14ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ರಾಧಿಕಾ ಇಂದು 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗದವರು, ಆತ್ಮೀಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
1986ರ ನವೆಂಬರ್ 11ರಂದು ಮಂಗಳೂರಿನಲ್ಲಿ ಜನಿಸಿದ ರಾಧಿಕಾ, ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. 9 ನೇ ತರಗತಿ ಮುಗಿಯುತ್ತಿದ್ದಂತೆ ಚಿತ್ರರಂಗಕ್ಕೆ ಬಂದ ಇವರು, ಸೃಜನ್ ಲೋಕೇಶ್ ಜೊತೆ 'ನೀಲಮೇಘಶ್ಯಾಮ' ಚಿತ್ರದ ಮೂಲಕ ತಮ್ಮ ಕರಿಯರ್ ಆರಂಭಿಸಿದರು. ಈ ಸಿನಿಮಾ ಹೇಳುವಷ್ಟು ಹೆಸರು ಮಾಡದಿದ್ದರೂ, ಇದರ ನಂತರ ನಟ ವಿಜಯ್ ರಾಘವೇಂದ್ರ ಜೊತೆ ನಟಿಸಿದ 'ನಿನಗಾಗಿ' ಸಿನಿಮಾ ರಾಧಿಕಾರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ನಂತರ ನಟಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆದವು.