ಕರ್ನಾಟಕ

karnataka

ETV Bharat / entertainment

''I said Yes''.. ಮಲೈಕಾ-ಅರ್ಜುನ್ ಮದುವೆ.. ಅಭಿಮಾನಿಗಳ ಚರ್ಚೆ ಜೋರು - malaika arjun marriage

ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಫೋಟೋ ಶೇರ್ ಮಾಡಿರುವ ನಟಿ ಮಲೈಕಾ ಅರೋರಾ, ''I said Yes'' ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ.

Actress malaika arora marriage
ಮಲೈಕಾ ಅರ್ಜುನ್ ಮದುವೆ

By

Published : Nov 10, 2022, 1:03 PM IST

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಹಸೆಮಣೆ ಏರುತ್ತಾರೆಂಬ ಗಾಸಿಪ್​ ಸುದ್ದಿಗೆ ರೆಕ್ಕೆಪುಕ್ಕ ಸಿಕ್ಕಿದೆ. ಹೌದು, ಮಲೈಕಾ ತಮ್ಮ ಹೊಸ ಪೋಸ್ಟ್ ಮೂಲಕ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋ ಶೇರ್ ಮಾಡಿರುವ ನಟಿ ಮಲೈಕಾ ಅರೋರಾ, ''I said Yes'' ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ. ಫೋಟೋದಲ್ಲಿ ಮಲೈಕಾ ನಾಚಿ ನೀರಾಗಿದ್ದಾರೆ. ಪೋಸ್ಟ್ ನಂತರ ಮಲೈಕಾ ಗೆಳೆಯ ಅರ್ಜುನ್ ಕಪೂರ್ ಅವರನ್ನು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ. ಈ ಲವ್​​ ಬರ್ಡ್ಸ್​​ ತಮ್ಮ ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ನಟಿ ಮಲೈಕಾ ಅರೋರಾ

ಇದನ್ನೂ ಓದಿ:ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್​​.. ಮಗುವನ್ನು ಸ್ವಾಗತಿಸಲು ಮನೆಯಲ್ಲಿ ಭರ್ಜರಿ ತಯಾರಿ

37 ವಯಸ್ಸಿನ ಅರ್ಜುನ್ ಮತ್ತು 49ರ ಮಲೈಕಾ ತಮ್ಮ ಪ್ರೀತಿಯ ಸಂಬಂಧವನ್ನು ಬಹಿರಂಗಪಡಿಸಿದಾಗಿನಿಂದ, ಅವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೊದಲು ಪ್ಯಾರಿಸ್ ಮತ್ತು ಲಂಡನ್ ಪ್ರವಾಸದ ಚಿತ್ರಗಳನ್ನು ಮೆಚ್ಚಿದ ಅಭಿಮಾನಿಗಳು ಬೆಸ್ಟ್ ಜೋಡಿ ಎಂದು ಹೇಳಿದ್ದಾರೆ. ಸದ್ಯ ಅಭಿಮಾನಿಗಳು ಈ ಜೋಡಿಯ ಮದುವೆಯ ಕುರಿತು ಅಧಿಕೃತವಾಗಿ ಘೋಷಣೆಗೆ ಕಾಯುತ್ತಿದ್ದಾರೆ.

ABOUT THE AUTHOR

...view details