ಕರ್ನಾಟಕ

karnataka

ETV Bharat / entertainment

ಆರು ತಿಂಗಳ ಬಳಿಕ ಅವಳಿ ಮಕ್ಕಳ ಹೆಸರು ರಿವೀಲ್​ ಮಾಡಿದ ನಟಿ ನಯನತಾರಾ - ಈಟಿವಿ ಭಾರತ ಕನ್ನಡ

ಬಹುಭಾಷಾ ನಟಿ ನಯನತಾರಾ ತಮ್ಮ ಅವಳಿ ಮಕ್ಕಳ ಹೆಸರನ್ನು ಆರು ತಿಂಗಳ ಬಳಿಕ ಬಹಿರಂಗಪಡಿಸಿದ್ದಾರೆ.

Actress Nayanthara
ಅವಳಿ ಮಕ್ಕಳ ಹೆಸರು ರಿವೀಲ್​ ಮಾಡಿದ ನಟಿ ನಯನತಾರಾ

By

Published : Apr 3, 2023, 5:59 PM IST

ಬಹುಭಾಷಾ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್​ ಜೋಡಿ ಮದುವೆ ಆದಾಗಿನಿಂದಲೂ ಸುದ್ದಿಯಲ್ಲಿದ್ದಾರೆ.​ ಏಳು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ದಾಂಪತ್ಯಕ್ಕೆ ಕಾಲಿಟ್ಟರು. ಕೆಲ ತಿಂಗಳ ನಂತರ ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಗಂಡು ಮಕ್ಕಳನ್ನು ಪಡೆದರು. ಅದಾಗಿ ಇಲ್ಲಿಯವರೆಗೂ ನಟಿ ತಮ್ಮ ಮಕ್ಕಳಿಬ್ಬರ ಮುಖವನ್ನು ಕ್ಯಾಮರಾ ಕಣ್ಣಿನಿಂದ ಮರೆ ಮಾಚಿದ್ದರು. ಅವರು ಶೇರ್​ ಮಾಡುವ ಫೋಟೋಗಳಲ್ಲಿ ಮಗುವಿನ ಮುಖ ಕಾಣದಂತೆ ಹೈಡ್​ ಮಾಡಿದ್ದಾರೆ.

ಈ ನಡುವೆ ನಟಿ ತಮ್ಮ ಮಕ್ಕಳಿಬ್ಬರ ಪೂರ್ಣ ಹೆಸರನ್ನು ಸೋಷಿಯಲ್​ ಮೀಡಿಯಾದ ಮೂಲಕ ರಿವೀಲ್ ಮಾಡಿದ್ದಾರೆ​. ಸಿನಿಮಾದ ಜೊತೆಗೆ ವೈಯಕ್ತಿಕ ಜೀವನ ಎರಡನ್ನು ನಯನತಾರಾ ಬ್ಯಾಲೆನ್ಸ್​ ಮಾಡುತ್ತಿದ್ದಾರೆ. ಈ ಮಧ್ಯೆ ಒಬ್ಬ ತಾಯಿಯಾಗಿ ಮಕ್ಕಳ ಜೊತೆಗೂ ಟೈಮ್​ ಸ್ಪೆಂಡ್​ ಮಾಡುತ್ತಾರೆ. ಇದೀಗ ಅವಳಿ ಮಕ್ಕಳ ಪೂರ್ಣ ಹೆಸರನ್ನು ನಟಿ ಬಹಿರಂಗಪಡಿಸಿದ್ದಾರೆ. ಮೊದಲ ಮಗನ ಹೆಸರು ಉಯಿರ್​ ರುದ್ರೋನಿಲ್​ ಎನ್​ ಶಿವನ್​ ಮತ್ತು ಎರಡನೇ ಮಗನ ಹೆಸರು ಉಲಗ್​ ದೈವಿಕ್​ ಎನ್​ ಶಿವನ್​ ಎಂಬುದಾಗಿ ತಿಳಿಸಿದ್ದಾರೆ.

ನಯನತಾರಾ ಅವಳಿ ಮಕ್ಕಳ ವಿವಾದ: ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ರ ಜೂನ್​ 9 ರಂದು ಮದುವೆಯಾಗಿದ್ದರು. ಅಕ್ಟೋಬರ್ 9 ರಂದು ಅವಳಿ ಗಂಡು ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದರು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಬಾಡಿಗೆ ತಾಯ್ತನ ಹೇಗೆ ಸಾಧ್ಯ? ಎಂದು ಹಲವು ನೆಟಿಜನ್‌ಗಳು ಚರ್ಚಿಸಿದ್ದರು. ಭಾರತದಲ್ಲಿ ಬಾಡಿಗೆ ತಾಯ್ತನ ಪದ್ಧತಿ ನಿಷೇಧವಿದೆ. ಹಾಗಾಗಿ ಹೇಗೆ ಮಕ್ಕಳಾದವು? ಎಂದು ಕೇಳಿದ್ದರು. ವಿವಾದದ ನಡುವೆ ತಮಿಳುನಾಡು ಸರ್ಕಾರ ತನಿಖಾ ಸಮಿತಿ ರಚಿಸಿತ್ತು. ಬಳಿಕ ಸರಿಯಾದ ದಾಖಲೆಗಳಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದರು.

ಇದನ್ನೂ ಓದಿ:ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ಇನ್ನೂ ಸಿನಿಮಾ ವಿಚಾರವಾಗಿ ನೋಡುವುದಾದರೆ, ನಯನತಾರಾ ಬಾಲಿವುಡ್​ ನಟ ಶಾರುಖ್​ ಖಾನ್​ ಜೊತೆ ಜವಾನ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಂಗ್​ ಖಾನ್​ ಜೊತೆ ಲೇಡಿ ಸ್ಟಾರ್​ ಅನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಅಟ್ಲಿ ಆ್ಯಕ್ಷನ್​ ಕಟ್​ ಹೇಳಿದ್ದು, ಜೂನ್​ನಲ್ಲಿ ಸಿನಿಮಾ ರಿಲೀಸ್​ ಆಗಲಿದೆ. ಚಿತ್ರದಲ್ಲಿ ತಮಿಳು ನಟ ವಿಜಯ್​ ಸೇತುಪತಿ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಕೂಡ ನಟಿಸಿದ್ದಾರೆ. ಮತ್ತೊಂದೆಡೆ ನಯನತಾರಾ ಅವರು ಲೇಡಿ ಸೂಪರ್​ ಸ್ಟಾರ್​ 75 ನೇ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಈ ಸಿನಿಮಾವನ್ನು ನೀಲೇಶ್​ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮೊದಲು ಹಾರರ್​ ಥ್ರಿಲ್ಲರ್​ ಚಿತ್ರ ಕನೆಕ್ಟ್​ನಲ್ಲಿ ಕೊನೆಯದಾಗಿ ನಯನತಾರಾ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಮೂಲ ಮೈಸೂರು, 100ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ: ಪ್ರಭು ದೇವಗಿಂದು 50ನೇ ಜನ್ಮದಿನ ಸಂಭ್ರಮ

ABOUT THE AUTHOR

...view details