ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಫೇಮಸ್ ಸ್ಟಾರ್ ದಂಪತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು. ಇಬ್ಬರೂ ತಮ್ಮದೇ ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರಿಬ್ಬರ ಸುದ್ದಿ ತಿಳಿದುಕೊಳ್ಳಲು ಬಯಸುವ ಅಭಿಮಾನಿಗಳಿಗಾಗಿ ಇದೀಗ ಅನುಷ್ಕಾ ಶರ್ಮಾ 'ಮಿಸ್ ಯೂ ಹಬ್ಬಿ' ಎಂದು ಕ್ಯಾಪ್ಷನ್ ಕೊಟ್ಟು ಹೊಸ ಫೋಟೋ ಶೇರ್ ಮಾಡಿದ್ದಾರೆ.
ಚಿತ್ರದಲ್ಲಿ ದಂಪತಿ ಪರಸ್ಪರ ಹತ್ತಿರ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದು. ಅನುಷ್ಕಾ, ವಿರಾಟ್ ಬೆಚ್ಚಗಿನ ಬಟ್ಟೆ ಧರಿಸಿದ್ದಾರೆ. ಕ್ರಿಕೆಟ್ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಸ್ವದೇಶದಕ್ಕೆ ಆಗಮಿಸಿದ್ದು, ಲಂಡನ್ನಲ್ಲಿರುವ ಅನುಷ್ಕಾ ಶರ್ಮಾ ಪತಿಯ ಕುರಿತು ಭಾವನಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.