ಕರ್ನಾಟಕ

karnataka

ETV Bharat / entertainment

BAD‌ ಸಿನಿಮಾದಲ್ಲಿ ಬೋಲ್ಡ್ ಹುಡುಗಿಯಾಗಿ ಟಗರು ಬೆಡಗಿ ಮಾನ್ವಿತಾ ಕಾಮತ್

ನಟಿ ಮಾನ್ವಿತಾ ಕಾಮತ್ 'BAD‌' ಸಿನಿಮಾದಲ್ಲಿ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

By

Published : Jul 14, 2023, 4:22 PM IST

Manvita Kamath entry to BAD movie
ಮಾನ್ವಿತಾ ಕಾಮತ್

ಕೆಂಡ ಸಂಪಿಗೆ, ಟಗರು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿರುವ ನಟಿ ಮಾನ್ವಿತಾ ಕಾಮತ್. ಶಿವ 123 ಸಿನಿಮಾದ ಬಳಿಕ ಮಾನ್ವಿತಾ ಕಾಮತ್​ ಅವರು ಪಿ.ಸಿ ಶೇಖರ್ ನಿರ್ದೇಶನದ "BAD" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ "BAD" ಸಿನಿಮಾ ತನ್ನ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಪ್ರಮುಖ ಪಾತ್ರಧಾರಿ ನಕುಲ್ ಗೌಡ ಅವರ ಲುಕ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೋಲ್ಡ್ ಕ್ಯಾರೆಕ್ಟರ್​ನಲ್ಲಿ ಮಾನ್ವಿತ ಕಾಮತ್: ನಟಿ ಮಾನ್ವಿತಾ ಕಾಮತ್ ಅವರ ಪಾತ್ರದ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ. ಶೇಖರ್, ''ಈ ಚಿತ್ರದಲ್ಲಿ ಮಾನ್ವಿತಾ ಅವರ ಪಾತ್ರದ ಹೆಸರು ಪವಿತ್ರ (ಪವಿ). ಅವರದ್ದು ಬೋಲ್ಡ್ ಕ್ಯಾರೆಕ್ಟರ್. ವಿಲೇಜ್ ಬ್ಯಾಕ್ ಡ್ರಾಪ್​ನಲ್ಲಿ ಅವರ ಸ್ಟೋರಿ ಸಾಗುತ್ತಾ ಹೋಗುತ್ತದೆ. ನಾನು ಈ ಮೊದಲೇ ತಿಳಿಸಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೇ ಇನ್ನೊಂದು ಪಾತ್ರ ಕೂಡ ಇದೆ. ಆ ಪಾತ್ರದಲ್ಲಿ ನಟಿ ಮಾನ್ವಿತಾ ಕಾಮತ್​ ಅಭಿನಯಿಸುತ್ತಿದ್ದಾರೆ ಎಂದು ತಿಳಿಸಿದರು.

ಮಾನ್ವಿತಾ ಕಾಮತ್

ಈವರೆಗೂ ನಿರ್ವಹಿಸಿರದ ಪಾತ್ರ: ನನಗೆ "BAD" ಚಿತ್ರದ ಪಾತ್ರ ಬಹಳ ಇಷ್ಟವಾಯಿತು. ಪವಿತ್ರ ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಕಾಸ್ಟ್ಯೂಮ್​ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ನಿರ್ದೇಶಕ ಪಿ.ಸಿ. ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್​​ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ನಿರ್ವಹಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಟಿ ಮಾನ್ವಿತಾ ಕಾಮತ್ ತಿಳಿಸಿದ್ದಾರೆ.

ಇದನ್ನೂ ಓದಿ:ಸಲ್ಲು ಫ್ಯಾನ್ಸ್​ಗೆ ಗುಡ್​ ನ್ಯೂಸ್​: ನಿರ್ಮಾಣಗೊಳ್ಳಲಿದೆ ಕಿಕ್​ 2 - ಸಕ್ಸಸ್​ ನಿರೀಕ್ಷೆಯಲ್ಲಿ ಸೂಪರ್​​ಸ್ಟಾರ್​

ಬ್ಯಾಡ್ ಚಿತ್ರತಂಡ: ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತಾ ಅಲ್ಲದೇ ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ. ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣ ಇದೆ. ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ. ರಾಜಶೇಖರ್ ಅವರ ಕಲಾ ನಿರ್ದೇಶನ "BAD" ನಿಮ್ಮ ಗಮನ ಸೆಳೆಯಲಿದೆ.

ಇದನ್ನೂ ಓದಿ:ಕಪ್ಪು ಸೀರೆಯಲ್ಲಿ ಕಂಗೊಳಿಸಿದ ಕಾಂತಾರ ನಟಿ.. ಅಭಿಮಾನಿಗಳ ಮನಸೂರೆಗೊಂಡ ಶಿವನ ಜೋಡಿ ಲೀಲಾ ಲುಕ್​​

ಬ್ಯಾಡ್ ಚಿತ್ರನಾಯಕ ಪ್ರಧಾನ ಚಿತ್ರವಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಇಲ್ಲಿನ ಆರು ಪಾತ್ರಗಳು ಪ್ರತಿನಿಧಿಸುತ್ತವೆ. ಈ ವರ್ಷದಲ್ಲೇ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ABOUT THE AUTHOR

...view details