ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿ ಕರಣ್ ಜೋಹರ್ ಹೋಸ್ಟ್ ಮಾಡುತ್ತಿರುವ ಪ್ರಸಿದ್ಧ ಟಾಕ್ ಶೋ ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. 2018 ರಲ್ಲಿ ಹಸೆಮಣೆ ಏರಿದ ದೀಪ್ವೀರ್ ಜೋಡಿಯ ತಮಾಷೆಯ ಸಂವಾದವನ್ನು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಸೀಸನ್ 8ರ ಮೊದಲ ಸಂಚಿಕೆಯಲ್ಲಿ ಈ ಜೋಡಿ ಭಾಗವಹಿಸುತ್ತಿದ್ದು, ಈ ಸೀಸನ್ನ ಮೊದಲ ಸಂಚಿಕೆ ಗುರುವಾರ ಮಧ್ಯರಾತ್ರಿ ಪ್ರಸಾರವಾಗಲಿದೆ.
ಇಂದು ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್ ಜೊತೆಗಿರುವ ಸ್ಟನ್ನಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲವ್ಲಿ ಕಪಲ್ ಕ್ಯೂಟ್ ಪೋಟೋಗಳನ್ನು ನೋಡಿ ಅಭಿಮಾನಿಗಳು ಮಂತ್ರಮುಗ್ಧರಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಒಬ್ಬರಿಗೊಬ್ಬರು ಹತ್ತಿರ ನಿಂತು, ಕಣ್ಣುಗಳನ್ನು ಮುಚ್ಚಿ, ಪ್ರೀತಿಯಿಂದ ಮೂಗುಗಳನ್ನು ಸ್ಪರ್ಶಿಸುತ್ತಿರುವುದು ಕಾಣಬಹುದು. ಪರಸ್ಪರ ಮೃದುವಾಗಿ ಕೈಗಳನ್ನು ಹಿಡಿದು, ಸಂತೋಷದ ಮುಗುಳುನಗೆಯೊಂದಿಗೆ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವ ಜೋಡಿಯನ್ನು ಕಂಡು ಅಭಿಮಾನಿಗಳು ವಾಹ್ ಎಂದಿದ್ದಾರೆ.
ನಟ ರಣವೀರ್ ಕಪ್ಪು ಸ್ಯಾಟಿನ್ ಧರಿಸಿದ್ದು, ಕುತ್ತಿಗೆಯ ಸುತ್ತಲೂ ಸ್ಕಾರ್ಫ್ ಹಾಕಿಕೊಂಡಿದ್ದಾರೆ. ದೀಪಿಕಾ ಕಪ್ಪು ಬಾಡಿಕಾನ್ ಟೀ ಉದ್ದದ ಉಡುಗೆಯಲ್ಲಿ ಮಿಂಚಿದ್ದಾರೆ. ಉಡುಗೆಗೆ ಒಪ್ಪುವಂತಹ ಕನಿಷ್ಠ ಆಭರಣಗಳನ್ನು ಧರಿಸಿದ್ದಾರೆ.