ಮುಂಬೈ: ನಟಿ ಮಲೈಕಾ ಆರೋರಾ ಅವರ ತಂದೆ ಅನಿಲ್ ಆರೋರಾ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ. ತಂದೆ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಮಲೈಕಾ ಆರೋರಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ತಾಯಿ ಜೊಯ್ಸೆ ಜೊತೆಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಹೊರ ಬರುತ್ತಿರುವ ಅವರ ವಿಡಿಯೋ ಇದೀಗ ವೈರಲ್ ಆಗಿದೆ.
ಮಲೈಕಾ, ತಾಯಿ ಜೊತೆಗೆ ಮುಂಬೈನ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ದೃಶ್ಯವನ್ನು ಪಾಪರಾಜಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಲೈಕಾ ತಾಯಿಗೆ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತುಕೊಳ್ಳಲು ಸಹಾಯ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಮಲೈಕಾ ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಅವರ ಪ್ರಸ್ತುತ ಡೇಟಿಂಗ್ ನಡೆಸುತ್ತಿರುವ ಬಾಲಿವುಡ್ ಗೆಳೆಯ ಅರ್ಜುನ್ ಕಪೂರ್ ಕಂಡು ಬಂದಿಲ್ಲ.
ನಟಿ ಮಲೈಕಾ ಮತ್ತು ನಟ ಅರ್ಜುನ್ ಕಪೂರ್ ದೀರ್ಘಕಾಲದಿಂದ ಸಂಬಂಧದಲ್ಲಿದ್ದು, ತಮ್ಮ ಈ ಸಂಬಂಧವನ್ನು ನಟ ಅರ್ಜುನ್ ಕಪೂರ್ ಒಪ್ಪಿಕೊಂಡಿದ್ದಾರೆ. ಅವರ ಸಂಬಂಧಗಳ ಕುರಿತು ಅನೇಕ ವಿವಾದಗಳ ಹೊರತಾಗಿ ನಟಿ ಮಲೈಕಾ ಅವರನ್ನು ನಟ ಅರ್ಜುನ್ ಕಪೂರ್ ಬೆಂಬಲಿಸಿದ್ದಾರೆ. ಬಹು ಅಂತರದ ಈ ಸಂಬಂಧಗಳ ಬಗ್ಗೆ ಭಾರಿ ಟೀಕೆ ವ್ಯಕ್ತವಾದರೂ ಈ ಬಗ್ಗೆ ಅರ್ಜುನ್ ತಲೆಕೆಡಿಸಿಕೊಂಡಿಲ್ಲ. ಈ ಇಬ್ಬರೂ ಪರ್ಫೆಕ್ಟ್ ಕಪಲ್ ಆಗಿ ಇದೀಗ ಮಿಂಚುತ್ತಿದ್ದಾರೆ.