ಕರ್ನಾಟಕ

karnataka

ETV Bharat / entertainment

'ಕಾಂತಾರ ನೋಡುವ ಕುತೂಹಲ ಹೆಚ್ಚಾಗಿದೆ': ಬಾಲಿವುಡ್​​ ನಟಿ ಕಂಗನಾ ರಣಾವತ್ - Actress Kangana Ranaut

'ಕಾಂತಾರ ಸಿನಿಮಾ ಕುತೂಹಲ ಹೆಚ್ಚಿಸಿದೆ. ಸಿನಿಮಾ ನೋಡಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಶೀಘ್ರದಲ್ಲೇ ಸಿನಿಮಾ ನೋಡುವೆ' ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಿಳಿಸಿದ್ದಾರೆ.

Actress Kangana Ranaut curious to watch Kantara movie
ಕಾಂತಾರ ಕುರಿತು ಬಾಲಿವುಡ್​​ ನಟಿ ಕಂಗನಾ ರಣಾವತ್ ಪೋಸ್ಟ್

By

Published : Oct 18, 2022, 6:44 PM IST

ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ದಶದಿಕ್ಕುಗಳಿಂದಲೂ ಕಾಂತಾರ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದವರು ಕಾಂತಾರ ನೋಡಿ ಮೆಚ್ಚಿಕೊಂಡಿದ್ದಾರೆ.

ಬೇರೆ ಬೇರೆ ಚಿತ್ರರಂಗದ ಸೂಪರ್​ ಸ್ಟಾರ್​ಗಳು ಸಹ ಸಿನಿಮಾ ನೋಡಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. 'ಕಾಂತಾರ ಸಿನಿಮಾ ಕುತೂಹಲ ಹೆಚ್ಚಿಸಿದೆ. ಸಿನಿಮಾ ನೋಡಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಶೀಘ್ರದಲ್ಲೇ ಸಿನಿಮಾ ನೋಡುವೆ' ಎಂದು ಬಾಲಿವುಡ್​​ ಕ್ವೀನ್ ಕಂಗನಾ ರಣಾವತ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾಗಳನ್ನು, ಸಿನಿಮಾ ರಂಗದವರನ್ನು ತೆಗಳುತ್ತಾ ಬಂದಿರುವ ನಟಿ ಕಂಗನಾ ರಣಾವತ್, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು, ಕಲಾವಿದರನ್ನು ಹೊಗಳುತ್ತಿದ್ದಾರೆ. ಇದೀಗ ಕಾಂತಾರ ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:'OMG... ನನ್ನನ್ನು ತವರಿಗೆ ಕರೆದೊಯ್ತು ಕಾಂತಾರ'.. ತುಳುನಾಡ ಬೆಡಗಿ ಶಿಲ್ಪಾ ಶೆಟ್ಟಿ ಮೆಚ್ಚುಗೆ

ABOUT THE AUTHOR

...view details