ಕರ್ನಾಟಕ

karnataka

ETV Bharat / entertainment

ಕಮಲ್ ಹಾಸನ್ ನನ್ನನ್ನು 'ಕನ್ನ' ಎಂದು ಗುರುತಿಸಿದಾಗ ತುಂಬಾ ವಿಶೇಷ ಎನಿಸಿತು: ನಟಿ ಮಾಲಾಶ್ರೀ ಟ್ವೀಟ್ - Malashri tweet about Kamal Haasan

ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟ ಕಮಲ್ ಹಾಸನ್​ ಬಳಿ ನಟಿ ಮಾಲಾಶ್ರೀ ತೆರಳಿ ಬಹಳ ಸಂತೋಷದಿಂದ ಮಾತನಾಡಿದ್ದಾರೆ. ಈ ಬಗ್ಗೆ ನಟಿ ಮಾಲಾಶ್ರೀ ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Malashri  met Kamal Haasan
ಕಮಲ್ ಹಾಸನ್ ಮಾಲಾಶ್ರೀ ಭೇಟಿ

By

Published : Sep 13, 2022, 1:49 PM IST

ದಕ್ಷಿಣ ಭಾರತ ಚಿತ್ರರಂಗದವರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022 ಈ ಬಾರಿ ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ಅವರ ನೆನಪಿನೊಂದಿಗೆ ಸೆಪ್ಟೆಂಬರ್​ 10, 11ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು. ಕಳೆದ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿನಿಮಾ ರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಸಮಾರಂಭದಲ್ಲಿದ್ದ ಹಿರಿಯ ನಟ ಕಮಲ್ ಹಾಸನ್​ ಬಳಿ ನಟಿ ಮಾಲಾಶ್ರೀ ತೆರಳಿ ಬಹಳ ಸಂತೋಷದಿಂದ ಮಾತನಾಡಿದ್ದಾರೆ. ಈ ಕಲಾವಿದರು ಉಭಯಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ಮಾಲಾಶ್ರೀ ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಐಕಾನ್ ಕಮಲ್ ಹಾಸನ್​ ಅವರನ್ನು ಭೇಟಿ ಮಾಡಿದ್ದು ಬಹಳ ಸಂತೋಷಕರ ವಿಷಯ. ನೀಲ ಮಲರ್ಗಲ್​ ಸಿನಿಮಾದಲ್ಲಿ ನಿರ್ವಹಿಸಿದ್ದ ಕನ್ನ ಪಾತ್ರ ನೆನಪಿಸಿಕೊಂಡಾಗ ತುಂಬಾ ವಿಶೇಷ ಅನಿಸಿತು. ಬಾಲ್ಯದಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದು, ತುಂಬಾ ಹೆಮ್ಮೆಯ ವಿಷಯ ಎಂದು ನಟಿ ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ. 1979ರಲ್ಲಿ ತರೆಕಂಡ ಕಮಲ್​ ಹಾಸನ್ ಅಭಿನಯದ Neela Malargal ಸಿನಿಮಾದಲ್ಲಿ ಮಾಲಾಶ್ರೀ ಕನ್ನನ್ (ಬಾಲಕಿ ಪಾತ್ರ) ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ:ಕ್ರಿಕೆಟ್ ಆಟಗಾರನಾಗಿ ಗೋಲ್ಡನ್​ ಸ್ಟಾರ್​ ಗಣೇಶ್.. ಬಾನ ದಾರಿಯಲ್ಲಿ ಚಿತ್ರೀಕರಣ

ABOUT THE AUTHOR

...view details