ಕನ್ನಡ ಚಿತ್ರರಂಗದ ಸುಂದರ ನಟಿ ಅದಿತಿ ಪ್ರಭುದೇವ ಸೋಮವಾರ ಉದ್ಯಮಿ ಯಶಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿಈ ಸುಂದರ ಜೋಡಿಯ ಮದುವೆ ರಿಸೆಪ್ಷನ್ ಅದ್ಧೂರಿಯಾಗಿ ನಡೆದಿತ್ತು.
ಇದರಲ್ಲಿ ಚಿತ್ರರಂಗ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಅದಿತಿ ಪ್ರಭುದೇವ ಕೆಂಪು ಬಣ್ಣದ ಕಾಸ್ಟೂಮ್ನಲ್ಲಿ ಮಿಂಚಿದರೆ, ಬ್ಲೂ ಬ್ಲೇಜರ್ನಲ್ಲಿ ಯಶಸ್ ಕಂಗೊಳಿಸುತ್ತಿದ್ದರು. ಈ ಸುಂದರ ಜೋಡಿಯ ಆರತಕ್ಷತೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಸಿಎಂ ಬಸವರಾಜ್ ಬೊಮ್ಮಾಯಿ, ವಿ. ಸೋಮಣ್ಣ, ನಟ ಶರಣ್, ಮೇಘಾ ಶೆಟ್ಟಿ, ರಚನಾ ಇಂದರ್ , ಶ್ರೀನಗರ ಕಿಟ್ಟಿ, ರಂಗಾಯಣ ರಘು, ನೀನಾಸಂ ಸತೀಶ್, ಮೇಘನಾ ರಾಜ್, ಚಿಕ್ಕಣ್ಣ ಸೇರಿದಂತೆ ಇತರರು ಆಗಮಿಸಿದ್ದರು.