ಕರ್ನಾಟಕ

karnataka

ETV Bharat / entertainment

ಗಂಡು ಮಗುವಿಗೆ ಜನ್ಮ ನೀಡಿದ 'ಮಗಧೀರ' ಚೆಲುವೆ ಕಾಜಲ್ ಅಗರವಾಲ್ - ಕಾಜಲ್ ಅಗರವಾಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆಂದು ವರದಿಯಾಗಿದೆ.

Kajal Agarwal Baby Boy
Kajal Agarwal Baby Boy

By

Published : Apr 19, 2022, 8:24 PM IST

ಹೈದರಾಬಾದ್​:ಮಗಧೀರ ಚಿತ್ರದ ಬೆಡಗಿ ಕಾಜಲ್ ಅಗರವಾಲ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಬಾಯ್​ಫ್ರೆಂಡ್ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ, ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಟುಂಬ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿವೆ.

ಕಾಜಲ್ ಹಾಗೂ ಗೌತಮ್​ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. 2020ರ ಅಕ್ಟೋಬರ್​​ 6ರಂದು ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟಿ ಕಾಜಲ್​​ ಗರ್ಭಿಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಮೇಲಿಂದ ಮೇಲೆ ಪ್ರೆಗ್ನೆನ್ಸಿ ಫೋಟೋ ಹಂಚಿಕೊಳ್ಳುತ್ತಿದ್ದರು. ಜೊತೆಗೆ ತಾವು ಮಾಡ್ತಿದ್ದ ವರ್ಕೌಟ್ ಫೋಟೋ ಸಹ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ:'RRR' ಸಕ್ಸಸ್​: ಗೋಲ್ಡನ್​ ಟೆಂಪಲ್​​ನಲ್ಲಿ 'ಲಂಗರ್ ಸೇವಾ' ಆಯೋಜಿಸಿದ ರಾಮ್​ಚರಣ್​

ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಸಿನಿಮಾ ನೀಡಿರುವ ಖ್ಯಾತ ನಟಿ ಕಾಜಲ್ ಈಗಾಗಲೇ ಆಚಾರ್ಯ ಸೇರಿ ಅನೇಕ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು, ಆಚಾರ್ಯ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರಲಿದೆ.

ABOUT THE AUTHOR

...view details