ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹೆಚ್ಚಿನ ವಿಷಯಗಳಲ್ಲಿ ಟೀಕೆ-ಟಿಪ್ಪಣಿ ಮಾಡುವ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಆದ್ರೀಗ 'ಕಾಂತಾರ' ಸಿನಿಮಾ ನೋಡಿ ಬಂದು ಥ್ರಿಲ್ ಆಗಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಅವರ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.
'ನಾನು ಕುಟುಂಬದವರ ಜೊತೆ ಕಾಂತಾರ ಸಿನಿಮಾ ನೋಡಿ ಬಂದೆ. ಈಗಲೂ ನನಗೆ ನಡುಕ ಬರುತ್ತಿದೆ. ಅದ್ಭುತ ಅನುಭವ. ರಿಷಬ್ ಶೆಟ್ಟಿ ಅವರೇ ನಿಮಗೆ ಹ್ಯಾಟ್ಸ್ ಆಫ್. ಬರವಣಿಗೆ, ನಿರ್ದೇಶನ, ನಟನೆ, ಆ್ಯಕ್ಷನ್ ಎಲ್ಲವೂ ಬ್ರಿಲಿಯಂಟ್. ನಂಬೋಕೆ ಸಾಧ್ಯವಾಗುತ್ತಿಲ್ಲ' ಎಂದು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಸಂಪ್ರದಾಯ, ಜಾನಪದ, ಸ್ಥಳೀಯ ಸಮಸ್ಯೆಗಳ ಉತ್ತಮ ಮಿಶ್ರಣವೇ ಈ ಕಾಂತಾರ. ಸಿನಿಮಾ ಎಂದರೆ ಇದು. ಒಂದು ವಾರಗಳ ಕಾಲ ಈ ಹ್ಯಾಂಗೋವರ್ನಿಂದ ಹೊರಬರಲು ಸಾಧ್ಯವಿಲ್ಲ ಎಂದು ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.