ಮುಂಬೈ: ಗ್ಲೋಬಲ್ ಐಕಾನ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ನಲ್ಲಿ ತಮಗೆ ಆದಾ ಕಹಿ ಘಟನೆಗಳು ಕುರಿತು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಹೇಗೆ ಬಾಲಿವುಡ್ ತಮ್ಮನ್ನು ನಡೆಸಿಕೊಂಡಿತು ಎಂಬ ಬಗ್ಗೆ ಅವರು ಮಾತನಾಡಿದ್ದರು. ಅದೇ ರೀತಿ ತಮ್ಮ ಸಿನಿ ಜೀವನದ ಆರಂಭ ಸಮಯದಲ್ಲಿ ಚಿತ್ರ ನಿರ್ದೇಶಕರೊಬ್ಬರು ತಮ್ಮನ್ನು ಅಂಡರ್ವೇರ್ನಲ್ಲಿ ನೋಡಲು ಬಯಸಿದ್ದರು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೊಂದು ಅಮಾನವೀಯ ಘಟನೆಯಾಗಿದ್ದು, ಇದರಿಂದಾಗಿ ಚಿತ್ರದಿಂದ ಹೊರ ನಡೆದಿದ್ದಾಗಿ ತಿಳಿಸಿದ್ದಾರೆ.
2002 ಅಥವಾ 2003ರಲ್ಲಿ ನಾನು ಅಂಡರ್ಕವರ್ನಲ್ಲಿದ್ದು, ಹುಡುಗನನ್ನು ಮೋಹಿಸುವ ಪಾತ್ರ ನಿರ್ವಹಿಸುತ್ತಿದ್ದೆ. ಈ ವೇಳೆ ನನ್ನ ಬಟ್ಟೆಗಳನ್ನು ತೆಗೆಯಬೇಕಿತ್ತು. ಈ ವೇಳೆ ಚಿತ್ರ ನಿರ್ದೇಶಕರು ನನ್ನನ್ನು ಅಂಡರ್ವೇರ್ನಲ್ಲಿ ನೋಡ ಬಯಸಿದ್ದರು. ಇದರ ಕುರಿತು ಮಾತನಾಡಿದ ನಿರ್ದೇಶಕರು. ಈ ರೀತಿ ಮಾಡದಿದ್ದರೆ, ಯಾರಾದರೂ ಯಾತಕ್ಕಾಗಿ ಈ ಸಿನಿಮಾವನ್ನು ಬಂದು ನೋಡಬೇಕು ಎಂದು ಪ್ರಶ್ನಿಸಿದ್ದರು ಎಂದು ತಿಳಿಸಿದರು.
ಈ ವಿಚಾರವನ್ನು ನಿರ್ದೇಶಕರು ನೇರವಾಗಿ ನನಗೆ ಹೇಳಿಲಿಲ್ಲ. ನನ್ನ ಸ್ಟೈಲಿಶ್ ಮುಂದೆ ಇದನ್ನು ತಿಳಿಸಿದರು. ಇದು ನಿಜಕ್ಕೂ ಅಮಾನವೀಯ ಘಟನೆ. ಇದರಿಂದಾಗಿಯೇ ಈ ಚಿತ್ರದಿಂದ ಹೊರ ನಡೆದೆ. ನನ್ನ ಕಲೆ ಇಲ್ಲಿ ಮುಖ್ಯವಾಗಿಲ್ಲ. ನಾನು ಕಲೆಗೆ ನೀಡಿದ ಸಮರ್ಪಣಾ ಭಾವನೆ ಮುಖ್ಯವಾಗಲಿಲ್ಲ. ಈ ಘಟನೆಯಾದ ಎರಡೇ ದಿನಕ್ಕೆ ನಾನು ಚಿತ್ರದಿಂದ ಹೊರ ನಡೆದೆ. ಈ ರೀತಿ ಮಾಡಿದ್ದಕ್ಕೆ ನಿರ್ಮಾಪಕರಿಗೆ ಹಣವನ್ನು ಮರಳಿ ನೀಡುವಂತೆ ನನ್ನ ತಂದೆ ಅಶೋಕ್ ಚೋಪ್ರಾ ತಿಳಿಸಿದರು.