ಕರ್ನಾಟಕ

karnataka

ETV Bharat / entertainment

ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಹೆಗ್ಡೆ.. ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​ ಜೊತೆ ಕೇಕ್ ಕತ್ತರಿಸಿದ ಕನ್ನಡತಿ - Kisi Ka Bhai Kisi Ki Jaan

32ನೇ ವಸಂತಕ್ಕೆ ಕಾಲಿಟ್ಟಿರುವ ಬಹುಭಾಷಾ ನಟಿ ಪೂಜಾ ಹೆಗ್ಡೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಶೂಟಿಂಗ್​​ ಸೆಟ್‌ನಲ್ಲಿ ಬರ್ತ್​ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

Actress Pooja Hegde birthday
ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಹೆಗ್ಡೆ

By

Published : Oct 13, 2022, 4:45 PM IST

ಬಹುಭಾಷಾ ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 32ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಪೂಜಾ ಹೆಗ್ಡೆ ಅವರಿಗೆ ಆತ್ಮೀಯರು, ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

1990ರ ಅಕ್ಟೋಬರ್​ 13ರಂದು ಮುಂಬೈನಲ್ಲಿ ಜನಿಸಿದ ಪೂಜಾ ಹೆಗ್ಡೆ ಈಗ ಬೇಡಿಕೆಯ ನಟಿ. ಮಂಗಳೂರು ಮೂಲದ ಮಂಜುನಾಥ್ ಹೆಗ್ಡೆ ಮತ್ತು ಲತಾ ಹೆಗ್ಡೆ ಪೂಜಾ ಪೋಷಕರು. 2012 ರಲ್ಲಿ ತೆರೆ ಕಂಡ 'ಮುಗಮುಡಿ' ತಮಿಳು ಚಿತ್ರದ ಮೂಲಕ ಪೂಜಾ ಹೆಗ್ಡೆ ವೃತ್ತಿಜೀವನ ಆರಂಭಿಸಿದರು. ನಂತರ ತೆಲುಗು, ತಮಿಳು, ಹಿಂದಿ ಚಿತ್ರದಲ್ಲಿ ನಟಿಸಿ ಈಗ ಸಲ್ಮಾನ್ ಜೊತೆ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಶೂಟಿಂಗ್​ ಸೆಟ್​ನಲ್ಲಿ ಪೂಜಾ ಹೆಗ್ಡೆ ಬರ್ತ್ ಡೇ ಸೆಲೆಬ್ರೇಶನ್

ಪೂಜಾ ಹೆಗ್ಡೆ ಪ್ರಸ್ತುತ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಮುಂಬೈನ ಶೂಟಿಂಗ್​​ ಸೆಟ್‌ನಲ್ಲಿ ಪೂಜಾ ಅವರ ಬರ್ತ್​ ಡೇ ಸೆಲೆಬ್ರೇಷನ್ ಆಗಿದೆ. ತನ್ನ ಕೆಲಸದ ಹುಟ್ಟುಹಬ್ಬದ ಕುರಿತು ಮಾತನಾಡಿದ ಪೂಜಾ, "ಹೊಸ ವರ್ಷಕ್ಕೆ ಕಾಲಿಡಲು, ನಾನು ಇಷ್ಟಪಡುವುದನ್ನು (ಶೂಟಿಂಗ್) ಮಾಡುವುದಕ್ಕಿಂತ ಉತ್ತಮವಾದ ಮಾರ್ಗ ಬೇರೆ ಇಲ್ಲ ಎಂದು ಭಾವಿಸುತ್ತೇನೆ'' ಎಂದು ತಿಳಿಸಿದ್ದಾರೆ.

ಕಾಲೇಜು ದಿನಗಳಲ್ಲೇ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಇವರು 2010ರ ಮಿಸ್‌ ಯೂನಿವರ್ಸ್‌ ಇಂಡಿಯಾ ಬ್ಯೂಟಿ ಸ್ಪರ್ಧೆಯಲ್ಲಿ ಸೆಕೆಂಡ್‌ ರನ್ನರ್‌ ಅಪ್‌ ಸ್ಥಾನ ಪಡೆದರು. ಪೂಜಾ ತಮ್ಮ ಮೊದಲ ಚಿತ್ರ 'ಮುಗಮುಡಿ' ಅಲ್ಲಿ ನಟ ಜೀವಾಗೆ ನಾಯಕಿಯಾಗಿ ನಟಿಸಿದ್ದರು. ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಂತೆ ತೆಲುಗಿನಲ್ಲೂ ನಟಿಸುವ ಅವಕಾಶ ದೊರೆಯಿತು. 'ಒಕ ಲೈಲಾ ಕೋಸಂ' ಚಿತ್ರದಲ್ಲಿ ಪೂಜಾ ಅಕ್ಕಿನೇನಿ ನಾಗಾರ್ಜುನ ಜೊತೆ ನಾಯಕಿಯಾಗಿ ನಟಿಸಿದರು.

ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಸೌಂದರ್ಯದ ಖನಿ.. ಸೀರೆಯಲ್ಲಿ ದುಪ್ಪಟ್ಟಾಯ್ತು ಪೂಜಾ ಹೆಗ್ಡೆ ಅಂದಚೆಂದ

2016 ರಲ್ಲಿ ಬಾಲಿವುಡ್‌ಗೆ ಪ್ರಯಾಣ ಬೆಳೆಸಿದ ಪೂಜಾ 'ಮೊಹೆಂಜೊದಾರೋ' ಚಿತ್ರದಲ್ಲಿ ಹೃತಿಕ್‌ ರೋಷನ್‌ಗೆ ನಾಯಕಿ ಅಭಿನಯಿಸಿದರು. ಸದ್ಯ ಹಿಂದಿಯ ಸರ್ಕಸ್‌, ಕಿಸಿ ಕಾ ಭಾಯ್ ಕಿಸಿ ಕಾ ಜಾನ್‌ ಹಾಗೂ ಮತ್ತೆ ಮಹೇಶ್‌ ಬಾಬು SSMB 28 ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈವರೆಗೆ ಅಲ್ಲು ಅರ್ಜುನ್‌, ಮಹೇಶ್‌ ಬಾಬು, ಜ್ಯೂನಿಯರ್‌ ಎನ್‌ಟಿಆರ್‌, ವರುಣ್‌ ತೇಜ್‌, ಪ್ರಭಾಸ್‌ನಂತ ಸ್ಟಾರ್‌ ನಟರೊಂದಿಗೆ ಪೂಜಾ ಹೆಗ್ಡೆ ನಟಿಸಿದ್ದಾರೆ.

ABOUT THE AUTHOR

...view details