ಕರ್ನಾಟಕ

karnataka

ETV Bharat / entertainment

ಕೆಜಿಎಫ್​ ಖ್ಯಾತಿಯ ಅರ್ಚನಾ ಜೋಯಿಸ್​ ಸಿನಿಮಾ 'ಮ್ಯೂಟ್​' ಒಟಿಟಿಯಲ್ಲಿ ರಿಲೀಸ್​ - ಈಟಿವಿ ಭಾರತ ಕನ್ನಡ

ಸ್ಯಾಂಡಲ್​ವುಡ್​ ನಟಿ ಅರ್ಚನಾ ಜೋಯಿಸ್​ ಅವರ 'ಮ್ಯೂಟ್​' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

actress
ಅರ್ಚನಾ ಜೋಯಿಸ್

By

Published : Feb 25, 2023, 2:22 PM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರ ನಿರ್ವಹಿಸಿ ಮನ ಗೆದ್ದಿದ್ದ ಅರ್ಚನಾ ಜೋಯಿಸ್ ಅಭಿನಯಿಸಿರುವ ಮ್ಯೂಟ್​ ಸಿನಿಮಾ ಸೈಲೆಂಟ್​ ಆಗಿ ರಿಲೀಸ್​ ಆಗಿದೆ. ಆದರೆ, ಚಿತ್ರ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಿಲ್ಲ. ಬದಲಾಗಿ ಕನ್ನಡದ ಒಟಿಟಿ ಪ್ಲಾಟ್​ಫಾರ್ಮ್ 'ನಮ್ಮ ಫ್ಲಿಕ್ಸ್​' ನಲ್ಲಿ ತೆರೆ ಕಂಡಿದೆ.

ಸ್ಯಾಂಡಲ್​ವುಡ್​ನಲ್ಲಿ ಟೈಟಲ್ ಮತ್ತು ಫಸ್ಟ್‌ಲುಕ್‌ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಬಾಲಿವುಡ್ ಬೆಡಗಿ ರವೀನಾ ಟಂಡನ್ ಏಕಕಾಲದಲ್ಲಿ ಕನ್ನಡ, ತೆಲುಗು, ಮಾಲಯಾಳಂ, ತಮಿಳು ಮತ್ತು ಹಿಂದಿ ಐದೂ ಭಾಷೆಗಳಲ್ಲೂ ಮ್ಯೂಟ್​ನ ಟ್ರೇಲರ್ ಅನ್ನು ಸಾಮಾಜಿಕ ತಾಣಗಳ ಮೂಲಕ ಲಾಂಚ್ ಮಾಡಿದ್ದರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರ ರೋಚಕ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಹೇಳಿದ್ದಾರೆ.

ದಿವ್ಯಾ ಎಂಬ ಸ್ವಾವಲಂಬಿ ಮಹಿಳೆ ತನ್ನ ಗಂಡನ ಮೋಸ ಗೊತ್ತಾದಾಗ ಕುಸಿದು ಹೋಗ್ತಾರೆ. ಆದರೆ, ಅವಳ ಜೀವನದಲ್ಲಿ ನಾಯಿಯ ಆಗಮನವಾಗುತ್ತದೆ. ಅದಕ್ಕೆ ಕಾಸ್ಮೋ ಎಂದು ಪ್ರೀತಿಯಿಂದ ಹೆಸರಿಟ್ಟಿರುತ್ತಾರೆ. ಆ ನಾಯಿಯನ್ನು ಸಾಕಿದ ಮೇಲೆ ಅವರ ಜೀವನ ಬದಲಾಗುತ್ತಾ? ಅನ್ನೋದು ಮ್ಯೂಟ್​ ಚಿತ್ರದ ಕಥೆ. ಸೋಷಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲ ಆಗಿರುವ ದಿವ್ಯಾ, 'ದಿವ್ಯಾ ಸ್ಟೇಟ್ ಆಫ್ ಮೈಂಡ್' ಎಂಬ ಹೆಸರಿನ ಮೂಲಕ ತುಂಬಾ ಫೇಮಸ್​ ಆಗಿರುತ್ತಾರೆ.

ಇದನ್ನೂ ಓದಿ:'ಮಾರ್ಟಿನ್​​' ಧ್ರುವ ಸರ್ಜಾ ಸೆಕ್ಯೂರಿಟಿಗೆ ನಿಂತಿದ್ದ ಚೆಂದುಳ್ಳಿ ಚೆಲುವೆಯರು ಯಾರು ಗೊತ್ತೇ?

ಹೀಗಿರುವಾಗ ಒಂದು ದಿನ ಅವಳ ಪ್ರೀತಿಯ ಕಾಸ್ಮೋ ಕಾಣೆಯಾಗುತ್ತದೆ. ಈ ನಾಯಿಯನ್ನು ಹುಡುಕುವ ಹಾದಿ ಸಾಕಷ್ಟು ತಿರುವುಗಳ ಮೂಲಕ ಕತೆ ಸಾಗುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ಕತೆ ಪ್ರತಿ ಹಂತದಲ್ಲೂ ರೋಚಕತೆ ನೀಡುತ್ತದೆ. ಅರ್ಚನಾ ಜೋಯಿಸ್ ಅವರ ಪ್ರಬುದ್ಧ ನಟನೆ ಇಡೀ ಕಥೆಯನ್ನು ಬೇರೆ ರೀತಿ ತೆಗೆದುಕೊಂಡು ಹೋಗಿದೆ. ಪ್ರತಿ ಪಾತ್ರಕ್ಕೂ ಇಲ್ಲಿ ನಟನೆಗೆ ಅದರದ್ದೇ ಆದ ಪ್ರಾಮುಖ್ಯತೆ ನೀಡಿದ್ದು ವಿಶೇಷ. ಇದರ ಜೊತೆಗೆ ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಸಹ ಮುಖ್ಯಪಾತ್ರ ನಿರ್ವಹಿಸಿದ್ದಾರೆ.

ಇ.ಕೆ.ಫಿಕ್ಚರ್ಸ್ ಬ್ಯಾನರ್‌ ಅಡಿ ಮುಂಗಾರು ಮಳೆ-2 ಖ್ಯಾತಿಯ ಜಿ.ಗಂಗಾಧರ್ ಮ್ಯೂಟ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಜಿ.ಗಂಗಾಧರ್ ಅವರು ಮುಂಗಾರುಮಳೆ ಮತ್ತು ಮೊಗ್ಗಿನ ಮನಸು ಚಿತ್ರಗಳಲ್ಲೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದರು. ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಅವರೊಂದಿಗೆ ಮುಂಗಾರುಮಳೆ -2 ರಲ್ಲಿ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. 5 ಭಾಷೆಗಳಲ್ಲಿ ತೆರೆ ಕಾಣಲಿರುವ ಮ್ಯೂಟ್ ಚಿತ್ರ ಈಗಾಗಲೇ ನಮ್ಮ ಫ್ಲಿಕ್ಸ್​ನಲ್ಲಿ​ ತೆರೆಕಂಡು ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಫಿಲ್ಮ್​ ಅವಾರ್ಡ್: 'ಆರ್​ಆರ್​ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು

ABOUT THE AUTHOR

...view details