ಕರ್ನಾಟಕ

karnataka

ETV Bharat / entertainment

ಮದುಮಗಳಂತೆ ಕಂಗೊಳಿಸಿದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ? - ದಿವ್ಯಾ ಮತ್ತು ಅರವಿಂದ್

ನಟಿ ದಿವ್ಯಾ ಉರುಡುಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬಹುಶಃ ಅವರು ತಮ್ಮ ಮದುವೆ ಡೇಟ್​ ಅನೌನ್ಸ್​ ಮಾಡ್ತಾರೆ ಎಂಬ ಅನುಮಾನ ಜನರಲ್ಲಿ ಮೂಡಿದೆ.

Actress Divya Uruduga shared new video
ಮದುಮಗಳಂತೆ ಕಂಗೊಳಿಸಿದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?

By ETV Bharat Karnataka Team

Published : Oct 5, 2023, 7:30 PM IST

ಕನ್ನಡ ಕಿರುತೆರೆ, ಸಿನಿಮಾ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ. ಇದೀಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳಂತೆ ರೆಡಿಯಾಗಿ ಕ್ಯಾಮರಾ ಮುಂದೆ ಬಂದಿದ್ದು, ಎಲ್ಲರೂ ಕಾತುರದಿಂದ ಕಾಯುತ್ತಿರುವ ಒಂದು ವಿಚಾರವನ್ನು ಸದ್ಯದಲ್ಲೇ ಅನೌನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿದ್ರೆ ಬಹುಶಃ ಅವರು ಮದುವೆ ಡೇಟ್​ ಅನೌನ್ಸ್​ ಮಾಡ್ತಾರೆ ಎಂಬ ಅನುಮಾನ ಮೂಡಿದೆ. ​

ಮದುವೆ ವಿಚಾರ ಬಂದಾಗ ದಿವ್ಯಾ ಉರುಡುಗ ಪಕ್ಕ ಅರವಿಂದ್​ ಕೆ.ಪಿ ಹೆಸರೇ ಕಾಣಿಸಿಕೊಳ್ಳುತ್ತದೆ. ಈ ಜೋಡಿ ಈಗಾಗಲೇ 'ಅರ್ವಿಯಾ' ಎಂದೇ ಜನಪ್ರಿಯತೆ ಗಳಿಸಿದೆ. ಸೋಷಿಯಲ್​ ಮೀಡಿಯಾದಲ್ಲೂ ಇವರಿಗಾಗಿ ಪ್ರತ್ಯೇಕ​ ಫ್ಯಾನ್ಸ್​​ ಗ್ರೂಪ್​ ಕೂಡ ಇದೆ. ಬಿಗ್​ ಬಾಸ್​ ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್​ ಆಗಿದ್ದ ಜೋಡಿ, ಶೋ ಮುಗಿದ ಬಳಿಕವೂ ಅದೇ ಸಂಬಂಧವನ್ನು ಉಳಿಸಿಕೊಂಡಿದೆ. ಬಹಿರಂಗವಾಗಿ ತಾವಿಬ್ಬರು ಪ್ರೀತಿಸುತ್ತಿರುವುದಾಗಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ಸದಾ ಜೊತೆಯಾಗಿಯೇ ಕಾಣಿಸಿಕೊಳ್ಳುವ ಕಪಲ್​ ಇದೀಗ ಸಂಥಿಂಗ್​ ಸ್ಪೆಷಲ್​ ಸರ್​ಪ್ರೈಸ್​ ನೀಡಲು ಮುಂದಾಗಿದೆ.

ಹೌದು, ಅನೇಕ ದಿನಗಳಿಂದ ದಿವ್ಯಾ ಮತ್ತು ಅರವಿಂದ್​ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದೀಗ ದಿವ್ಯಾ ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ ಇಬ್ಬರು ಮದುವೆಗೆ ರೆಡಿಯಾಗಿದ್ದು, ಸದ್ಯದಲ್ಲೇ ಮ್ಯಾರೇಜ್​ ಡೇಟ್​ ಅನೌನ್ಸ್​ ಮಾಡಲಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.

ವಿಡಿಯೋದಲ್ಲೇನಿದೆ?:ವಿಡಿಯೋ ಪ್ರಾರಂಭದಲ್ಲಿ ದಿವ್ಯಾ ಉರುಡುಗ ಯಾರದ್ದೋ ಮದುವೆ ಆಲ್ಬಂ ನೋಡುತ್ತಾ ಪಾರ್ಲರ್​ನಲ್ಲಿ ಕುಳಿತಿರುತ್ತಾರೆ. ಆಗ ಬ್ಯೂಟಿಷಿಯನ್​​ ದಿವ್ಯಾ ಅವರನ್ನು ಕರೆಯುತ್ತಾರೆ."ಎನ್​ ಮೇಡಮ್​ ಸಡನ್ನಾಗಿ ಫೋಟೋಶೂಟ್​ ಫ್ಲಾನ್​ ಮಾಡಿದ್ದೀರಿ. ಏನ್​ ಸಮಾಚಾರ? ರೇಷ್ಮೆ ಸೀರೆ, ಮಲ್ಲಿಗೆ ಹೂವೆಲ್ಲಾ ತಂದಿದ್ದೀರ" ಎಂದು ದಿವ್ಯಾರನ್ನು ಬ್ಯೂಟಿಷಿಯನ್​ ಪ್ರಶ್ನಿಸುತ್ತಾರೆ. ಆದರೆ ದಿವ್ಯಾ ಅವರು ಸಮಾಚಾರ ಏನಿಲ್ಲ ಎಂದು ಉತ್ತರಿಸುತ್ತಾರೆ. ಆದರೆ ಅವರು ಮನಸ್ಸಿನಲ್ಲೇ, ​"ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ರೆಡಿಯಾಗುತ್ತಿದೆ" ಎಂದು ಹೇಳಿಕೊಳ್ಳುತ್ತಾ ಖುಷಿಪಡುತ್ತಾ ಫೋಟೋಶೂಟ್​ಗೆ ತಯಾರಾಗುತ್ತಾರೆ.

"ಎಷ್ಟೋ ದಿನದ ಕನಸು ನನಸಾಗುವ ಸಮಯ ಬಂದಿದೆ, ನನ್ನಷ್ಟೇ ಕಾತುರ ನಿಮಗೂ ಇದೆ ಎಂದು ಗೊತ್ತು" ಎನ್ನುತ್ತಾ ಕ್ಯಾಮರಾಗೆ ಪೋಸ್ ನೀಡಲು ಸಜ್ಜಾಗುತ್ತಾರೆ. "ಸರ್ ಬರಲ್ವಾ?" ಎಂದು ಕ್ಯಾಮರಾಮ್ಯಾನ್ ಪ್ರಶ್ನೆ ಮಾಡುತ್ತಾರೆ. "ಫೋನ್ ಮಾಡಿ ಕೇಳ್ತೀನಿ" ಎಂದು ಫೋನ್ ಮಾಡಿ ವಿಚಾರಿಸುತ್ತಾರೆ. "ಇನ್ನೂ ಬಂದಿಲ್ವಾ? ಶಾಪಿಂಗ್ ಇನ್ನೂ ಮುಗಿದಿಲ್ವಾ? ನೀವು ಬಂದಿಲ್ಲ ಎಂದರೆ ನಾನೊಬ್ಬಳೆ ಅನೌನ್ಸ್ ಮಾಡುತ್ತೀನಿ" ಎನ್ನುತ್ತಾರೆ ದಿವ್ಯಾ. ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ದಿವ್ಯಾ ಅನೌನ್ಸ್ ಮಾಡುತ್ತಿರುವುದು ಏನು? ದಿವ್ಯಾ ಕಾಲ್ ಮಾಡಿದ್ದು ಅರವಿಂದ್ ಅವರಿಗೆನಾ? ಇಬ್ಬರ ಮದುವೆ ದಿನಾಂಕ ಬಹಿರಂಗಪಡಿಸುತ್ತಾರಾ? ಎನ್ನುವ ಅನೇಕ ಪ್ರಶ್ನೆ ಮೂಡಿಸಿದೆ.

ಅಂದಹಾಗೆ, ಈ ಜೋಡಿ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಬಳಿಕ 'ಅರ್ಧಂಬರ್ಧ ಪ್ರೇಮ ಕಥೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಅರವಿಂದ್ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಬಳಿಕ ದಿವ್ಯಾ ಮತ್ತು ಅರವಿಂದ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ನಡುವೆ ಗುಡ್ ನ್ಯೂಸ್ ನೀಡಲು ಸಜ್ಜಾಗಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ದಿವ್ಯಾ ಉರುಡುಗ ಅರ್ದಂಬರ್ಧ ಪ್ರೇಮಕಥೆ ನಾಯಕ ಅರವಿಂದ್ ಇಂಟ್ರೊಡಕ್ಷನ್​ ಟೀಸರ್ ರಿಲೀಸ್

ABOUT THE AUTHOR

...view details