ಕರ್ನಾಟಕ

karnataka

ETV Bharat / entertainment

'ಎಲ್ಲೇ ಹೋದರೂ ಹಿಂಬಾಲಿಸುವ ನಿಮಗೆ ಪ್ರಶಸ್ತಿ ನೀಡಬೇಕು': ಜಾಹ್ನವಿ ಹೀಗಂದಿದ್ದೇಕೆ? - etv bharat kannada

ಖಾಸಗಿತನಕ್ಕೆ ಅಡ್ಡಿಪಡಿಸುತ್ತಿರುವ ಪಾಪರಾಜಿಗಳ ವರ್ತನೆಗೆ ನಟಿ ಜಾಹ್ನವಿ ಕಪೂರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Janhvi Kapoor
ನಟಿ ಜಾಹ್ನವಿ ಕಪೂರ್

By

Published : Apr 7, 2023, 5:51 PM IST

ಸಿನಿಮಾ ತಾರೆಯರು ಮನೆಯಿಂದ ಹೊರಗೆ ಸುತ್ತಾಡುವಾಗ ತುಂಬಾ ಜಾಗರೂಕರಾಗಿರುತ್ತಾರೆ. ತಾರೆಯರು ಎಲ್ಲೇ ಹೋದರೂ ಪಾಪರಾಜಿಗಳು ಅವರನ್ನು ಹಿಂಬಾಲಿಸುತ್ತಿರುತ್ತಾರೆ. ಅಲ್ಲದೇ ನಟ, ನಟಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡುತ್ತಿರುತ್ತಾರೆ. ಇದೀಗ ಖಾಸಗಿತನಕ್ಕೆ ಅಡ್ಡಿಪಡಿಸುತ್ತಿರುವ ಪಾಪರಾಜಿಗಳ ವಿರುದ್ಧ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಪ್​ಗಳ ವರ್ತನೆಗೆ ನಟಿ ವ್ಯಂಗ್ಯ ಮಿಶ್ರಿತ ಹಾಸ್ಯಾಸ್ಪದ ರೀತಿಯಲ್ಲಿ ಮಾತನಾಡಿದ್ದಾರೆ.

ಮುಂಬೈನಲ್ಲಿರುವ ಖ್ಯಾತ ಫ್ಯಾಶನ್​ ಡಿಸೈನರ್​ ಮನೀಶ್​ ಮಲ್ಹೋತ್ರಾ ನಿವಾಸದ ಹೊರಗೆ ಜಾಹ್ನವಿ ಕಪೂರ್​ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಗುರುವಾರ ಸಂಜೆ ನಟಿ ಮಲ್ಹೋತ್ರಾ ಮನೆಯಿಂದ ಹೊರಬರುವಾಗ ಪಾಪ್​ಗಳನ್ನು ಕಂಡು ಆಶ್ಚರ್ಯಚಕಿತರಾದರು. "ನಮ್ಮನ್ನು ಎಲ್ಲೇ ಹೋದರೂ ಹಿಂಬಾಲಿಸುವ ನಿಮಗೆ ಪ್ರಶಸ್ತಿ ನೀಡಬೇಕು" ಎಂದು ವ್ಯಂಗ್ಯ ಮಿಶ್ರಿತ ಹಾಸ್ಯ ರೀತಿಯಲ್ಲಿ ನಟಿ ಪ್ರತಿಕ್ರಿಯಿಸಿದರು. ಜಾಹ್ನವಿ ಕಪೂರ್​ ಕೋಪದಲ್ಲಿ ಹೇಳದಿದ್ದರೂ, ಸಿನಿ ತಾರೆಯರಿಗೆ ಪಾಪರಾಜಿಗಳ ವರ್ತನೆ ನಿಜಕ್ಕೂ ಆತಂಕ ಉಂಟುಮಾಡಿದೆ.

ಈ ಹಿಂದೆ ನಟ ಸೈಫ್​ ಅಲಿಖಾನ್ ಕೂಡ ಪಾಪ್​ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.​ ಅವರು ತಮ್ಮ ಪತ್ನಿ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ತಡರಾತ್ರಿ ಪಾರ್ಟಿಯಿಂದ ಹಿಂದಿರುಗುತ್ತಿದ್ದ ವೇಳೆ, ಅವರ ಮನೆಯ ಹೊರಗೆ ದಂಪತಿ ಫೋಟೋಗಾಗಿ ಪಾಪರಾಜಿಗಳು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ನಟ, 'ನಮ್ಮ ಬೆಡ್ರೂಮ್​ ತನಕ ಬನ್ನಿ..' ಎಂದು ವ್ಯಂಗ್ಯದ ಜೊತೆಗೆ ಹಾಸ್ಯ ರೀತಿಯಲ್ಲಿ ಮಾತನಾಡಿದ್ದರು.

ಇವರು ಮಾತ್ರವಲ್ಲದೇ, ಈ ಹಿಂದೆ, ಆಲಿಯಾ ಭಟ್​ ತನ್ನ ಅನುಮತಿಯಿಲ್ಲದೇ ತನ್ನ ಮನೆಯಲ್ಲಿಯೇ ಫೋಟೋ ತೆಗೆಯುವ ಮೂಲಕ ಪಾಪರಾಜಿಗಳು ನನ್ನ ಖಾಸಗಿತನವನ್ನು ಆಕ್ರಮಿಸಿದ್ದಾರೆ ಎಂದು ಆರೋಪಿಸಿದ್ದರು. ಅನುಷ್ಕಾ ಶರ್ಮಾ, ಅರ್ಜುನ್ ಕಪೂರ್ ಮತ್ತು ಕರಣ್ ಜೋಹರ್ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿಗಳ ಬಗ್ಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ:ಇದು ಶಾರುಖ್ ಖಾನ್ TIME! ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಕಿಂಗ್‌ ಖಾನ್‌

ಗೆಳೆಯನೊಂದಿಗೆ ತಿರುಪತಿ ದರ್ಶನ:ಏಪ್ರಿಲ್​ 3ರಂದುನಟಿ ಜಾಹ್ನವಿ ತಮ್ಮ ವದಂತಿ ಬಾಯ್​ ಫ್ರೆಂಡ್​ ಶಿಖರ್​ ಪಹಾರಿಯಾ ಜೊತೆ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜಾಹ್ನವಿ ಕಪೂರ್​ ಪಿಂಕ್​ ಮತ್ತು ಗ್ರೀನ್​ ಕಲರ್​ ಲಂಗ ದಾವಣಿ ತೊಟ್ಟು ಟ್ರೆಡಿಷನಲ್​ ಆಗಿ ದೇವಸ್ಥಾನಕ್ಕೆ ಹೋಗಿದ್ದರು. ಜೊತೆಗೆ ಶಿಖರ್​ ಪಹಾರಿಯಾ ಬಿಳಿ ಧೋತಿ ಮತ್ತು ರೇಷ್ಮೆ ಶಾಲು ಧರಿಸಿದ್ದರು. ಇವರಿಬ್ಬರ ಜೊತೆ ಜಾಹ್ನವಿ ಸಹೋದರಿ ಖುಷಿ ಕೂಡ ಇದ್ದರು.

ಇನ್ನೂ ಸಿನಿಮಾ ವಿಚಾರವಾಗಿ ಹೇಳುವುದಾದರೆ, ಜಾಹ್ನವಿ ಕಪೂರ್​ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಧಡಕ್​ ಅವರ ಮೊದಲ ಸಿನಿಮಾವಾಗಿದ್ದು, ಆ ಬಳಿಕ ಗುಂಜನ್​ ಸಕ್ಸೇನಾ, ಘೋಸ್ಟ್​ ಸ್ಟೋರಿಸ್​, ಮಿಲಿ, ರೂಹಿ ಸೇರಿದಂತೆ ಮುಂತಾದ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಅವರು ನಟಿಸಿರುವ ದೋಸ್ತಾನಾ- 2 ಮತ್ತು ತಖ್ತ್​ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದಲ್ಲದೇ ನಟಿ ಟಾಲಿವುಡ್​ಗೂ ಕಾಲಿಟ್ಟಿದ್ದಾರೆ. ಜೂನಿಯರ್​ ಎನ್​ಟಿಆರ್​ ಅವರ 30ನೇ ಸಿನಿಮಾಗೆ ಇವರೇ ನಾಯಕಿಯಾಗಿದ್ದಾರೆ. 2024ರ ಏಪ್ರಿಲ್​ 5 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:'ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ'

ABOUT THE AUTHOR

...view details