ದುನಿಯಾ ಸೂರಿ ನಿರ್ದೇಶನದ ಹಾಗೂ ಅಭಿಷೇಕ್ ಅಂಬರೀಶ್ ಕಾಂಬೋದಲ್ಲಿ ಮೂಡಿಬರ್ತಾ ಇರೋ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್. ಟ್ರೈಲರ್ ಹಾಗು ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಟಾಕ್ ಆಗುತ್ತಿರುವ ಬ್ಯಾಡ್ ಮ್ಯಾನರ್ಸ್ ನಾಳೆ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಗೆಲುವಿಗಾಗಿ ಅಣ್ಣನ ಸ್ಥಾನದಲ್ಲಿ ನಟ ದರ್ಶನ್ ನಿಂತುಕೊಂಡು ಈ ಚಿತ್ರದ ಪ್ರಮೋಷನ್ ಮಾಡ್ತಾ ಇದ್ದಾರೆ.
ಈ ಸಿನಿಮಾ ಶುರುವಾದಾಗ ದರ್ಶನ್ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಕ್ಲಾಪ್ ಮಾಡಿದ್ರು. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರವನ್ನು ನೋಡಿ ಅಭಿಷೇಕ್ ಟೀ ಶರ್ಟ್ ಮೇಲೆ 5ಕ್ಕೆ 5 ರೇಟಿಂಗ್ ಕೊಟ್ಟಿದ್ದರು. ಈಗ ಅಂಬರೀಶ್ ಅಪ್ಪಾಜಿ ಮೇಲೆ ಇರುವ ಗೌರವ ಪ್ರೀತಿಯಿಂದ ಅಭಿಷೇಕ್ ಅಂಬರೀಶ್ ಜೊತೆ ದರ್ಶನ್ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಗ್ಗೆ ಹಾಗು ಅಭಿ ಬಗ್ಗೆ ಸಂದರ್ಶನ ಕೊಟ್ಟಿದ್ದಾರೆ.
ದರ್ಶನ್ ಅವರು, ಅಂಬಿ ಅಪ್ಪಾಜಿ ಮಾಡಿರುವ ಸಹಾಯದ ಮುಂದೆ ನಾನು ಮಾಡ್ತಾ ಇರೋದು ಸಹಾಯ ಚಿಕ್ಕದ್ದು. ಯಾಕಂದ್ರೆ ಅಭಿ ಎರಡನೇ ಸಿನಿಮಾ ಅಂದಾಕ್ಷಣ ನಾನು ಸಹಾಯ ಮಾಡಲೇಬೇಕು. ಮೊದಲ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಈಗ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಭಿಷೇಕ್ ಅಂಬರೀಶ್, ಬ್ಯಾಡ್ ಮ್ಯಾನರ್ಸ್ ಚಿತ್ರದ ಮೊದಲನೇ ದಿನ ಮೊದಲ ಸೀನ್ನಲ್ಲಿ ನಾನು ಹೆದರಿಕೊಂಡಿರಲಿಲ್ಲ. ಯಾಕಂದ್ರೆ ಸೂರಿ ಜೊತೆ ಪ್ರತಿಯೊಬ್ಬ ನಟನಿಗೆ ಕೆಲಸ ಮಾಡಬೇಕು ಅಂತಾ ಆಸೆ ಇರುತ್ತೆ. ಅದೇ ರೀತಿ ನನಗೂ ಸೂರಿ ಸಾರ್ ಜೊತೆ ಕೆಲಸ ಮಾಡಿದ್ದು ಸಾಕಷ್ಟು ಕಲಿತುಕೊಂಡೆ ಅಂತಾರೆ ಅಭಿಷೇಕ್.