ವಕಾಡ್ (ಮಹಾರಾಷ್ಟ್ರ): ದೇವಯಾನಿ ಖ್ಯಾತಿಯ ನಟಿ ಭಾಗ್ಯಶ್ರೀ ಮೋಟೆ ಅವರ ಸಹೋದರಿ ಮಧು ಮಾರ್ಕಂಡೇಯ ಅವರು ಪಿಂಪ್ರಿ - ಚಿಂಚವಾಡದ ವಕಾಡ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯ ಮುಖದಲ್ಲಿ ಕೆಲವು ಗಾಯಗಳು ಕಂಡು ಕಂಡುಬಂದಿದ್ದು, ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಕಾಡ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ ಮಧು ಮಾರ್ಕಾಂಡೇಯ ಮತ್ತು ಭಾಗ್ಯಶ್ರೀ ಮೋಟೆ ಇಬ್ಬರೂ ಸಹೋದರಿಯರು. ಮಧು ಮಾರ್ಕಂಡೇಯಾ ಅವರು ತನ್ನ ಸ್ನೇಹಿತೆಯೊಂದಿಗೆ ಸೇರಿ ವಕಾಡ್ ಪ್ರದೇಶದಲ್ಲಿ ಕೇಕ್ ತಯಾರಿಸುವ ವ್ಯಾಪಾರ ನಡೆಸುತ್ತಿದ್ದರು. ಭಾನುವಾರ ಮಧು ತನ್ನ ಸ್ನೇಹಿತೆಯೊಂದಿಗೆ ವ್ಯಾಪಾರ ವಿಸ್ತರಿಸುವ ನಿಟ್ಟಿನಲ್ಲಿ ಬಾಡಿಗೆ ಕೊಠಡಿ ನೋಡಲು ಹೋಗಿದ್ದರು. ಕೊಠಡಿ ನೋಡುತ್ತಿದ್ದಂತೆ ಮಧು ಅಲ್ಲಿ ಥಟ್ಟನೆ ತಲೆಸುತ್ತು ಬಂದು ಬಿದ್ದಿದ್ದರು.
ತಲೆ ಸುತ್ತು ಬಂದು ಬಿದ್ದ ಮಧುವನ್ನು ಸ್ನೇಹಿತೆ ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಆಕೆಯನ್ನು ಯಶವಂತರಾವ್ ಚವ್ಹಾಣ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಧುವನ್ನು ಪರೀಕ್ಷಿಸಿದ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಮಧು ಅವರ ಸಾವು ಅನುಮಾನಾಸ್ಪದವಾಗಿದ್ದು, ಆಕೆಯ ಸಂಬಂಧಿಕರು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಆಕೆಯ ದೇಹದಲ್ಲಿ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ವಕಾಡ್ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಾಕಾಡ್ ಪೊಲೀಸರು ಹಠಾತ್ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ (ವಕಾಡ್) ಸತ್ಯವಾನ್ ಮಾನೆ, 'ಮಧು ಮಾರ್ಕಂಡೇಯ ಅವರು ಕೇಕ್ ತಯಾರಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ, ಮಧು ಮತ್ತು ಅವರ ಸ್ನೇಹಿತೆ ವ್ಯಾಪಾರವನ್ನು ವಿಸ್ತರಿಸಲು ಬಾಡಿಗೆಗೆ ಕೊಠಡಿಯನ್ನು ನೋಡಲು ಹೋಗಿದ್ದರು. ಅಲ್ಲಿ ಹಠಾತ್ ತಲೆಸುತ್ತು ಬಂದಿದ್ದರಿಂದ ಮಧು ಬಿದ್ದಿದ್ದರು. ಮಧುವನ್ನು ಆಕೆಯ ಸ್ನೇಹಿತೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಕೆಯನ್ನು ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಅಲ್ಲಿ ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. 'ಹಠಾತ್ ಸಾವು ಪ್ರಕರಣ'(ಎಡಿಆರ್) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದೇವೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದ ಏರ್ಲೈನ್ಸ್ ಗಗನಸಖಿ ಅನುಮಾನಾಸ್ಪದ ಸಾವು
ಮೊನ್ನೆಯಷ್ಟೆ ದುಬೈನಿಂದ ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರು ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಕೋರಮಂಗಲದಲ್ಲಿ ನಡೆದಿತ್ತು. ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್ ಪ್ರತಿಷ್ಠಿತ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಆದೇಶ್ನನ್ನು ಭೇಟಿಯಾಗಲು ಅರ್ಚನಾ ಬೆಂಗಳೂರಿಗೆ ಬಂದಿದ್ದರು. ಸುಮಾರು ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ತಾವು ಇದ್ದ ಅಮಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಅರ್ಚನಾ ಬಿದ್ದಿದ್ದಾರೆ. ಇದರಿಂದಾಗಿ ಅರ್ಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.