ಕರ್ನಾಟಕ

karnataka

ETV Bharat / entertainment

ಕಚೇರಿಗಾಗಿ ಹೊಸ ಜಾಗ ಖರೀದಿಸಿದ ನಟಿ ಕಾಜೋಲ್​ : ಆಸ್ತಿ ಮೌಲ್ಯ ಕೇಳಿದರೆ ಹುಬ್ಬೇರಿಸ್ತೀರಾ!

Kajol buys new property: ತಮ್ಮ ಕಚೇರಿಗಾಗಿ ಓಶಿವಾರದಲ್ಲಿ ಬಾಲಿವುಡ್​ ನಟಿ ಜಾಗ ಖರೀದಿಸಿದ್ದಾರೆ.

By ETV Bharat Karnataka Team

Published : Aug 29, 2023, 2:25 PM IST

Updated : Aug 29, 2023, 3:12 PM IST

actress kajol
ನಟಿ ಕಾಜೋಲ್​

ಹಿಂದಿ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಅಜಯ್​ ದೇವ್​ಗನ್​ ಮತ್ತು ಕಾಜೋಲ್​ ದೇವ್​​ಗನ್​ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪ್ರಸಿದ್ಧ ನಟಿ ಕಾಜೋಲ್​​ ಮುಂಬೈನಲ್ಲಿ ಕೋಟಿಗಟ್ಟಲೆ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂಪರ್​ ಸ್ಟಾರ್, ಪತಿ ಅಜಯ್​ ದೇವಗನ್​​ ಅವರು ಈಗಾಗಲೇ ಆ ಸ್ಥಳದಲ್ಲಿ ಐದು ಫ್ಲಾಟ್​ಗಳನ್ನು ಖರೀದಿಸಿದ್ದು, ಅದೇ ಸ್ಥಳದಲ್ಲಿ ನಟಿ ಕಾಜೋಲ್​ ಕಚೇರಿ ಸ್ಥಳ ಖರೀದಿದ್ದಾರೆ. ಓಶಿವಾರದಲ್ಲಿರುವ ಸಿಗ್ನೇಚರ್​ ಬಿಲ್ಡಿಂಗ್​ ಬಳಿ ನಟಿ ತಮ್ಮ ಕಚೇರಿಗಾಗಿ ಜಾಗ ಖರೀದಿಸಿದ್ದಾರೆ. ಈ ಜಾಗದ ಬೆಲೆ ಕೇಳಿದ ನೆಟ್ಟಿಗರು ಶಾಕ್​ ಆಗಿದ್ದಾರೆ.

ಬೆಲೆ ಕೇಳಿ ಹುಬ್ಬೇರಿಸಿದ ನೆಟ್ಟಿಗರು: ವರದಿಗಳ ಪ್ರಕಾರ, ವೀರ್​ ಸಾವರ್ಕರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಈ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2023) ನಟಿ ಖರೀದಿಸಿರುವ ಎರಡನೇ ಆಸ್ತಿ ಇದು. ಈ ಆಸ್ತಿ ಒಪ್ಪಂದ ಜುಲೈ 28 ರಂದು ಮಾಡಲಾಗಿದೆ. ಕಾಜೋಲ್​ ಅವರ ಹೊಸ ಆಸ್ತಿ 194.67 ಚದರ್​ ಮೀಟರ್ ಇದ್ದು, 7.64 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಗಮನಾರ್ಹ ಅಂಶವೆಂದರೆ ನಟಿಯ ಪತಿ, ನಟ ಅಜಯ್​ ದೇವ​ಗನ್​ ಸಹ ಇದೇ ಜಾಗದ ಬಳಿ 5 ಫ್ಲ್ಯಾಟ್​ಗಳನ್ನು ಖರೀದಿಸಿದ್ದಾರೆ. ಇದರ ಮೌಲ್ಯ ಬರೋಬ್ಬರಿ 45 ಕೊಟಿ ರೂ. ಆಗಿದೆ ಎಂದು ತಿಳಿದು ಬಂದಿದೆ. ​

ಇದನ್ನೂ ಓದಿ:ತಾವು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್: ಸಿಬ್ಬಂದಿ ಫುಲ್​ ಖುಷ್

ಇದಕ್ಕೂ ಮುನ್ನ ಕೆಲ ಆಸ್ತಿ ಖರೀದಿಸಿದ್ದ ಸಿನಿಮಾ: ರಿಲಯನ್ಸ್​ ಎಂಟರ್​ಟೈನ್​ಮೆಂಟ್​​, ಸಾಜಿದ್​ ನಾಡಿಯಾಡ್ವಾಲಾ, ಅಬುಂದಾಟಿಯಾ ಎಂಟರ್​ಟೈನ್​ಮೆಂಟ್​ ಮತ್ತು ಬನಿಜಯ್​ ಏಷ್ಯಾ ಸೇರಿದಂತೆ ಪ್ರಸಿದ್ಧ ಕಂಪನಿಗಳಿರುವ ಜಾಗದಲ್ಲಿ ನಟಿ ಹೊಸ ಆಸ್ತಿ ಖರೀದಿಸಿದ್ದಾರೆ. ಇತ್ತೀಚೆಗೆ ನಟಿ ಮುಂಬೈನಲ್ಲಿ 16.5 ಕೋಟಿ ರೂ. ಮೌಲ್ಯದ ಆಸ್ತಿವೊಂದನ್ನು ಖರೀದಿಸಿದ್ದಾರೆ. ಅದೇ ಸಂದರ್ಭ ಜುಹು ಪ್ರದೇಶದ ಅನನ್ಯಾ ಬಿಲ್ಡಿಂಗ್​ನಲ್ಲಿ ನಟಿ ಎರಡು ಅಪಾರ್ಟ್​ಮೆಂಟ್​ ಸೇರಿ 11.95 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಮತ್ತೊಮ್ಮೆ ಆಸ್ತಿ ಖರೀದಿಸಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ:Jawan: ಎಸ್​ಆರ್​ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್​ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್​ ಪ್ರದರ್ಶನ!

ನಟ ನಟಿಯ ಸಿನಿಮಾಗಳು: ನಟಿ ಕಾಜೋಲ್​​ ಕೆಲಸದ ವಿಚಾರ ಗಮನಿಸುವುದಾದರೆ, ಕೊನೆಯದಾಗಿ ಒಟಿಟಿ ವೆಬ್​ ಸೀರಿಸ್​ಗಳಾದ ದಿ ಟ್ರಯಲ್​ ಮತ್ತು ಲಸ್ಟ್ ಸ್ಟೋರಿಸ್​ 2 ನಲ್ಲಿ ಕಾಣಿಸಿಕೊಂಡರು. ನಟ ಅಜಯ್​ ದೇವ್​ಗನ್​​ ಅವರ ಕೊನೆಯ ಸಿನಿಮಾ ಭೋಲಾ. ಸದ್ಯ ಆಸ್ತಿ ಸಲುವಾಗಿ ಸುದ್ದಿಯಲ್ಲಿದ್ದಾರೆ.

Last Updated : Aug 29, 2023, 3:12 PM IST

ABOUT THE AUTHOR

...view details