ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದೇ ರೀತಿ ನಟಿಯೊಬ್ಬರು ಇಲ್ಲಿ ನಿರ್ದೇಶಕಿಯಾಗಲು ತಯಾರಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ ಸಿನಿಮಾ ಅಪೂರ್ವ. ಆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ನಟಿ ಅಪೂರ್ವ. ಆ ಹೆಸರಿನಿಂದಲೇ ಸ್ಯಾಂಡಲ್ವುಡ್ನಲ್ಲಿ ಅಪೂರ್ವ ಫೇಮಸ್ ಆದರು. ಬಳಿಕ ವಿಕ್ಟರಿ 2, ಕೃಷ್ಣ ಟಾಕೀಸ್ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಪೂರ್ವ ಇದೀಗ ನಿರ್ದೇಶಕಿಯಾಗಿದ್ದಾರೆ.
ಹೌದು, 'ಓ ನನ್ನ ಚೇತನ' ಚಿತ್ರದ ಮೂಲಕ ಅಪೂರ್ವ ಅವರು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರ ನಿರ್ದೇಶನದ ಮೊದಲ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇದೀಗ ಓ ನನ್ನ ಚೇತನ ಚಿತ್ರದ ಮೊದಲ ಹಾಡು ಸೋಮವಾರ ರಿಲೀಸ್ ಆಗಿದೆ. ಅಷ್ಟೇ ಅಲ್ಲ ಅಪೂರ್ವ ತಮ್ಮ ಹೆಸರಿನ ಮುಂದೆ ಆಶಾದೇವಿ ಅಂತಾನೂ ಸೇರಿಕೊಂಡಿದ್ದಾರೆ. ಒಂದು ಫೋನ್ ಸುತ್ತಾ ಸುತ್ತೋ ಹಳ್ಳಿ ಸೊಗಡಿನ ಸಿನಿಮಾ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಹರಿ ಸಂತು ಸಾಹಿತ್ಯವಿರುವ ಅಂಜು ಹಾಡು ಇವತ್ತು ಎ2 ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.