ಸ್ಯಾಂಡಲ್ವುಡ್ನಲ್ಲಿ ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಸಿನಿಮಾ ಎಂದರೆ ಅದು ಆಪರೇಷನ್ ಲಂಡನ್ ಕೆಫೆ. ಯುವನಟ ಕವೀಶ್ ಶೆಟ್ಟಿ ಮತ್ತು ನಟಿ ಮೇಘಾ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಕನ್ನಡ, ಮರಾಠಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಆಪರೇಷನ್ ಲಂಡನ್ ಕೆಫೆ ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ.
ಇನ್ನೊಂದೆಡೆ, ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿ ನಟಿ ಮೇಘಾ ಶೆಟ್ಟಿ ತಮ್ಮ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ. ಡಿ.ನಾಗಾರ್ಜುನ್ ಛಾಯಾಗ್ರಹಣ, ಪ್ರಾನ್ಷು ಝಾ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ವರದರಾಜ್ ಕಾಮತ್ ಕಲೆ, ವಿಕ್ರಂ ಮೋರ್ ಮಾಸ್ ಮಾದ ಸಾಹಸ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್ ಮತ್ತು ಕ್ಷಿತಿಜ್ ಪಟವರ್ಧನ್ ಸಾಹಿತ್ಯ ಚಿತ್ರಕ್ಕಿದೆ. ಚಿತ್ರದಲ್ಲಿ ಮರಾಠಿಯ ಹೆಸರಾಂತ ಶಿವಾನಿ ಸುರ್ವೆ, ವಿರಾಟ್ ಮಡಕೆ ಸಹಿತ ಅರ್ಜುನ್ ಕಾಪಿಕ್ಕಾಡ್ ಬಿ. ಸುರೇಶ್ ಇನ್ನಿತರ ಹೆಸರಾಂತ ಕಲಾವಿದರು ಬಣ್ಣ ಹಚ್ಚಿದ್ದಾರೆ.