ಕರ್ನಾಟಕ

karnataka

ETV Bharat / entertainment

ರಿಲಾಕ್ಸ್​ ಮೂಡ್​ನಲ್ಲಿ ನಟಿ ಆಲಿಯಾ ಭಟ್​: ವಾಟರ್​ ಬೇಬಿ ಫೋಟೋಗೆ ಅರ್ಜುನ್​ ಕಪೂರ್​ ಕಮೆಂಟ್​​ - ಹಾಲಿವುಡ್​ನಲ್ಲಿ ಮೊದಲ ಬಾರಿಗೆ ಛಾಪು

ತಾವು ತಂಗಿರುವ ಹೊಟೇಲ್​ನಲ್ಲಿರುವ ಈಜುಕೊಳದಲ್ಲಿನ ಚಿತ್ರಗಳನ್ನು ನಟಿ ಆಲಿಯಾ ಭಟ್​​​ ಹಂಚಿಕೊಂಡಿದ್ದು, ವಾಟರ್​ ಬೇಬಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಈಗ ಕಮೆಂಟ್​ಗಳು ಬಂದಿವೆ.

Actress Alia Bhatt in a relaxed mood in New york
Actress Alia Bhatt in a relaxed mood in New york

By ETV Bharat Karnataka Team

Published : Sep 14, 2023, 5:10 PM IST

Updated : Sep 15, 2023, 12:05 PM IST

'ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ' ಸಿನಿಮಾ ಯಶಸ್ಸು ಮತ್ತು 'ಹಾರ್ಟ್​ ಆಫ್​​ ಸ್ಟೋನ್'​ ಚಿತ್ರದ ಮೂಲಕ ಹಾಲಿವುಡ್​ನಲ್ಲಿ ಮೊದಲ ಬಾರಿಗೆ ಛಾಪು ಮೂಡಿಸಿದ ಬಾಲಿವುಡ್​ ನಟಿ ಆಲಿಯಾ ಭಟ್​​, ಇದೀಗ ರಜೆ ಮೂಡ್​ನಲ್ಲಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಜಂಜಾಟ ಮತ್ತು ಕುಟುಂಬದಿಂದ ಕೊಂಚ ವಿರಾಮ ಪಡೆದಿರುವ ನಟಿ ಸದ್ಯ ನ್ಯೂಯಾರ್ಕ್​ನಲ್ಲಿ ರಿಲಾಕ್ಸ್​ ಮೂಡ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವು ತಂಗಿರುವ ಹೊಟೇಲ್​ನಲ್ಲಿರುವ ಈಜುಕೊಳದಲ್ಲಿನ ಚಿತ್ರವನ್ನು ಹಂಚಿಕೊಂಡಿದ್ದು, ವಾಟರ್​ ಬೇಬಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್​​​ಸ್ಟಾಗ್ರಾಂನಲ್ಲಿನ ಈ ಫೋಟೋವನ್ನು ಹಂಚಿಕೊಂಡಿರುವ ಅವರು ಡಿಎನ್​ಡಿ ಎಂದು ಅಡಿ ಬರೆದು ಸ್ಲೀಪಿಂಗ್​ ಎಮೋಜಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆಲಿಯಾ ಕಡು ಗುಲಾಬಿ ಸ್ವಿಮ್​ಸೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಆಲಿಯಾ ವಿಶ್ರಾಂತಿ ಮೂಡ್​ನಲ್ಲಿದ್ದು, ಶಾಂತ ಸ್ಥಿತಿಯಲ್ಲಿದ್ದಾರೆ. ವಿಡಿಯೋದಲ್ಲಿ ನನ್ನ 'ಈ ದಿನದ ದಿನಚರಿ ರಜೆ... ಅಷ್ಟೇ. ಅದು ನನ್ನ ದಿನಚರಿ' ಎಂದು ಬರೆದುಕೊಂಡಿದ್ದಾರೆ.

ನಟಿ ಆಲಿಯಾ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದು, ಈ​ ಮೂಲಕ ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ನನಗೂ ಕೂಡಾ ತೇಲುವುದು ಇಷ್ಟ' ಎಂದು ನೆಟಿಜನ್​ ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು 'ಇದು ಸುಂದರ. ಲವ್​ ಇಟ್​​. ಸ್ಪೂರ್ತಿದಾಯಕ ಮತ್ತು ಪರ್ಫೆಕ್ಟ್'​ ಎಂದಿದ್ದಾರೆ. ಮತ್ತೊಬ್ಬರು 'ವಾಟರ್​ ಬೇಬಿ' ಎಂದು ಕರೆದಿದ್ದಾರೆ. ಮತ್ತೊಬ್ಬ ಅಭಿಮಾನಿ 'ಕ್ಯೂಟ್​ ಕ್ಯೂಟಿ ನೀನು. ನನ್ನ ವಾಟರ್​ ಬೇಬಿ' ಎಂದಿದ್ದಾರೆ. ನಟ ಅರ್ಜುನ್​ ಕಪೂರ್​ ಕೂಡ ಕಮೆಂಟ್​ ಮಾಡಿದ್ದು, ಈ ಶೆಡ್ಯೂಲ್​ ನನಗೆ ಬೇಕಿದೆ ಮತ್ತು ಈ ಹೋಟೆಲ್​ ನನ್ನ ಜೀವನ ಎಂದಿದ್ದಾರೆ.

ಇತ್ತೀಚಿಗೆ ನಟಿ ಆಲಿಯಾ ಭಟ್​, ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ 343.98 ಕೋಟಿ ರೂಗಳ ಗಳಿಕೆ ಮಾಡಿದೆ. ಕರಣ್​ ಜೋಹರ್​ ನಿರ್ದೇಶನದ ಈ ಚಿತ್ರದಲ್ಲಿ ಬಹು ತಾರಾಗಣದಲ್ಲಿ ನಟಿಸಿದ್ದರು. ಸದ್ಯ ಓಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಕೂಡ ಚಿತ್ರ ಬಿಡುಗಡೆಗೊಂಡಿದ್ದು, ಅಮೆಜಾನ್​ ಪ್ರೈಂ ​ ವಿಡಿಯೋದಲ್ಲಿ ಈ ಸಿನಿಮಾ ಲಭ್ಯವಿದೆ. ಸದ್ಯ ಈ ಚಿತ್ರ ಅಮೆಜಾನ್​ನಲ್ಲಿ 30 ದಿನದ ರೆಂಟ್​​ ಲಭ್ಯವಿದೆ. ಶೀಘ್ರದಲ್ಲೇ ಚಾರ್ಜ್​​ ಇಲ್ಲದೇ ಇತರ ಗ್ರಾಹಕರಿಗೂ ಲಭ್ಯವಾಗಲಿದೆ.

ಇದನ್ನೂ ಓದಿ: ಅಭಿಮಾನಿ ಕೆನ್ನೆಗೆ ಪ್ರೀತಿಯ ಪೆಟ್ಟು ಕೊಟ್ಟ ನಟಿ ರೇಖಾ: ವಿಡಿಯೋ ವೈರಲ್​

Last Updated : Sep 15, 2023, 12:05 PM IST

ABOUT THE AUTHOR

...view details