ಕನ್ನಡ ಚಿತ್ರರಂಗದಲ್ಲಿ ತ್ರಿವಿಕ್ರಮ ಸಿನಿಮಾ ಮೂಲಕ ಭರವಸೆ ನಟನಾಗಿ ಗಮನ ಸೆಳೆದ ನಟ ವಿಕ್ರಮ್ ರವಿಚಂದ್ರನ್. ಚೊಚ್ಚಲ ಚಿತ್ರದಲ್ಲಿ ಆ್ಯಕ್ಟಿಂಗ್, ಡ್ಯಾನ್ಸ್ ಮೂಲಕ ಕನ್ನಡಿಗರ ಹೃದಯ ಕದ್ದ ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ. ಈ ಬಾರಿ ಗ್ಯಾಂಗ್ಸ್ಟರ್ ಸಬ್ಜೆಕ್ಟ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದೆ.
ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಗ್ಯಾಂಗ್ಸ್ಟರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಕಥೆ ಕೇಳಿ ವಿಕ್ರಮ್ ರವಿಚಂದ್ರನ್ ಗ್ರೀನ್ ಸಿಗ್ನಲ್ ನೀಡಿದ್ದು, ಎರಡನೇ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ವಿಕ್ರಮ್ ತೆರೆ ಮೇಲೆ ಮಿಂಚಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಕನ್ನಡದಲ್ಲಿ 'ಹೆಡ್ ಬುಷ್' ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಾರ್ತಿಕ್ ರಾಜನ್ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.