ಕರ್ನಾಟಕ

karnataka

ETV Bharat / entertainment

Adah Sharma: ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾದ ನಟಿ ಅದಾ ಶರ್ಮಾ.. ಫ್ಯಾನ್ಸ್​ ಆತಂಕ! - ದಿ ಕೇರಳ ಸ್ಟೋರಿ

ನಟಿ ಅದಾ ಶರ್ಮಾ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

Adah sharma
ಅದಾ ಶರ್ಮಾ

By

Published : Aug 3, 2023, 12:52 PM IST

'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಹಾರ ಅಲರ್ಜಿ (ಫುಡ್​ ಅಲರ್ಜಿ) ಮತ್ತು ಅತಿಸಾರದಿಂದ ಅಸ್ವಸ್ಥರಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಟಿಗೆ ಸಂಬಂಧಿಸಿದ ಪೋಸ್ಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದಾ ಶರ್ಮಾ ಆರೋಗ್ಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

'ರಣವಿಕ್ರಮ' ನಾಯಕಿ:ನಟಿ ಅದಾ ಶರ್ಮಾ ತೆಲುಗು, ತಮಿಳು, ಹಿಂದಿ ಮಾತ್ರವಲ್ಲದೇ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.​ ಪವನ್​ ಒಡೆಯರ್​ ನಿರ್ದೇಶನದ ಈ ಚಿತ್ರ ಸೂಪರ್​ ಹಿಟ್​ ಆಗಿತ್ತು. ಸಿನಿಮಾ ಮಾತ್ರವಲ್ಲದೇ ವೆಬ್​ ಸೀರೀಸ್​, ಆಲ್ಬಮ್​ ಸಾಂಗ್ಸ್​ ಮತ್ತು ಕಿರುಚಿತ್ರಗಳಲ್ಲಿಯೂ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ. 'ಹಾರ್ಟ್ ಅಟ್ಯಾಕ್' ಚಿತ್ರದ ಮೂಲಕ ಟಾಲಿವುಡ್‌ಗೂ ಎಂಟ್ರಿ ಕೊಟ್ಟು ತೆಲುಗು ಪ್ರೇಕ್ಷಕರನ್ನು ಮನಸ್ಸನ್ನು ಗೆದ್ದಿದ್ದರು.

ಇದನ್ನೂ ಓದಿ:'ದಿ ಕೇರಳ ಸ್ಟೋರಿ’ ನಟನೆಗೆ ವಿಶೇಷ ಮೆಚ್ಚುಗೆ ಪಡೆದ 'ರಣವಿಕ್ರಮ'ನ ಬೆಡಗಿ ಅದಾ ಶರ್ಮಾ

'ದಿ ಕೇರಳ ಸ್ಟೋರಿ'... ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಬಹುಭಾಷಾ ನಟಿ ಅದಾ ಶರ್ಮಾ ಫೇಮಸ್​ ಆಗಿದ್ದಾರೆ. ಈ ಸಿನಿಮಾ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಗಲ್ಲಾಪೆಟ್ಟಿಯಲ್ಲಿ ಅಭೂತಪೂರ್ವ ಕಲೆಕ್ಷನ್​ಗಳನ್ನು ಮಾಡಿದೆ. 'ದಿ ಕೇರಳ ಸ್ಟೋರಿ' ಚಿತ್ರ ಕೇರಳದ ಹಿಂದೂ ಮಹಿಳೆ (ಅದಾ ಶರ್ಮಾ) ಇಸ್ಲಾಂಗೆ ಮತಾಂತರಗೊಳ್ಳಲು ಬ್ರೈನ್‌ವಾಶ್ ಮಾಡಲ್ಪಟ್ಟ ಪ್ರಯತ್ನ ಮತ್ತು ನಂತರ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ಗೆ ಸೇರಲು ಸಿರಿಯಾಕ್ಕೆ ಕಳ್ಳಸಾಗಣೆ ಮಾಡುವ ಕಥೆಯನ್ನಾಧರಿಸಿದೆ. ಚಿತ್ರವನ್ನು ವಿಪುಲ್ ಅಮೃತ್​​​ಲಾಲ್ ಶಾ ನಿರ್ಮಿಸಿದ್ದಾರೆ. ವಿವಾದಗಳ ನಡುವೆಯೂ 'ದಿ ಕೇರಳ ಸ್ಟೋರಿ' ಚಿತ್ರ ಮೇ 5ರಂದು ಬಿಡುಗಡೆಗೊಂಡಿತ್ತು.

'ಕಮಾಂಡೋ' ವೆಬ್​ಸಿರೀಸ್​ ಪ್ರಚಾರದಲ್ಲಿ ಬ್ಯುಸಿ: 'ದಿ ಕೇರಳ ಸ್ಟೋರಿ' ನಂತರ ಅದಾ ಶರ್ಮಾ 'ಕಮಾಂಡೋ' ವೆಬ್​ಸಿರೀಸ್​ನಲ್ಲಿ ನಟಿಸಿದ್ದಾರೆ. ಆಗಸ್ಟ್​ 11 ರಿಂದ ಓಟಿಟಿ ಫ್ಲಾಟ್​ಫಾರ್ಮ್ ಹಾಟ್​ಸ್ಟಾರ್​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ. ಸದ್ಯ ನಟಿ ಈ ವೆಬ್​ಸರಣಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಆದರೆ ಈ ಮಧ್ಯೆ ಅವರು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಲ್ಲದೇ ಅದಾ ಶರ್ಮಾ ಸೋಷಿಯಲ್​ ಮೀಡಿಯಾದಲ್ಲೂ ಸಖತ್​ ಆಕ್ಟೀವ್​ ಆಗಿದ್ದಾರೆ. ಇನ್​ಸ್ಟಾದಲ್ಲಿ 8.7 ಮಿಲಿಯನ್​ ಫಾಲೋವರ್ಸ್​ ಸಂಪಾದಿಸಿದ್ದಾರೆ.

ಇದನ್ನೂ ಓದಿ:Photos: ಮಳೆ, ಚಳಿ, ಬಿಸಿಲು ಲೆಕ್ಕಕ್ಕಿಲ್ಲ - 'ಕೇರಳ ಸ್ಟೋರಿ' ಅದಾ ಶರ್ಮಾ ಶ್ರಮ

ABOUT THE AUTHOR

...view details