ಕರ್ನಾಟಕ

karnataka

ETV Bharat / entertainment

ನೀತು ಕಪೂರ್ ಜನ್ಮದಿನಕ್ಕೆ ವಿಶೇಷವಾಗಿ ಶುಭ ಕೋರಿದ ಸೊಸೆ ಆಲಿಯಾ ಭಟ್ - ಆಲಿಯಾ ಭಟ್

ಇಟಲಿಯಲ್ಲಿ ಹಿರಿಯ ನಟಿ ನೀತು ಕಪೂರ್ ಜನ್ಮದಿನ ಆಚರಿಸಿಕೊಂಡಿದ್ದಾರೆ.

Neetu Kapoor birthday
ನೀತು ಕಪೂರ್ ಜನ್ಮದಿನ

By

Published : Jul 8, 2023, 1:08 PM IST

ಹಿರಿಯ ನಟಿ ನೀತು ಕಪೂರ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 65ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಿವುಡ್​​ ತಾರೆಗೆ ಕುಟುಂಬಸ್ಥರು, ಸಿನಿ ಸಹುದ್ಯೋಗಿಗಳು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಸೊಸೆ, ನಟಿ ಆಲಿಯಾ ಭಟ್ ಇನ್​ಸ್ಟಾಗ್ರಾಮ್​​ ಸ್ಟೋರಿಸ್‌ನಲ್ಲಿ ಸುಂದರ ಪೋಸ್ಟ್ ಒಂದನ್ನು ಹಂಚಿಕೊಂಡರೆ, ಮಗಳು ರಿಧಿಮಾ ಕಪೂರ್ ಸಾಹ್ನಿ ಮತ್ತು ಮಗ ರಣ್​​ಬೀರ್ ಕಪೂರ್ ಕೂಡ ತಾಯಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ಇಂದು ನಟಿ ಆಲಿಯಾ ಭಟ್​​ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅತ್ತೆ ನೀತು ಕಪೂರ್​ ಅವರ ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋ ಹಂಚಿಕೊಂಡಿದ್ದಾರೆ. ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ, "ಹುಟ್ಟುಹಬ್ಬದ ಶುಭಾಶಯಗಳು ರಾಣಿ. ನೀವು ಎಲ್ಲವನ್ನೂ ಅದ್ಭುತಗೊಳಿಸುತ್ತೀರಿ, ಲವ್ ಯು" ಎಂದು ಬರೆದುಕೊಂಡಿದ್ದಾರೆ. ಆಲಿಯಾ ಮತ್ತೊಂದು ಫೋಟೋವನ್ನೂ ಹಂಚಿಕೊಂಡಿದ್ದು, ನಟಿ ನೀತು ಕಪೂರ್ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಕಪೂರ್ ಫ್ಯಾಮಿಲಿ ನಟಿ ನೀತು ಅವರ ಹುಟ್ಟುಹಬ್ಬವನ್ನು ಇಟಲಿಯಲ್ಲಿ ಆಚರಿಸಿದೆ. ರಣ್​​ಬೀರ್ ತಮ್ಮ ಸಹೋದರಿ ರಿಧಿಮಾ ಮತ್ತು ಸಂಬಂಧಿ ಸಮರಾ ಜೊತೆ ತಾಯಿಯ ಹುಟ್ಟುಹಬ್ಬ ಆಚರಿಸಲು ಇಟಲಿಯ ಪೋರ್ಟೋಫಿನೋಗೆ ಹೊರಟ ವೇಳೆ ಪಾಪರಾಜಿಗಳ ಕ್ಯಾಮರಾಗಳಲ್ಲಿ ಸೆರೆಯಾದರು. ರಿಧಿಮಾ ಅವರ ಪತಿ ಭರತ್ ಸಾಹ್ನಿ ಕೂಡ ಇಟಲಿಯಲ್ಲಿ ನೀತು ಅವರ ಹುಟ್ಟುಹಬ್ಬವನ್ನು ಆಚರಿಸಲು ಕಪೂರ್‌ ಫ್ಯಾಮಿಲಿಯೊಂದಿಗೆ ಸೇರಿಕೊಂಡರು. ಇಟಲಿಯಲ್ಲಿ ನಟಿ ನೀತು ಕಪೂರ್ ಬರ್ತ್​ ಡೇ ಸೆಲೆಬ್ರೇಶನ್​ ಆಗಿದ್ದು, ಸೊಸೆ ಆಲಿಯಾ ಮತ್ತು ಮೊಮ್ಮಗಳು ರಾಹಾ ಅವರು ಈ ಕಾರ್ಯಕ್ರಮವನ್ನು ಮಿಸ್​ ಮಾಡಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ರಿಧಿಮಾ ಅವರು ರಣ್​​ಬೀರ್, ಭರತ್, ಸಮರಾ ಮತ್ತು ನೀತು ಕಪೂರ್​ ಅವರನ್ನೊಳಗೊಂಡ ಬ್ಯೂಟಿಫುಲ್​ ಫ್ಯಾಮಿಲಿ ಫೋಟೋ ಶೇರ್ ಮಾಡಿದ್ದಾರೆ. ಹುಟ್ಟುಹಬ್ಬ ಹಿನ್ನೆಲೆ ತನ್ನ ತಾಯಿಗೆ ಶುಭ ಕೋರಿದ ರಿಧಿಮಾ, "ಹ್ಯಾಪಿ ಬರ್ತ್ ಡೇ ಮಾ, ನಾವು ನಿಮ್ಮನ್ನು ಆರಾಧಿಸುತ್ತೇವೆ, ನೀವು ನಮ್ಮ ಕುಟುಂಬದ ಬೆನ್ನೆಲುಬು (ಆಲಿಯಾ ಭಟ್​, ಬೇಬಿ ರಾಹಾ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ)" ಎಂದು ಬರೆದುಕೊಂಡಿದ್ದಾರೆ. ನೀತು ಕಪೂರ್​ ಕೂಡ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯ ಆಲಿಯಾ ಮತ್ತು ರಾಹಾಳನ್ನು ಮಿಸ್​ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ.

ಹಬೀಬ್ ಫೈಸಲ್ ನಿರ್ದೇಶನದ ಜುಗ್ ಜಗ್ ಜೀಯೋ ಸಿನಿಮಾದಲ್ಲಿ ನೀತು ಕಪೂರ್​ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅನಿಲ್ ಕಪೂರ್, ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ಒಳಗೊಂಡಿದ್ದ ದೊಡ್ಡ ತಾರಾಗಣದಲ್ಲಿ ನಟ ನೀತು ಕಪೂರ್​ ಕೂಡ ಓರ್ವರು. ನೀತು ಅವರು ಗೀತಾ ಪಾತ್ರವನ್ನು ನಿರ್ವಹಿಸಿದ್ದರು.

ಇದನ್ನೂ ಓದಿ:Salaar: 100 ಮಿಲಿಯನ್​ ವೀಕ್ಷಣೆ ದಾಟಿದ 'ಸಲಾರ್​' ಟೀಸರ್​; ಆಗಸ್ಟ್​ ಕೊನೆಯಲ್ಲಿ ಟ್ರೇಲರ್​ಗೆ ಮುಹೂರ್ತ

ABOUT THE AUTHOR

...view details