ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ವಿಭಿನ್ನ ಫ್ಯಾಷನ್ಗಳಿಗೆ ಹೆಸರುವಾಸಿಯಾಗಿದ್ದಾರೆ. ಡಿಫರೆಂಟ್ ಸ್ಟೈಲಿಶ್ ದಿರಿಸಿನಲ್ಲಿ ಮಿಂಚುತ್ತಾರೆ. ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ನಿಂದ ಅಭಿಮಾನಿಗಳನ್ನು ರಂಜಿಸುತ್ತಾರೆ. ಅದು ಯಾವುದೇ ಕಾರ್ಯಕ್ರಮ ಆಗಿರಲಿ, ಬಾಲಿವುಡ್ ಬೇಬೋ ತಮ್ಮ ಸೊಗಸಾದ ಡ್ರೆಸ್ನಿಂದ ನೋಡುಗರನ್ನು ಆಕರ್ಷಿಸುತ್ತಾರೆ. ಇತ್ತೀಚೆಗೆ ಇವರು ಹಂಚಿಕೊಂಡಿರುವ ಫೋಟೋಗಳು ಅಭಿಮಾನಿಗಳನ್ನು ಸೆಳೆದಿದೆ.
ಕರೀನಾ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಹೊಸ ಫೋಟೋಶೂಟ್ ಮಾಡಿಸುತ್ತಾ, ಅಭಿಮಾನಿಗಳಿಗೆ ಟ್ರೀಟ್ ನೀಡುತ್ತಿರುತ್ತಾರೆ. ಬೇಬೋ ಮತ್ತೊಮ್ಮೆ ತಮ್ಮ ಬಾಸ್ ಲುಕ್ನಿಂದ ಯುವಕರ ಹೃದಯ ಬಡಿತ ಹೆಚ್ಚಿಸಿದ್ದಾರೆ. ವೈಟ್ ಡ್ರೆಸ್ನಲ್ಲಿ ನೋಡುಗರ ಮನ ಸೆಳೆದಿದ್ದಾರೆ. ಹಂಚಿಕೊಂಡ ಹೊಸ ಫೋಟೋಗೆ, "ಮಳೆಗಾಲದ ದಿನಗಳಲ್ಲಿ ನಾನು ವೈಟ್ ಡ್ರೆಸ್ ಧರಿಸಲು ಧೈರ್ಯ ತೆಗೆದುಕೊಂಡೆ" ಎಂದು ಕ್ಯಾಪ್ಶನ್ ನೀಡಿದ್ದಾರೆ.
ಫೋಟೋದಲ್ಲಿ ಬಾಲಿವುಡ್ ಬೇಬೋ ವೈಟ್ ಶಾರ್ಟ್ ಗೌನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಹೊಂದುವಂತೆ ಗೋಲ್ಡ್ ಕಲರ್ ಕಿವಿಯೋಲೆ ಧರಿಸಿ, ಕೂಲ್ ಆಗಿ ಕಾಣುತ್ತಿದ್ದಾರೆ. ಕನಿಷ್ಠ ಮೇಕ್ಅಪ್ ಜೊತೆಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಪೋನಿಟೇಲ್ ಹೇರ್ಸ್ಟೈಲ್ನೊಂದಿಗೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಬಾಸ್ ಲುಕ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕರೀನಾ ಕಪೂರ್ ಫೋಟೋ ಹಂಚಿಕೊಂಡ ತಕ್ಷಣ ಫ್ಯಾನ್ಸ್ ಕಮೆಂಟ್ ವಿಭಾಗಕ್ಕೆ ಮುಗಿಬಿದ್ದರು. ನಟಿಯ ಅಂದ ಚಂದವನ್ನು ಹಾಡಿ ಹೊಗಳಿದರು. ಅಭಿಮಾನಿಯೊಬ್ಬರು, 'ದೇವತೆ ಮರಳಿದ್ದಾರೆ' ಎಂದಿದ್ದಾರೆ. ಮತ್ತೊಬ್ಬರು ಕರೀನಾ ಕಪೂರ್ ಅವರನ್ನು 'ಏಂಜೆಲ್' ಎಂದು ಕರೆದಿದ್ದಾರೆ. ಇನ್ನೊಬ್ಬರು, 'ನಿಮಗೆ ಬಿಳಿ ಉಡುಗೆ ತುಂಬಾ ಸುಂದರವಾಗಿ ಕಾಣುತ್ತಿದೆ' ಎಂದು ಕಮೆಂಟ್ ಮಾಡಿದ್ದಾರೆ. ಇತರೆ ಅಭಿಮಾನಿಗಳು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ.