ಕರ್ನಾಟಕ

karnataka

ETV Bharat / entertainment

ಗತವೈಭವ ಸಿನಿಮಾದಲ್ಲಿ ಆಶಿಕಾ ದೇವಕನ್ಯೆ.. ನಟಿಯ ಲುಕ್ ರಿವೀಲ್,​​ ಅಭಿಮಾನಿಗಳು ಫಿದಾ - ashika next films

ಗತವೈಭವ ಸಿನಿಮಾದಲ್ಲಿ ಆಶಿಕಾ ದೇವಕನ್ಯೆ ಆಗಿ ಮಿಂಚಲಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ನಾಯಕಿಯ ಲುಕ್ಅನ್ನು ರಿವೀಲ್ ಮಾಡಿದ್ದಾರೆ.

actress ashika look of gatavaibhava film reveled
ಗತವೈಭವ ಸಿನಿಮಾದಲ್ಲಿ ಆಶಿಕಾ ದೇವಕನ್ಯೆ...ನಟಿ ಲುಕ್​ಗೆ ಅಭಿಮಾನಿಗಳು ಫಿದಾ

By

Published : Aug 4, 2022, 7:17 PM IST

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆಯ ಬಹು ನಿರೀಕ್ಷಿತ ಸಿನಿಮಾ ಗತವೈಭವ. ಈ ಸಿನಿಮಾ ಮೂಲಕ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಪುತ್ರ ದುಶ್ಯಂತ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾಗಿ ದುಶ್ಯಂತ್ ಇಂಟ್ರುಡಕ್ಷನ್ ಟೀಸರ್ ರಿಲೀಸ್ ಮಾಡಿದ್ದ ಸುನಿ ಈಗ ನಾಯಕಿಯನ್ನು ಚಿತ್ರ ಪ್ರೇಮಿಗಳಿಗೆ ಪರಿಚಯಿಸಿದ್ದಾರೆ.

ಗತವೈಭವ ಚಿತ್ರದ ನಟ-ನಟಿ

ಆಶಿಕಾ ಇಂಟ್ರುಡಕ್ಷನ್ ಟೀಸರ್:ಗತವೈಭವ ಸಿನಿಮಾಗೆ ನಾಯಕಿ ಯಾರು ಆಗ್ತಾರೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಹೀರೋ ಇಂಟ್ರುಡಕ್ಷನ್ ಟೀಸರ್ ದಾಟಿಯಲ್ಲಿಯೇ ಸುನಿ ತಮ್ಮದೇ ಸ್ಟೈಲ್​ನಲ್ಲಿ ನಾಯಕಿಯನ್ನು ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರೂ ಅನ್ನೋದನ್ನು ಸಣ್ಣದೊಂದು ಝಲಕ್ ಮೂಲಕ ತೋರಿಸಿಕೊಟ್ಟಿದ್ದಾರೆ. ವಿಡಿಯೋ ಕೊನೆಯಲ್ಲಿ ನಾಯಕಿ ಆಶಿಕಾ ಲುಕ್ ರಿವೀಲ್ ಮಾಡಿದ್ದು, ದೇವಕನ್ಯೆ ಗೆಟಪ್​ನಲ್ಲಿ ಮಿಂಚಿದ್ದಾರೆ.

ಆಶಿಕಾ ಇಂಟ್ರುಡಕ್ಷನ್ ಟೀಸರ್

ಇದನ್ನೂ ಓದಿ:ವಿಕ್ರಾಂತ್​ ರೋಣ ಸೂಕ್ಷ್ಮವಿಲ್ಲದ ಚಿತ್ರ; ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ನಟ ಚೇತನ್​ ಟ್ವೀಟ್​

ರೋಮ್ಯಾಂಟಿಕ್ ಲವ್ ಸ್ಟೋರಿ ಗತವೈಭವ ಸಿನಿಮಾದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಕೂಡ ಇರಲಿದೆ. ಚಿತ್ರದಲ್ಲಿ ಆಶಿಕಾ ದುಶ್ಯಂತ್​ಗೆ ಜೋಡಿಯಾಗಿ ನಟಿಸಲಿದ್ದು, ದೇವಕನ್ಯೆ ಹಾಗೂ ಪೋರ್ಚುಗೀಸ್ ಯುವತಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ABOUT THE AUTHOR

...view details