ವಜ್ರಕಾಯ, ಕಿರಿಗೂರಿನ ಗಯ್ಯಾಳಿಗಳು ಹಾಗು ಪೆಟ್ರೋಮ್ಯಾಕ್ಸ್ ಅಂತಹ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಐಡೆಂಟಿಟಿ ಹೊಂದಿರುವ ನಟಿ ಕಾರುಣ್ಯ ರಾಮ್. ಪೆಟ್ರೋಮ್ಯಾಕ್ಸ್ ಸಿನಿಮಾ ಬಳಿಕ ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡತಿ ಕಾರುಣ್ಯ ರಾಮ್ ಅವರಿಗೆ ಹೈಬ್ರೀಡ್ ತಳಿಯ ಶ್ವಾನಗಳು ಅಂದ್ರೆ ಪಂಚಪ್ರಾಣ. ಇದೀಗ ಐದು ಲಕ್ಷ ರೂಪಾಯಿ ಬೆಲೆಯ ಶ್ವಾನವೊಂದನ್ನು ಕಾರುಣ್ಯ ರಾಮ್ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಟಿಬೆಟಿಯನ್ ಮ್ಯಾಸ್ಟಿಫ್ ಎಂಬ ಶ್ವಾನವನ್ನು ಕಾರುಣ್ಯ ರಾಮ್ ಖರೀದಿಸಿದ್ದಾರೆ. ಇದು ಪ್ರಪಂಚದ ದುಬಾರಿ ಮೌಲ್ಯದ ಶ್ವಾನಗಳಲ್ಲಿ ಒಂದು. ಇದರ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ. ಸದ್ಯ ಈ ಶ್ವಾನಕ್ಕೆ ಬಘೀರ ಅಂತಾ ನಾಮಕರಣ ಮಾಡಲಾಗಿದೆ.