ಕರ್ನಾಟಕ

karnataka

ETV Bharat / entertainment

ಹಸೆಮಣೆ ಏರಲು ಸಜ್ಜಾದ ಅದಿತಿ ಪ್ರಭುದೇವ.. ಅರಿಶಿಣ ಶಾಸ್ತ್ರ ಫೋಟೋಗಳು ಇಲ್ಲಿವೆ - Aditi Prabhudeva photos

ನಾಳೆ ಬೆಂಗಳೂರಿನ ಪ್ಯಾಲೆಸ್​ ಗ್ರೌಂಡ್​ನಲ್ಲಿ ನಟಿ ಅದಿತಿ ಪ್ರಭುದೇವ ಮದುವೆ ನಡೆಯಲಿದೆ.

Actress Aditi Prabhudeva haldi shastra
ಅದಿತಿ ಪ್ರಭುದೇವ ಅರಿಶಿಣ ಶಾಸ್ತ್ರ ಫೋಟೋಗಳು

By

Published : Nov 26, 2022, 5:56 PM IST

Updated : Nov 26, 2022, 6:17 PM IST

ಕನ್ನಡ ಚಿತ್ರರಂಗದಲ್ಲಿ ಕಿರುತೆರೆಯಿಂದ ಸಿನಿ‌ ಜರ್ನಿ ಆರಂಭಿಸಿದ ಚಂದವನದದ ಗೊಂಬೆ ಅದಿತಿ ಪ್ರಭುದೇವ ತಮ್ಮ ಮದುವೆ ಸಂಭ್ರಮದಲ್ಲಿದ್ದಾರೆ. ಅಭಿನಯ, ಫೊಟೋಶೂಟ್ ಜೊತೆಗೆ ನಡೆ-ನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಅರಿಶಿಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ಅದಿತಿ ಪ್ರಭುದೇವ

ನಾಳೆ ಬೆಂಗಳೂರಿನ ಪ್ಯಾಲೆಸ್​ ಗ್ರೌಂಡ್​ನಲ್ಲಿ ಮದುವೆಯ ಮುಹೂರ್ತ ಕಾರ್ಯ ನಡೆಯಲಿದ್ದು, ಇಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅರಿಶಿನ ಶಾಸ್ತ್ರ ನಡೆದಿದ್ದು, ಅದಿತಿ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಉದ್ಯಮಿ ಯಶಸ್ ಕೈ ಹಿಡಿಯಲಿದ್ದಾರೆ ನಟಿ ಅದಿತಿ ಪ್ರಭುದೇವ

ಚಿಕ್ಕಮಗಳೂರು ಮೂಲದ ಯಶಸ್ (ಯಶಸ್ವಿ) ಎಂಬ ಉದ್ಯಮಿಯ ಕೈಹಿಡಿಯಲಿದ್ದು, ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ. ತಂದೆ - ತಾಯಿ ನೋಡಿದ ಹುಡುಗನ ಜೊತೆ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಈಟಿವಿ ಭಾರತಕ್ಕೆ ಈ ಮೊದಲು ಸ್ವತಃ ನಟಿಯೇ ತಿಳಿಸಿದ್ದರು. ಯಶಸ್ ಉದ್ಯಮಿ ಮಾತ್ರವಲ್ಲದೇ ಓರ್ವ ರೈತ ಕೂಡ ಹೌದು. ಕಾಫಿ ಎಸ್ಟೇಟ್ ಬ್ಯುಸಿನೆಸ್ ಕೂಡ ಇದೆ.​

ಇದನ್ನೂ ಓದಿ:ಸದ್ದಿಲ್ಲದೇ ಎಂಗೇಜ್ ಆದ ಶ್ಯಾನೇ ಟಾಪಾಗವ್ಳೆ ಬೆಡಗಿ ಅದಿತಿ ಪ್ರಭುದೇವ!

ಕಳೆದ ಡಿಸೆಂಬರ್​ನಲ್ಲಿ ಅದಿತಿ ಪ್ರಭುದೇವ ಎಂಗೇಜ್​ಮೆಂಟ್ ಮಾಡಿಕೊಂಡಿರುವ ಹುಡುಗನ ಜೊತೆ ಫೋಟೋ ಹಾಕಿಕೊಂಡು, 'ಒಂದು ಕನಸಿನಂತೆ ಈ ಕನಸು ನನಸಾಯಿತು' ಎಂದು ಬರೆದುಕೊಂಡಿದ್ದರು. ಆ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್​ ಆಗಿತ್ತು.

ಇದನ್ನೂ ಓದಿ:ಉಗ್ರಂ ಸಿನಿಮಾದ ಬೆಡಗಿಗೆ ಕೂಡಿ‌ ಬಂತು ಕಂಕಣ‌ ಭಾಗ್ಯ.. ಹರಿಪ್ರಿಯಾ ಕೈಹಿಡಿಯುವ ಹುಡುಗ ಯಾರು ಗೊತ್ತಾ?

Last Updated : Nov 26, 2022, 6:17 PM IST

ABOUT THE AUTHOR

...view details