ಹಿಂದಿಯ ಸಾಲು ಸಾಲು ಚಿತ್ರಗಳು ಮಕಾಡೆ ಮಲಗುತ್ತಿದ್ದು, ಇದು ಬಾಲಿವುಡ್ ಮಂದಿಯನ್ನು ಕಂಗೆಡಿಸಿದೆ. ಈ ಕುರಿತು ಮಾತನಾಡಿರುವ ನಟಿ ಕಾಜೋಲ್, ಹಿಂದಿ ಚಿತ್ರರಂಗ ಪ್ರಗತಿಪರವಾದ ಉದ್ಯಮ. ಬಾಲಿವುಡ್ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿಲ್ಲ ಎಂಬುದು ಕೆಲವು ಸಮಯದ ವಿಷಯವಷ್ಟೇ ಎಂದು ಸಮರ್ಥನೆ ನೀಡಿದ್ದಾರೆ.
ತಮ್ಮ ಮುಂದಿನ ಚಿತ್ರ 'ಸಲಾಂ ವೆಂಕಿ'ಯಲ್ಲಿ ಬ್ಯುಸಿಯಾಗಿರುವ ನಟಿ ಮಾತನಾಡಿ, ಹಿಂದಿ ಸಿನಿಮಾಗಳು ಮಾತ್ರ ಉತ್ತಮ ಪ್ರದರ್ಶನ ಕಾಣುತ್ತಿಲ್ಲ ಎಂಬುದು ಸರಿಯಲ್ಲ. ಪ್ರಪಂಚದಾದ್ಯಂತ ಅನೇಕ ಸಿನಿಮಾಗಳಿಗೂ ಇದು ಅನ್ವಯವಾಗುತ್ತದೆ ಎಂದರು.
ವಾಸ್ತವ ಎಂದರೆ ಹಿಂದಿ ಸಿನಿಮಾಗಳ ಮೇಲೆ ಅನೇಕ ಹೂಡಿಕೆ ನಡೆಯುತ್ತವೆ. ಅನೇಕ ಸ್ಟೇಕ್ ಹೋಲ್ಡರ್ಗಳು ಅವಲಂಬಿತರಾಗಿದ್ದಾರೆ. ಕೋವಿಡ್ ಸಾಂಕ್ರಾಮಿಕತೆಯ ಬಳಿಕ ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆಯಾಗಿದೆ. ಹಿಂದಿ ಸಿನಿಮಾ ಮಾತ್ರವಲ್ಲ, ಪ್ರಪಂಚದೆಲ್ಲೆಡೆ ಥಿಯೇಟರ್‌ಗಳ ಕಡೆ ಮುಖ ಮಾಡುವ ಜನರ ಸಂಖ್ಯೆ ಕಡಿಮೆ ಆಗಿದೆ ಎಂದು ಕಾಜೋಲ್ ಹೇಳಿದರು.