ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ನಟ ವಿಜಯ್ ರಾಘವೇಂದ್ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ 'ರಘು' ಸಿನಿಮಾದ ಗುಂಗಿನಲ್ಲಿದ್ದ ಚಿನ್ನಾರಿ ಮುತ್ತ, ಇದೀಗ ಮಗದೊಂದು ಹೊಸ ಸಿನಿಮಾ ತಂಡದ ಜೊತೆ ಕೈಜೋಡಿಸುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ 24/7 ಹಾಗೂ ವಿರಾಮದ ನಂತರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರಮಣ್ ರಾಜ್ ಕೆ ಈ ಬಾರಿಗೆ ವಿಜಯ್ ರಾಘವೇಂದ್ರಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಸರಳವಾಗಿ ನಡೆದ ಸಿನಿಮಾದ ಮುಹೂರ್ತ FIR 6 to 6 ಎಂಬ ಕ್ಯಾಚಿ ಟೈಟಲ್ ಹೊಂದಿದ್ದು ಇತ್ತೀಚೆಗೆ ಬೆಂಗಳೂರಿನ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿತು. ನಟಿ ಪ್ರಿಯಾಂಕಾ ಉಪೇಂದ್ರ, ವಿಜಯರಾಘವೇಂದ್ರ ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದರು.
ಸರಳವಾಗಿ ನಡೆದ ಸಿನಿಮಾದ ಮುಹೂರ್ತ ಸಸ್ಪೆನ್ಸ್ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ FIR 6 to 6 ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಇನ್ನು ವಿಜಯ್ ಜೋಡಿಯಾಗಿ ಅಕ್ಷಿತಾ ಬೋಪಯ್ಯ ನಟಿಸುತ್ತಿದ್ದು, ಉಳಿದಂತೆ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಎಸ್ ಕೆ ನಾಗೇಂದ್ರ ಅರಸ್, ಶ್ರೀ ರಾಜು ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಸರಳವಾಗಿ ನಡೆದ ಸಿನಿಮಾದ ಮುಹೂರ್ತ ಯಶ್ ಫಿಲ್ಮಂ ಪ್ರೊಡಕ್ಷನ್ ಬ್ಯಾನರ್ ನಡಿ ಭಾಗ್ಯ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಸ್.ಕೆ.ನಾಗೇಂದ್ರ ಅರಸ್ ಸಂಕಲನ, ಸತೀಶ್ ಬಾಬು ಸಂಗೀತ ನಿರ್ದೇಶನ ಹಾಗೂ ಓಂ.ಜಿ ಛಾಯಾಗ್ರಹಣ FIR 6 to 6 ಸಿನಿಮಾಕ್ಕಿದೆ. ವಿಶೇಷವಾಗಿ ಓಂ ಜಿ ಈ ಸಿನಿಮಾಗೆ ಐದು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ವಿಜಯ್ ರಾಘವೇಂದ್ರ ಅವರ ಹೊಸ ಗೆಟಪ್ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.
ಸರಳವಾಗಿ ನಡೆದ ಸಿನಿಮಾದ ಮುಹೂರ್ತ