ಕರ್ನಾಟಕ

karnataka

ETV Bharat / entertainment

ಬಹುಭಾಷಾ ನಟಿ ಪೂಜಾ ಹೆಗ್ಡೆಯ ಪ್ರೀತಿಯ ಅಜ್ಜಿ ಇನ್ನಿಲ್ಲ! - Pooja Hegde Grandmother death

ನಟಿ ಪೂಜಾ ಹೆಗ್ಡೆ ಅವರ ಅಜ್ಜಿ ನಿಧನರಾಗಿದ್ದಾರೆ.

Pooja Hegde Grandmother Passes Away
ನಟಿ ಪೂಜಾ ಹೆಗ್ಡೆ ಅಜ್ಜಿ ನಿಧನ

By ETV Bharat Karnataka Team

Published : Jan 13, 2024, 5:10 PM IST

ಬಹುಭಾಷಾ ನಟಿ ಪೂಜಾ ಹೆಗ್ಡೆ ಮನೆಯಲ್ಲೀಗ ಶೋಕದ ವಾತಾವರಣ. ನಟಿಯ ಪ್ರೀತಿಯ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಇದರಿಂದ ಹೆಗ್ಡೆ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಈ ವಿಚಾರವನ್ನು ಪೂಜಾ ತಮ್ಮ ಇನ್​ಸ್ಟಾಗ್ರಾಮ್​​​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಜ್ಜಿ ಜೊತೆಗಿನ ಸುಮಧುರ ಕ್ಷಣವನ್ನು ಹಂಚಿಕೊಂಡ ನಟಿ, 'ಅಜ್ಜಿ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅವರ ಇನ್​ಸ್ಟಾಗ್ರಾಮ್​ ಸ್ಟೋರಿ ಆನ್​ಲೈನ್​ನಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಸಾಂತ್ವನ ಸೂಚಿಸುತ್ತಿದ್ದಾರೆ.

ಇತ್ತೀಚೆಗಷ್ಟೇ 'ಬುಟ್ಟಬೊಮ್ಮ' ತಮ್ಮ ತಂಗಿ ಭೂಮಿ ಅವರ ವಿವಾಹ ಸಮಾರಂಭದ ಮೂಲಕ ಸದ್ದು ಮಾಡಿದ್ದರು. ಇದೀಗ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಈ ಹಿಂದೆ ಪೂಜಾ ತಮ್ಮ ಅಜ್ಜಿ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳೀಗ ಸೋಷಿಯಲ್​ ಮೀಡಿಯಾ ಮೂಲಕ ನಟಿಗೆ ಧೈರ್ಯ ತುಂಬುತ್ತಿದ್ದಾರೆ.

ಪೂಜಾ ಹೆಗ್ಡೆ ಅವರ ಕೊನೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಕಳೆದ ವರ್ಷ ಬಾಲಿವುಡ್‌ ಸಿನಿಮಾವೊಂದು ತೆರೆಕಂಡಿತ್ತು. ಸಲ್ಮಾನ್ ಖಾನ್ ಜೊತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ ವಿಚಾರದಲ್ಲಿ ಕೊಂಚ ಹಿನ್ನೆಡೆ ಕಂಡಿತು. ಅದಾದ ನಂತರ ಮಹೇಶ್ ಬಾಬು ಜೊತೆಗಿನ ಗುಂಟೂರ್ ಖಾರಂ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಈ ಚಿತ್ರದಿಂದ ಹೊರಬಂದಿದ್ದು, ಶೂಟಿಂಗ್​ ಡೇಟ್ಸ್ ಕೊರತೆ ಕಾರಣ ಎನ್ನಲಾಯ್ತು. ಸದ್ಯ ನಟಿಯ ಯಾವುದೇ ಸಿನಿಮಾದ ಅಪ್​ಡೇಟ್ಸ್ ಹೊರಬಿದ್ದಿಲ್ಲ.

ಇದನ್ನೂ ಓದಿ:ಹರಕೆ ಕೋಲ ಕೊಟ್ಟ 'ಕೊರಗಜ್ಜ' ಚಿತ್ರತಂಡ: ಶ್ರುತಿ, ಭವ್ಯ ಸೇರಿ ಚಿತ್ರತಂಡ ಭಾಗಿ

ಪೂಜಾ ಹೆಗ್ಡೆ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯ ಪೋಷಕರು ಮೂಲತಃ ಉಡುಪಿ ಜಿಲ್ಲೆಯವರು. 2010ರಲ್ಲಿ ''ಐ ಆ್ಯಮ್​ ಶಿ - ಮಿಸ್ ಯೂನಿವರ್ಸ್ ಇಂಡಿಯಾ'' ಸ್ಪರ್ಧೆಯಲ್ಲಿ ಸೆಕೆಂಡ್​ ರನ್ನರ್ ಅಪ್​ ಆಗಿ ಪೂಜಾ ಹೊರಹೊಮ್ಮಿದ್ದರು. 2012ರಲ್ಲಿ ಬಣ್ಣದ ಲೋಕ ಪ್ರವೇಶಿಸಿದರು. ತಮಿಳಿನ 'ಮುಗಮೂಡಿ' ನಟಿಯ ಚೊಚ್ಚಲ ಚಿತ್ರ. ಒಕ ಲೈಲಾ ಕೋಸಮ್​​, ಮುಕುಂದ, ಮೊಹೆಂಜೋದಾರೋ, ಸಾಕ್ಷ್ಯಂ, ಹೌಸ್​ಫುಲ್​ 4, ಮಹರ್ಷಿ, ಅಲ ವೈಕುಂಠಪುರಂಲೋ, ಬೀಸ್ಟ್, ರಾಧೆ ಶ್ಯಾಮ್​​, ಸರ್ಕಸ್, ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಡಿಸಿದ್ದಾರೆ. ಸೂಪರ್​ ಸ್ಟಾರ್​ಗಳ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದರೂ ಕೂಡ ನಟಿಯ ಇತ್ತೀಚಿನ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶ ಕಂಡಿಲ್ಲ. ನಿನ್ನೆ ತೆರೆಗಪ್ಪಳಿಸಿರೋ ಗುಂಟೂರು ಖಾರಂ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಮಹೇಶ್​ ಬಾಬು ಜೊತೆ ಯಂಗ್​​ ಸೆನ್ಸೇಶನಲ್ ಸ್ಟಾರ್ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾಗೂ ಮುನ್ನ ಪೂಜಾ ಹೆಗ್ಡೆ ಚಿತ್ರದ ನಾಯಕಿಯಾಗಿ ಆಯ್ಕೆ ಆಗಿದ್ದರು. ಮುಂದಿನ ಸಿನಿಮಾ ಘೋಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಸಿನಿಮಾ ಮೇಲೆ ಕುತೂಹಲ: '45' ಶೂಟಿಂಗ್​ ಫೋಟೋಗಳಿಲ್ಲಿವೆ

ABOUT THE AUTHOR

...view details