾಗಿಣಿಗೆ ಮಲಯಾಳಂನಲ್ಲಿ 3ನೇಯದ್ದಾಗಿದೆ. ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್ ನಿರ್ದೇಶಿಸಿದ್ದಾರೆ. ಈ ಚಿತ್ರ ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ರಾಗಿಣಿ ಕಮ್​ ಬ್ಯಾಕ್​:ಸಿನಿಮಾ ರಂಗದಲ್ಲಿ ತನ್ನ ನಟನೆಯಿಂದಲೇ ಎಲ್ಲರನ್ನು ಮೆಚ್ಚಿಸಿದ್ದ ನಟಿ ರಾಗಿಣಿ ಕೆಲವು ವಿಚಾರಗಳಿಂದ ಪೊಲೀಸ್​, ಕೋರ್ಟ್, ತನಿಖೆ ಅಂತ ಸದಾ ಸುದ್ದಿಯಲ್ಲಿದ್ದರು. ಆ ವೇಳೆ, ಇನ್ನು ಮುಂದೆ ರಾಗಿಣಿಗೆ ಸಿನಿಮಾಗಳು ಸಿಗೋದೇ ಕಷ್ಟ, ಸಿನಿ ಭವಿಷ್ಯ ತುಪ್ಪದ ಬೆಡಗಿಗಿಲ್ಲ ಇಲ್ಲ ಎಂದವರೇ ಜಾಸ್ತಿ.

ಆದರೆ ಅದನ್ನೆಲ್ಲ ಎದುರಿಸಿ ಮತ್ತೆ ಅದೇ ಸಿನಿಮಾರಂಗದಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ರಾಗಿಣಿ ಯಶಸ್ವಿಯಾದರು ಎಂದರೆ ತಪ್ಪಾಗಲಾರದು. ಯಾಕೆಂದರೇ ಬರೀ ಕನ್ನಡ ಸಿನಿಮಾವಲ್ಲದೇ ಅವರು ಬಹುಭಾಷೆಯಲ್ಲಿಯೂ ಮುಖ್ಯ ಪಾತ್ರದಲ್ಲೇ ನಟನೆ ಮಾಡುತ್ತಿದ್ದು, ಬೇರೆ ರಾಜ್ಯದಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತನ್ನ ಫಿಟ್​ನೆಸ್​ನಿಂದಲೇ ಅಟ್ರಾಕ್ಟ್​ ಮಾಡುವ ನಟಿ ರಾಗಿಣಿ ಸಿನಿಮಾ ಇಂಡಸ್ಟ್ರೀಗೆ ಸ್ಟ್ರಾಂಗ್​ ಕಮ್​ಬ್ಯಾಕ್ ಮಾಡಿದ್ದಾರೆ.​

ಇದನ್ನೂ ಓದಿ:ಶಿವಣ್ಣನ ಬರ್ತ್ ಡೇಗೆ ಸ್ಪೆಷಲ್​ ಗಿಫ್ಟ್​​ ರೆಡಿ: ಘೋಸ್ಟ್‌ ಚಿತ್ರದಿಂದ 'BIG DADDY'‌ ಸ್ಪೆಷಲ್ ವಿಡಿಯೋ

ABOUT THE AUTHOR

...view details