ಹೈದರಾಬಾದ್:ವಿಶಾಲ್ ಮತ್ತು ಎಸ್‌ಜೆ ಸೂರ್ಯ ಅಭಿನಯದ ಇತ್ತೀಚಿನ ತಮಿಳು ಚಿತ್ರ ಮಾರ್ಕ್ ಆ್ಯಂಟೋನಿಗೆ ಪ್ರೇಕ್ಷಕರ ಮನಗೆಲ್ಲುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ಗೆಲುವನ್ನು ಮುಂದುವರೆಸಿದೆ. ಚಿತ್ರದ ನಿರ್ಮಾಪಕರು ಈಗ ಹಿಂದಿ-ಡಬ್ ಆವೃತ್ತಿಯನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ. ''ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮಾರ್ಕ್ ಆ್ಯಂಟೋನಿ ಹಿಂದಿ ಸೆನ್ಸಾರ್‌ಶಿಪ್‌ಗಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧಿಕಾರಿಗಳಿಗೆ 6.5 ಲಕ್ಷ ರೂ. ಲಂಚ ಕೇಳಿದ್ದರು ಎಂದು ನಟ ವಿಶಾಲ್ ಬಹಿರಂಗವಾಗಿಯೇ ಆರೋಪ ಮಾಡಿದ್ದಾರೆ.
ನಟ ವಿಶಾಲ್ ಆರೋಪ ವಿಡಿಯೋದಲ್ಲೇನಿದೆ?:ಈ ಚಿತ್ರವು ಅಧಿಕ್ ರವಿಚಂದ್ರನ್ ನಿರ್ದೇಶನದ ವೈಜ್ಞಾನಿಕ ಕಾಲ್ಪನಿಕ ಟೈಮ್ ಟ್ರಾವೆಲ್ ಕುರಿತ ಕಥಾ ಹಂದರವನ್ನು ಹೊಂದಿದೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾದ ನಂತರ ಈ ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಈಗ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ. ಗಳಿಸಿದೆ ಎಂದು ನಟ ವಿಶಾಲ್, ಸಾಮಾಜಿಕ ಜಾಲತಾಣವಾದ ಎಕ್ಸ್ ಪ್ರೊಫೈಲ್‌ನಲ್ಲಿ ಸಮಸ್ಯೆಯನ್ನು ವಿವರಿಸುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸುದೀರ್ಘವಾದ ವಿವರಣೆಯನ್ನು ನೀಡಿದ್ದಾರೆ.
"ಭ್ರಷ್ಟಾಚಾರವನ್ನು ಬೆಳ್ಳಿತೆರೆಯಲ್ಲಿ ತೋರಿಸುವುದು ಒಳ್ಳೆಯದು. ಆದರೆ ನಿಜ ಜೀವನದಲ್ಲಿ ಅಲ್ಲ. ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಿಬಿಎಫ್ಸಿಯ ಮುಂಬೈ ಕಚೇರಿಯಲ್ಲಿ ಇನ್ನೂ ಕೆಟ್ಟದಾಗಿ ನಡೆಯುತ್ತಿದೆ. ನನ್ನ ಚಲನಚಿತ್ರ ಮಾರ್ಕ್ ಆ್ಯಂಟೋನಿ ಹಿಂದಿ ಆವೃತ್ತಿಗೆ 6.5 ಲಕ್ಷಗಳನ್ನು ಪಾವತಿಸಬೇಕಾಗಿಯಿತು. ಎರಡು ವಹಿವಾಟುಗಳಲ್ಲಿ, ಸ್ಕ್ರೀನಿಂಗ್‌ಗೆ 3 ಲಕ್ಷ ಮತ್ತು ಪ್ರಮಾಣಪತ್ರಕ್ಕಾಗಿ 3.5 ಲಕ್ಷ ಲಂಚ ಕೇಳಿದ್ದಾರೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.