ಬಾಲಿವುಡ್‌ನ ಪ್ರತಿಭಾವಂತ, ಬಹುಬೇಡಿಕೆ ನಟಿ ಕಾಜೋಲ್ ನಿನ್ನೆ (ಜೂನ್ 9 ರಂದು, ಶುಕ್ರವಾರ) ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಪಡೆದಯುವುದಾಗಿ ಘೋಷಿಸಿದ್ದಾರೆ. ಈ ಒಂದು ಪೋಸ್ಟ್ ಅಭಿಮಾನಿಗಳಲ್ಲಿ ಹಲವು ಅನುಮಾನ ಮೂಡುವಂತೆ ಮಾಡಿದೆ. ನಟಿಯ ಜೀವನದಲ್ಲಿ 'ಎಲ್ಲವೂ ಸರಿ ಇದೆಯೇ?' ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ನಟಿ ಕಾಜೋಲ್ ಶುಕ್ರವಾರ ಇನ್ಸ್ಟಾಗ್ರಾಮ್ ಸ್ಟೋರಿ ಮತ್ತು ಪೋಸ್ಟ್‌ನಲ್ಲಿ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಈ ಪೋಸ್ಟ್‌ನಲ್ಲಿ ಕಾಜೋಲ್ ಅವರು ಜೀವನದ ಅತ್ಯಂತ ಕಷ್ಟಕರ ಹಂತವನ್ನು ಎದುರಿಸುತ್ತಿರುವುದಾಗಿ ಬರೆದಿದ್ದಾರೆ. ಈ ಒಂದು ಹೊಸ ಪೋಸ್ಟ್ ಬಿಟ್ಟರೆ ಅವರು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್ಗಳನ್ನು ಅಳಿಸಿ ಹಾಕಿದ್ದರು. ಆದ್ರಿಂದು ಅವರ ಎಲ್ಲಾ ಪೋಸ್ಟ್ಗಳು ಇನ್ಸ್ಟಾಗ್ರಾಮ್ನಲ್ಲಿ ಕಾಣಿಸುತ್ತಿದೆ.
ಸದ್ಯ ನಟಿ ಎದುರಿಸುತ್ತಿರುವ ಆ ಕಷ್ಟದ ಹಂತ ಯಾವುದು ಎಂಬುದನ್ನು ತಿಳಿಯಲು ಅಭಿಮಾನಿಗಳು ಯತ್ನಿಸುತ್ತಿದ್ದಾರೆ ಮತ್ತು ನಟಿ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ.
ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಂಡ ನಂತರ, ನಿನ್ನೆ ಕಾಜೋಲ್ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ನೀಲಿ ಬಣ್ಣದ ಸಿಂಪಲ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಕಾರಿನ ಬಳಿ ವೇಗವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಪಾಪರಾಜಿಗಳು ಇದ್ದರೂ, ಸ್ಪಂದಿಸದೇ, ಅವರ ಕಡೆ ತಿರುಗಿಯೋ ನೋಡದೇ ನೇರವಾಗಿ ಕಾರಿನಲ್ಲಿ ಹೋಗಿ ಕುಳಿತಿದ್ದಾರೆ. ಯಾವುದೋ ನೋವು ಅಥವಾ ಚಿಂತೆಯಲ್ಲಿದ್ದಂತೆ ನಟಿ ಕಾಣಿಸಿಕೊಂಡಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದ್ರೆ ನಟಿಯ ಸ್ಥಿತಿ ಚೆನ್ನಾಗಿಲ್ಲ ಅನ್ನೋದು ಗೊತ್ತಾಗಿದೆ.