ಕರ್ನಾಟಕ

karnataka

ETV Bharat / entertainment

ಭಾವಿ ಪತ್ನಿಯನ್ನು ಸಿನಿಮಾ ಪ್ರೊಡ್ಯೂಸರ್​ ಮಾಡಿದ ಭುವನ್ ಪೊನ್ನಣ್ಣ - Actress Harshika marries Bhuvan gowda

ಕೊಡಗಿನ ಭುವನ್​ ಪೊನ್ನಣ್ಣ ಹಾಗೂ ಹರ್ಷಿತಾ ಪೂಣಚ್ಚ ಅವರು ಇದೇ ಆಗಸ್ಟ್​ 23ರಂದು ಮದುವೆಯಾಗಲಿದ್ದು, ಇದರ ನಡುವೆ ಭುವನ್​ ಅಭಿನಯದ ಹೊಸ ಸಿನಿಮಾ ಭುವನಂ ಶ್ರೇಷ್ಠಮ್ ಗಚ್ಚಾಮಿಯನ್ನು ಭಾವಿ ಪತ್ನಿ ಹರ್ಷಿಕಾ ಪೂಣಚ್ಚ ನಿರ್ಮಾಣ ಮಾಡಲಿದ್ದಾರೆ.

actress-harshika-poonaccha-produces-bhuvans-new-film
ಭಾವಿ ಪತ್ನಿಯನ್ನು ಸಿನೆಮಾ ಪ್ರೊಡ್ಯೂಸರ್​ ಮಾಡಿದ ಭುವನ್ ಪೊನ್ನಣ್ಣ

By

Published : Aug 17, 2023, 10:56 PM IST

ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆ ಆಗೋದು ಟ್ರೆಂಡ್ ಆಗಿದೆ. ಸದ್ಯ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಹಾಗೂ ಬಹುಕಾಲದ ಗೆಳೆಯ ಭುವನ್ ಪೊನ್ನಣ್ಣ ಮದುವೆ ಆಗುತ್ತಿರುವುದು ಚಿತ್ರರಂಗದಲ್ಲಿ ಬಿಸಿ ಬಿಸಿ ಸುದ್ದಿ. ಇದರ ಜೊತೆಗೆ ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಅದರ ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದ ಹರ್ಷಿಕಾ ಪೂಣಚ್ಚ ಹಾಗು ಭುವನ್ ಪೊನ್ನಣ್ಣ ಮೊದಲು ಭೇಟಿ ಆಗಿದ್ದು ಒಂದು ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ. ಹರ್ಷಿಕಾ ಪೂಣಚ್ಚ ಆಗಷ್ಟೇ ಪಿಯುಸಿ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇನ್ನು ಭುವನ್‌ ಫ್ಯಾಶನ್ ಶೋ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ. ಹರ್ಷಿಕಾ ಅವರಿಗೆ ಫ್ಯಾಷನ್ ಶೋನಲ್ಲಿ ನಡೆದ ಮೊದಲ‌ ಭೇಟಿಯಲ್ಲೇ ಭುವನ್ ಅವರನ್ನು ನೋಡಿ ಹುಡುಗ ಚೆನ್ನಾಗಿದ್ದಾನೆ ಎಂದು ಅಂದುಕೊಂಡಿದ್ದರಂತೆ.

ಈ ಮೊದಲ ಭೇಟಿ ನಂತರ ಭುವನ್ ಹಾಗು ಹರ್ಷಿಕಾ ತಮ್ಮ ಮೊಬೈಲ್​ ನಂಬರ್​ ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಇಬ್ಬರು ಸಿನಿಮಾ ಕ್ಷೇತ್ರದಲ್ಲಿ ಇರೋದ್ರಿಂದ ಸಿನಿಮಾ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭೇಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹರ್ಷಿಕಾ ಪೂಣಚ್ಚ ತಂದೆ ತಾಯಿಗೆ ಭುವನ್ ಅವರನ್ನು ನೋಡಿ ಹರ್ಷಿಕಾಗೆ ಒಳ್ಳೆ ಜೋಡಿ ಅಂದು ಕೊಂಡಿದ್ದರು. ಇದೀಗ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಅವರ ಸ್ನೇಹ ಸಂಬಂಧ ಮದುವೆ ಹಂತಕ್ಕೆ ಬಂದು ತಲುಪಿದೆ. ಭುವನ್ ಪೊನ್ನಣ್ಣ ಅವರು ಹರ್ಷಿಕಾ ಜೊತೆ ಇದೇ ತಿಂಗಳ 23 ಹಾಗೂ 24ರಂದು ಕೊಡುವ ಸಂಪ್ರದಾಯದಂತೆ ಮದುವೆ ಆಗಲಿದ್ದಾರೆ. ಈ‌ ಮದುವೆಗೆ ಸಾಕಷ್ಟು ಚಿತ್ರರಂಗದ ತಾರೆಯರು ಸಾಕ್ಷಿಯಾಗಲಿದ್ದಾರೆ.

ಈ ಸಂಭ್ರಮದ ಮಧ್ಯೆ ಭುವನ್ ಪೊನ್ನಣ್ಣ ಭಾವಿ ಪತ್ನಿ ಹರ್ಷಿಕಾ ಪೂಣಚ್ಚ ಅವರನ್ನು ನಿರ್ಮಾಪಕಿಯನ್ನಾಗಿ ಮಾಡಿದ್ದಾರೆ. ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್​ಗೆ ಭುವನಂ ಎಂಟರ್​ಟೈನ್​ಮೆಂಟ್ ಎಂದು ಹೆಸರಿಡಲಾಗಿದ್ದು, ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ "ಭುವನಂ ಶ್ರೇಷ್ಠಮ್ ಗಚ್ಚಾಮಿ" ಎಂದು ಹೆಸರಿಡಲಾಗಿದೆ.

ಇದೊಂದು ಬಾಕ್ಸರ್​ನ ಕಥೆಯಾಗಿದ್ದು, ಆರು ವರ್ಷದ ಹಿಂದೆಗೆ ಈ ರೀತಿಯ ಸಿನಿಮಾ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಅಂದಿಕೊಂಡಿದ್ದರು. ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್​ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ ಕೆಲಸ ಮಾಡುತ್ತಿದ್ದಾರೆ.

ಮದುವೆ ಸಮಾರಂಭ ಮುಗಿಸಿಕೊಂಡು ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ಭುವನ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಹರ್ಷಿಕಾ ಸಿನೆಮಾ ನಿರ್ಮಾಪಕಿಯಾಗಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುತ್ತೇವೆ ಎಂದು ಭುವನ್ ಹೇಳಿದ್ದಾರೆ.

ಇದನ್ನೂ ಓದಿ :SSESideA: 'ಮನು-ಪ್ರಿಯಾಳ ಪ್ರಣಯ ಪ್ರಪಂಚ'; 'ಸಪ್ತ ಸಾಗರದಾಚೆ ಎಲ್ಲೋ' ಟ್ರೇಲರ್​ ರಿಲೀಸ್​

ABOUT THE AUTHOR

...view details