ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಯಾಂಡಲ್ವುಡ್ ನಟ ಅನಿರುದ್ಧ್ ಜತ್ಕರ್. ಇವರು ನಾಯಕರಾಗಿ ನಟಿಸಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ 'chef ಚಿದಂಬರ'. ರಾಘು ಸಿನಿಮಾ ಖ್ಯಾತಿಯ ಎಂ. ಆನಂದರಾಜ್ ನಿರ್ದೇಶನದ ಶೆಫ್ ಚಿದಂಬರ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಚಿತ್ರತಂಡಕ್ಕೆ 'ಪಂಚರಂಗಿ' ಬೆಡಗಿ ನಿಧಿ ಸುಬ್ಬಯ್ಯ ಎಂಟ್ರಿಯಾಗಿದ್ದಾರೆ. ಅವರ ಪಾತ್ರ ಪರಿಚಯದ ಪೋಸ್ಟರ್ ಅನಾವರಣಗೊಂಡಿದೆ.
'chef ಚಿದಂಬರ' ಸಿನಿಮಾದಲ್ಲಿ ಮೋನ ಎಂಬುದು ನಿಧಿ ಸುಬ್ಬಯ್ಯ ಅವರ ಪಾತ್ರದ ಹೆಸರು. ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ನಿಧಿ ಕೈಯಲ್ಲಿ ಬೇಡಿ ಹಿಡಿದು ನಿಂತಿದ್ದಾರೆ. ಹಾಗಾದ್ರೆ ಚಿತ್ರದಲ್ಲಿ ಅವರ ಪಾತ್ರ ಏನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಬಹಳ ದಿನಗಳ ನಂತರ ನಿಧಿ ಸುಬ್ಬಯ್ಯ ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಪೋಸ್ಟರ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮಗೆ ಕುತೂಹಲ ಮೂಡಿಸಿರುವ ನಿಧಿ ಅವರ ಪಾತ್ರದ ಪರಿಚಯ ಅಗಬೇಕೆಂದರೆ ನೀವು ಸಿನಿಮಾವನ್ನೇ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಆನಂದರಾಜ್.
ಇದನ್ನೂ ಓದಿ:'chef ಚಿದಂಬರ' ಚಿತ್ರೀಕರಣ ಮುಕ್ತಾಯ... ಮೇಕಿಂಗ್ ವಿಡಿಯೋ ನೋಡಿ
ಈ ಚಿತ್ರದಲ್ಲಿ ಅನಿರುದ್ಧ್ ಅವರಿಗೆ ನಾಯಕಿಯಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಕೂಡ ಅಭಿನಯಿಸಿದ್ದಾರೆ. ಸದ್ಯ ನಿಧಿ ಸುಬ್ಬಯ್ಯ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರದಲ್ಲಿ ಇವರ ಜೊತೆಗೆ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು ಅಭಿನಯಿಸಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.
'chef ಚಿದಂಬರ' ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಆನಂದರಾಜ್ ಅವರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, 'ವಿಕ್ರಾಂತ್ ರೋಣ' ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ chef ಚಿದಂಬರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ:'Chef ಚಿದಂಬರ' ಮಾತಿನ ಮನೆಯಲ್ಲಿ ಅನಿರುದ್ಧ್ ಜತ್ಕರ್: ಡಬ್ಬಿಂಗ್ ಕೆಲಸ ಚುರುಕು