ಕರ್ನಾಟಕ

karnataka

ETV Bharat / entertainment

ವಿಭಿನ್ನ ಪಾತ್ರಗಳನ್ನು ಮಾಡುವ ಹಸಿವಿದೆ: ನಟಿ ಭಾವನ - Once Upon a Time Jamali Gudda

ಚಂದ್ರಮುಖಿ ಪ್ರಾಣಸಖಿ ಸಿನಿಮಾ ಖ್ಯಾತಿಯ ಭಾವನ ರಾಮಣ್ಣ 'ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ' ಚಿತ್ರದಲ್ಲಿ ಅಭಿನಯಿಸಿದ್ದು, ತಮ್ಮ ಪಾತ್ರ ಹಾಗು ಸಿನಿಮಾದಲ್ಲಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

actress Bhavana interview
ನಟಿ ಭಾವನ ಸಂದರ್ಶನ

By

Published : Dec 15, 2022, 8:33 PM IST

ಟೈಟಲ್​ನಿಂದಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರೋ ಸಿನಿಮಾ 'ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ'. ಬಾಕ್ಸರ್, ಲವರ್ ಬಾಯ್, ರೌಡಿ, ಪೊಲೀಸ್ ಹೀಗೆ ವೆರೈಟಿ ಪಾತ್ರಗಳ ಮೂಲಕ ಕನ್ನಡ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಡಾಲಿ ಧನಂಜಯ್. ಈ ಚಿತ್ರದಲ್ಲಿ ಧನಂಜಯ್ ಬಾರ್ ಸಪ್ಲಯರ್‌ ಪಾತ್ರ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರದಲ್ಲಿ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಖ್ಯಾತಿಯ ಭಾವನ ರಾಮಣ್ಣ ಅಭಿನಯಿಸಿದ್ದು, ತಮ್ಮ ಪಾತ್ರ ಹಾಗು ಸಿನಿಮಾದ ಅನುಭವ ಹಂಚಿಕೊಂಡಿದ್ದಾರೆ.

ಮೊದಲಿನಿಂದಲೂ ಬೋಲ್ಡ್ ನಟಿ ಅಂತಾ ಕರೆಸಿಕೊಂಡಿರುವ ನನಗೆ ವಿಭಿನ್ನ ಪಾತ್ರಗಳನ್ನು ಮಾಡಬೇಕೆನ್ನುವ ಹಸಿವಿದೆ. ಹಾಗಾಗಿ ಜಮಾಲಿ ಗುಡ್ಡ ಸಿನಿಮಾ ಒಪ್ಪಿಕೊಂಡೆ. ಡೈರೆಕ್ಟರ್ ಕುಶಾಲ್ ಗೌಡ ನನ್ನ ಹತ್ತಿರ ಬಂದು ನಾರ್ಥ್ ಇಂಡಿಯನ್ ವುಮೆನ್ ಪಾತ್ರ ಅಂತಾ ಹೇಳಿದ್ದರಷ್ಟೇ. ನನಗೆ ಸ್ಕ್ರಿಪ್ಟ್​​ ಸಹ ಕೊಟ್ಟಿಲ್ಲ, ಕಥೆಯನ್ನೂ ಹೇಳಿರಲಿಲ್ಲ. ಆದ್ರೆ ನಾನು ಈ ಜಮಾಲಿಗುಡ್ಡ ಸಿನಿಮಾದ ಒಂದು ಭಾಗವಾಗಬೇಕು ಅಂತಾ ಅಂದುಕೊಂಡು ಈ ಸಿನಿಮಾ ಒಪ್ಪಿಕೊಂಡೆ ಎಂದರು.

ನಟಿ ಭಾವನ ಸಂದರ್ಶನ

ನನಗೆ ಹೊಸ ಸಿನಿಮಾ ತಂಡದ ಜೊತೆ ಕೆಲಸ ಮಾಡಬೇಕು ಅಂದಾಗ ಸಹಜವಾಗಿ ಸ್ವಲ್ಪ ಟೆನ್ಶನ್ ಇತ್ತು. ಹೊಸ ಚಿತ್ರತಂಡದ ಜೊತೆ ಕೆಲಸ ಮಾಡಬೇಕಾದ್ರೆ, ಅವರೆಲ್ಲ ನಮ್ಮವರು ಅಂತಾ ಅನಿಸಬೇಕು. ಈ ಚಿತ್ರತಂಡದೊಂದಿಗೆ ಚೆನ್ನಾಗಿಯೇ ಹೊಂದಿಕೊಂಡೆ ಎಂದರು.

ಫಸ್ಟ್ ಡೇ ಶೂಟಿಂಗ್ ಮಾಡಬೇಕಾದ್ರೆ ಅದಿತಿ ಪ್ರಭುದೇವ ಇದ್ದರು. ದಾವಣಗೆರೆ ಹುಡುಗಿ ನನ್ನೊಂದಿಗೆ ಕಂಫರ್ಟ್ ಆಗಿದ್ದರು. ಧನಂಜಯ್ ಬಗ್ಗೆ ನಾನು ಹೇಳೋದು ಏನೂ ಇಲ್ಲ. ಈಗಾಗ್ಲೇ ಅವರ ಅಭಿಮಾನಿಗಳಿಗೆ ಎಲ್ಲವೂ ಗೊತ್ತಿದೆ. ಅವರೊಂದಿಗೆ ಫಸ್ಟ್ ಟೈಮ್ ಸ್ಕ್ರೀನ್ ಶೇರ್ ಮಾಡಿದ್ದೇನೆ. ಧನಂಜಯ್ ಹಂಬಲ್ ಪರ್ಸನ್. ಅವರ ಜೊತೆ ವರ್ಕ್ ಮಾಡಿದ್ದು ಖುಷಿಯಾಯಿತು ಎಂದರು. ಕೆಜಿಎಫ್, ಕಾಂತಾರದಂಥ ಸಿನಿಮಾಗಳಿಂದ ನಾವೆಲ್ಲ ಹೆಮ್ಮೆ ಪಡುವ ಕಾಲ ಬಂದಿದೆ. ಅದರಂತೆ ಒನ್ಸ್ ಅಪಾನ್ ಎ ಟೈಮ್ ಜಮಾಲಿಗುಡ್ಡ ಸಿನಿಮಾ ಕೂಡ ಹಿಟ್ ಆಗುವ ನಂಬಿಕೆ ಇದೆ ಎಂದು ಭಾವನ ರಾಮಣ್ಣ ಹೇಳಿದರು. ಇದೇ ವೇಳೆ, 24 ವರ್ಷದ ಯುವಕ ಕಾರ್ತಿಕ್​ ಅವರ ಕ್ಯಾಮರಾ ವರ್ಕ್ ಇದೆ. ವಯಸ್ಸು ಚಿಕ್ಕದಾದರೂ ಅವರ ವರ್ಕ್, ಆ ಲೈಟಿಂಗ್ ಸೆನ್ಸ್ ತುಂಬಾನೇ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜಮಾಲಿ ಗುಡ್ಡ ಚಿತ್ರ ನೋಡಿದ್ಮೇಲೆ ನನ್ನನ್ನು ನಾಗಸಾಕಿ ಅಂತಾ ಕರೆಯುತ್ತಾರೆ: ಯಶ್ ಶೆಟ್ಟಿ

ಸಿನಿಮಾ ಬಗ್ಗೆ ಆಸಕ್ತಿ ಇರುವ ಶ್ರೀ ಹರಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಸಿನಿಮಾ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿದ್ದ ಕುಶಾಲ್ ಗೌಡ ಅವರು ಜಮಾಲಿ ಗುಡ್ಡ ನಿರ್ದೇಶಿಸಿದ್ದಾರೆ. ಶ್ರೀಹರಿ ಹಣ ಹೂಡಿಕೆ ಮಾಡಿದ್ದಾರೆ. ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಅವರದ್ದು. ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಡಿಸೆಂಬರ್ 30ಕ್ಕೆ ಸಿನಿಮಾ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ.

ABOUT THE AUTHOR

...view details