ವಾಷಿಂಗ್ಟನ್:ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮವಾಗಿ ಸರಿದೂಗಿಸುತ್ತಿದ್ದಾರೆ. ಅದರಲ್ಲೂ ಅವರ ಹೆಚ್ಚಿನ ಗಮನ ಇದೀಗ ಮಗಳು ಮಾಲ್ತಿ ಮೇರಿಯ ಮೇಲೆಯೇ ಇದೆ. ಪುಟ್ಟ ಮಾಲ್ತಿಯ ಲಾಲನೆ - ಪಾಲನೆಗೆ ಹೆಚ್ಚು ಕಾಳಜಿವಹಿಸುವ ಪ್ರಿಯಾಂಕಾ, ಮಗುವಿನ ಬಾಲ್ಯದ ಒಡನಾಟವನ್ನು ಕ್ಷಣವೂ ಮಿಸ್ ಮಾಡದೇ ಸೆರೆ ಹಿಡಿಯುತ್ತಿದ್ದಾರೆ. ಇದರ ಜೊತೆಗೆ ಹಲವು ಬಾರಿ ಈ ಕುರಿತು ಅಪ್ಡೇಟ್ಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ನೀಡುತ್ತಾರೆ.
ಸದ್ಯ ಈ ಕುರಿತು ಮತ್ತೊಂದು ಹೊಸ ಅಪ್ಡೇಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ನೀಡಿರುವ ಅವರು, ತಮ್ಮ ಮುದ್ದು ಮಗಳು ಮಾಲ್ತಿಯ ಮುಂಜಾನೆಯನ್ನು ಫ್ರೇಂನಲ್ಲಿ ಸೆರೆ ಹಿಡಿದಿದ್ದು, ಇದು ಪರ್ಫೆಕ್ಟ್ ಮಾರ್ನಿಂಗ್ ಎಂದಿದ್ದಾರೆ. ಮಾಲ್ತಿ ಮೇರಿ ಬೆಳಗಿನ ಚಟುವಟಿಕೆಯ ಬ್ಯಾಕ್ ಸೈಡ್ ಪೋಸ್ ಇದಾಗಿದೆ. ಇದರಲ್ಲಿ ಪುಟ್ಟ ಪೋರಿ ಹೂವಿನ ಚಿತ್ತಾರದ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದು, ಕಿವಿಯಲ್ಲಿ ಮಿನುಗುವ ಆಭರಣ ಕಾಣಬಹುದು. ಮಗಳ ಮುಂಜಾನೆಯ ಈ ಕ್ಷಣಗಳ ಮೂಲಕ ದಿನ ಆರಂಭ ದೇಸಿ ಗರ್ಲ್ ಪ್ರಿಯಾಂಕಾರಲ್ಲಿ ಅತ್ಯುತ್ಸಾಹ ಕೂಡ ಮೂಡಿಸಿಸಿದೆ. ಈ ಹಿಂದೆ ಮಗಳು ತೊದಲು ನುಡಿಯನ್ನು ಆಡಲು ಯತ್ನಿಸುತ್ತಾ, ನ್ಯೂಯಾರ್ಕ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಸರೋಗೆಸಿ (ಬಾಡಿಗೆ ತಾಯ್ತನ)ದ ಮೂಲಕ 2022ರಲ್ಲಿ ಜನವರಿಯಲ್ಲಿ ಮುದ್ದು ಮಗಳು ಮಾಲ್ತಿ ಮೇರಿಯ ಪೋಷಕಾರದರು. ತಮ್ಮ ಮೊದಲ ಮಗುವಿನ ಆಗಮನ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು.