ಸ್ಯಾಂಡಲ್ವುಡ್ನಲ್ಲಿ ಮುಂಗಾರು ಮಳೆ ಸಿನಿಮಾ ಯಶಸ್ಸಿನ ಮೂಲಕ ಬಹುಬೇಡಿಕೆ ನಟಿಯಾಗಿ ಮಿಂಚಿದ ಪೂಜಾ ಗಾಂಧಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 39ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಅವರಿಗೆ ಆತ್ಮೀಯರು, ಸಿನಿರಂಗ ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
1973ರ ಅಕ್ಟೋಬರ್ 7ರಂದು ಉತ್ತರ ಪ್ರದೇಶದ ಮೀರತ್ನಲ್ಲಿ ಪೂಜಾ ಗಾಂಧಿ ಜನಿಸಿದರು. ಇವರ ಮೂಲ ಹೆಸರು ಸಂಜನಾ ಗಾಂಧಿ. ಮೊದಲು ಆ್ಯಡ್ ಹಾಗೂ ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದ ಅವರು ಮುಂಗಾರು ಮಳೆ ಸಿನಿಮಾ ಯಶಸ್ಸಿನ ಮೂಲಕ ಬಹು ಬೇಡಿಕೆ ನಟಿ ಆದರು.
ಮುಂಗಾರು ಮಳೆ ಸಿನಿಮಾ ಸೂಪರ್ ಹಿಟ್ ಆದ ನಂತರ ಪೂಜಾ ಗಾಂಧಿಗೆ ಬೇಡಿಕೆ ಹೆಚ್ಚಿತ್ತು. ಇದಾದ ಬಳಿಕ ಪೂಜಾ ಗಾಂಧಿ ಕಾಲ್ಶೀಟ್ಗಾಗಿ ನಿರ್ಮಾಪಕರು ಮುಗಿ ಬೀಳುತ್ತಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡರು.
ಇದನ್ನೂ ಓದಿ:ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ: ಕುತೂಹಲ ಹೆಚ್ಚಿಸಿದ ಒಂದು ಫೋಟೋ
ಒಂದು ದಶಕ ಅವಧಿಯಲ್ಲಿ ಮಿಲನ, ಕೃಷ್ಣ, ಮನ್ಮಥ, ಹನಿ ಹನಿ, ಆ್ಯಕ್ಸಿಡೆಂಟ್, ನೀ ಟಾಟಾ ನಾ ಬಿರ್ಲಾ, ತಾಜ್ಮಹಲ್, ಬುದ್ದಿವಂತ, ಹುಚ್ಚಿ, ಗೋಕುಲ, ದಂಡುಪಾಳ್ಯ, ನಿನಗಾಗಿ ಕಾದಿರುವೆ, ಕೋಡಗನ ಕೋಳಿ ನುಂಗಿತ್ತಾ, ಹೀಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.