ಕರ್ನಾಟಕ

karnataka

ETV Bharat / entertainment

ಬಾಲಿವುಡ್​​ ಪದ್ಮಾವತಿ ದೀಪಿಕಾ ಪಡುಕೋಣೆ ವಿಶ್ವದ 9ನೇ ಸುಂದರಿ - ವಿಶ್ವದ ಸುಂದರ ಮಹಿಳೆಯರು

ಬಾಲಿವುಡ್​ನ ಪದ್ಮಾವತಿ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ ಈಗ ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

actress Deepika Padukone
ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ

By

Published : Oct 18, 2022, 12:13 PM IST

Updated : Oct 18, 2022, 12:18 PM IST

ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಖುಷಿ ಕೊಡುವ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಬಾಲಿವುಡ್​ನ ಪದ್ಮಾವತಿ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ ಈಗ ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಬಾಲಿವುಡ್‌ನ ಏಕೈಕ ನಟಿ ದೀಪಿಕಾ ಪಡುಕೋಣೆ.

ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ

ವರದಿಗಳ ಪ್ರಕಾರ, ಬ್ರಿಟಿಷ್ ನಟಿ ಜೂಡಿ ಕಮರ್ ಅವರು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂಬ ಬಿರುದನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ 9ನೇ ಸ್ಥಾನದಲ್ಲಿದ್ದಾರೆ. ಇದಲ್ಲದೇ ಅಮೆರಿಕದ ನಟಿ, ಗಾಯಕಿ ಮತ್ತು ಗೀತ ರಚನಾಕಾರರಾದ ಬೆಯೋನ್ಸ್ ಮತ್ತು ಕಿಮ್ ಕಾರ್ಡಶಿಯಾನ್ ಕೂಡ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಬ್ರಿಟಿಷ್ ನಟಿ ಜೂಡಿ ಕಮರ್

ಈ ಸುಂದರ ಮಹಿಳೆಯರ ಪಟ್ಟಿಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಅವರು 'ಗೋಲ್ಡನ್ ರೇಶಿಯೋ ಆಫ್ ಬ್ಯೂಟಿ' ಎಂಬ ಪ್ರಾಚೀನ ಗ್ರೀಕ್ ತಂತ್ರವನ್ನು ಬಳಸಿಕೊಂಡು ಈ ಪಟ್ಟಿಯನ್ನು ತಯಾರಿಸಿದ್ದಾರೆ.

ಇದನ್ನೂ ಓದಿ:ನೀಲಿ ತಾರೆಯಾಗಿ ಬೆಳಕಿಗೆ ಬಂದ ಸನ್ನಿ ಲಿಯೋನ್ ಸಮಾಜಮುಖಿ ಕೆಲಸದ ಬಗ್ಗೆ ಗೊತ್ತಾ?

ಪ್ರಾಚೀನ ಗ್ರೀಕ್ ಪ್ರಕಾರ, ಸೌಂದರ್ಯವನ್ನು ಒಬ್ಬರ ಮುಖ ಮತ್ತು ದೇಹದ ನಿರ್ದಿಷ್ಟ ಅನುಪಾತದಿಂದ ಮಾತ್ರ ಅಳೆಯಬಹುದು. ಈ ತಂತ್ರದ ಪ್ರಕಾರ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಟಾಪ್ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ಶೇ.91.22ದೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

Last Updated : Oct 18, 2022, 12:18 PM IST

ABOUT THE AUTHOR

...view details