ಕರ್ನಾಟಕ

karnataka

ETV Bharat / entertainment

'ಕಾಂತಾರ' ಅನುಭವವನ್ನು ಮಿಸ್ ಮಾಡ್ಕೊಬೇಡಿ: ದೇವಸೇನ ಅನುಷ್ಕಾ ಶೆಟ್ಟಿ - ಹೊಂಬಾಳೆ ಫಿಲ್ಮ್ಸ್

ಕಾಂತಾರ ಸಿನಿಮಾ ವೀಕ್ಷಿಸಿದೆ. ತುಂಬಾ ತುಂಬಾ ಇಷ್ಟವಾಯಿತು. ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ಅದ್ಭುತವಾಗಿದೆ. ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಟಿ ಅನುಷ್ಕಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

actress anushka shetty compliments on kantara movie
ಕಾಂತಾರಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನುಷ್ಕಾ ಶೆಟ್ಟಿ

By

Published : Oct 16, 2022, 5:05 PM IST

ಭಾರತೀಯ ಚಿತ್ರರಂಗದ ಮೂಲೆ ಮೂಲೆಗಳಿಂದ ಕೇಳಿ ಬರುತ್ತಿರೋದು ಒಂದೇ ಹೆಸರು, ಅದು ಕಾಂತಾರ. ಸಿನಿ ಪ್ರಿಯರು ಮಾತ್ರವಲ್ಲ, ಬಹುಭಾಷಾ ಸ್ಟಾರ್​ ನಟರು ಸಹ ಕಾಂತಾರವನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದೀಗ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಕೂಡ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಈಗ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಿಂದಿ, ತಮಿಳು, ತೆಲುಗಿನಲ್ಲೂ ಸಿನಿಮಾ ರಿಲೀಸ್​ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಚಿತ್ರವನ್ನು ನೋಡಿದ ಪರಭಾಷೆಯ ಸ್ಟಾರ್​ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡತಿ ಅನುಷ್ಕಾ ಶೆಟ್ಟಿ ಕೂಡ ಕಾಂತಾರ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಾಂತಾರ ಹವಾ: ರಿಷಬ್ ಶೆಟ್ರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಾರ್ತಿ

ಕಾಂತಾರ ಸಿನಿಮಾ ವೀಕ್ಷಿಸಿದೆ. ತುಂಬಾ ತುಂಬಾ ಇಷ್ಟವಾಯಿತು. ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ಅದ್ಭುತವಾಗಿದೆ. ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇದನ್ನು ಮಿಸ್ ಮಾಡ್ಕೋಬೇಡಿ ಎಂದು ನಟಿ ಅನುಷ್ಕಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಕಾಂತಾರ ತಂಡಕ್ಕೆ ಶುಭ ಕೋರಿದ ಕೇಂದ್ರ ಸಚಿವ ಅನುರಾಗ್.. ಎರಡನೇ ಬಾರಿ ಸಿನಿಮಾ ನೋಡಿದ ಬಾಹುಬಲಿ

ABOUT THE AUTHOR

...view details