ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ವಿಶ್ವದ ಗಮನ ಸೆಳೆದವರು ರಾಕಿಂಗ್ ಸ್ಟಾರ್ ಯಶ್. ಇದೀಗ ಇವರು ಸೌತ್ ಸಿನಿಮಾ ಇಂಡಸ್ಟ್ರಿಯ ರೇಸ್ನಲ್ಲಿರುವ ಓಡುವ ಕುದುರೆಯೂ ಹೌದು. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಬಾಚುವ ಮೂಲಕ ಯಶ್ ಅವರ ಸ್ಟಾರ್ ಡಮ್ ಅನ್ನು ಆಕಾಶದೆತ್ತರಕ್ಕೆ ಏರಿಸಿತು. ಈ ಸಿನಿಮಾ ತೆರೆಕಂಡು ಒಂದೂವರೆ ವರ್ಷ ಕಳೆಯುತ್ತಿದೆ. ಆದರೆ ನಟನ ಮುಂದಿನ ಸಿನಿಮಾ ಯಾವುದು ಅನ್ನೋದು ಬೆಂಗಳೂರಿನ ಗಾಲ್ಫ್ ರಸ್ತೆಯಲ್ಲಿರುವ ಯಶ್ ಅಪಾರ್ಟ್ಮೆಂಟ್ನಿಂದ ಹಿಡಿದು ಬಾಲಿವುಡ್ ಅಂಗಳದವರೆಗೂ ಕೇಳಿ ಬರುತ್ತಿರುವ ಪ್ರಶ್ನೆ.
ಯಶ್ ಅವರು ಮುಂದಿನ ಸಿನಿಮಾ ಮಾಡಿದರೆ ಕನ್ನಡದಲ್ಲೇ ಮಾಡ್ತಾರಾ? ಹಿಂದಿ ಅಥವಾ ತೆಲುಗಿನಲ್ಲಿ ಮಾಡ್ತಾರಾ? ಯಾವ ನಿರ್ದೇಶಕನ ಜೊತೆ ಮುಂದಿನ ಚಿತ್ರ? ಅದು ಪ್ಯಾನ್ ಇಂಡಿಯಾ ಸಿನಿಮಾನಾ? ಅನ್ನೋದೆಲ್ಲ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ.
ಆದರೆ ಇದೀಗ ಕಳೆದ 20 ತಿಂಗಳುಗಳಿಂದ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಯಶ್ ಸಿಹಿಸುದ್ದಿ ನೀಡಿದ್ದಾರೆ. ಹೌದು, ಯಶ್ 19ನೇ ಸಿನಿಮಾ ಯಾವುದು? ಎಂಬುದರ ಬಗ್ಗೆ ಈವರೆಗೆ ಒಂದೇ ಒಂದು ಅಧಿಕೃತ ಮಾಹಿತಿ ಸಹ ಸಿಕ್ಕಿರಲಿಲ್ಲ. ಆದರೆ ತೆರೆಮರೆಯಲ್ಲಿ ಯಶ್ ಭರ್ಜರಿ ತಯಾರಿ ನಡೆಸಿದ್ದಾರೆ ಎಂಬುದರ ಬಗ್ಗೆ ಅವರೇ ಹಿಂಟ್ ಬಿಟ್ಟುಕೊಟ್ಟಿದ್ದರು. ಇದೀಗ ಯಶ್ ಅಧಿಕೃತ ಮಾಹಿತಿ ಹೊರಹಾಕಿದ್ದಾರೆ. ಇದು ತುದಿಗಾಲಲ್ಲಿ ನಿಂತು ಅಪ್ಡೇಟ್‌ಗಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳ ಸಂತಸ ಮತ್ತು ನಿರೀಕ್ಷೆ ಹೆಚ್ಚಿಸಿದೆ.