ಕರ್ನಾಟಕ

karnataka

ETV Bharat / entertainment

'ನಿಲ್ಲದು ನಿನ್ನೊಂದಿಗಿನ ಕಲರವ, ನಾನೆಂದೂ ನಿನ್ನವ'.. ಅಗಲಿದ ಪತ್ನಿಯ ನೆನೆದು ವಿಜಯ್​ ಭಾವುಕ

Vijay Raghavendra: ಪತ್ನಿ ಸ್ಪಂದನಾರ ಅಗಲಿಕೆ ನೋವನ್ನು ವಿಜಯ​ ರಾಘವೇಂದ್ರ ಅಕ್ಷರ ರೂಪಕ್ಕಿಳಿಸಿದ್ದಾರೆ.

Actor Vijay Raghavendra
ಅಗಲಿದ ಪತ್ನಿಯ ನೆನದು ವಿಜಯ್​ ಭಾವುಕ

By

Published : Aug 18, 2023, 1:05 PM IST

Updated : Aug 18, 2023, 3:06 PM IST

ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾರದ್ದು ಸುಂದರ ದಾಂಪತ್ಯ. ಸ್ಯಾಂಡಲ್​ವುಡ್​ನ ಮಾದರಿ ದಂಪತಿಯೆಂದೇ ಗುರುತಿಸಿಕೊಂಡಿದ್ದರು. ಆದರೆ, ವಿಧಿಯಾಟ ಇವರ ಬಾಳಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿತು. ಯಾವುದೇ ಸುಳಿವಿಲ್ಲದೇ 'ಚಿನ್ನಾರಿಮುತ್ತನ ಚಿನ್ನ' ಬಾರದ ಲೋಕಕ್ಕೆ ಪಯಣಿಸಿ ಬಿಟ್ಟರು. ಸ್ಪಂದನಾ ಅವರು ಇಹಲೋಕ ತ್ಯಜಿಸಿ ಇಂದಿಗೆ 13 ದಿನಗಳಾಗಿವೆ. ಪತ್ನಿಯ ನಿಧನ ವಿಜಯ್​ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ. ನೋವಲ್ಲೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ.

ವಿಜಯ್​ ಭಾವನಾತ್ಮಕ ಪೋಸ್ಟ್​: ಇದೀಗ ಸ್ಪಂದನಾ ನಿಧನದ ನಂತರ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್​ವೊಂದನ್ನು ವಿಜಯ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನಸ್ಸಿನಲ್ಲಿರುವ ನೋವನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. "ಸ್ಪಂದನಾ.. ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ.." ಎಂದು ಪ್ರೀತಿಯ ಸಾಲುಗಳನ್ನು ಅಗಲಿದ ಪತ್ನಿಗಾಗಿ ಬರೆದುಕೊಂಡಿದ್ದಾರೆ.

ಆಗಸ್ಟ್​ 6 ರಂದು ಸ್ಪಂದನಾರವರು ಹೃದಯಾಘಾತದಿಂದ ನಿಧನರಾದರು. ಬ್ಯಾಕಾಂಕ್​ಗೆ ಸಂಬಂಧಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಬಳಿಕ ವಿದೇಶದಲ್ಲೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ನಂತರ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ಬೆಂಗಳೂರಿಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಲ್ಲೇಶ್ವರಂನಲ್ಲಿನ ಸ್ಪಂದನಾ ತಂದೆ ಬಿ.ಕೆ ಶಿವರಾಮ್​ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:ಇಂದು ಸ್ಪಂದನಾ ಅಂತ್ಯಕ್ರಿಯೆ.. ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಅವಕಾಶ

ದಿ.ಪುನೀತ್​ ರಾಜ್​ಕುಮಾರ್ ಪತ್ನಿ ಅಶ್ವಿನಿ ರಾಜ್​ಕುಮಾರ್​ ಹಾಗೂ ಕುಟುಂಬಸ್ಥರು, ಹಿರಿಯ ನಟ ದೊಡ್ಡಣ, ನಿರ್ದೇಶಕ ತರುಣ್ ಸುಧೀರ್, ನಟಿ ಸುಧಾರಾಣಿ, ಗಾಯಕ ವಿಜಯ ಪ್ರಕಾಶ್, ರಾಘವೇಂದ್ರ ರಾಜ್ ​ಕುಮಾರ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದರು. ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​, ಸ್ಪೀಕರ್​ ಯು ಟಿ ಖಾದರ್ ಸೇರಿದಂತೆ ರಾಜಕೀಯ ಗಣ್ಯರು ಆಗಮಿಸಿ ಸ್ಪಂದನಾ ಅಂತಿಮ ದರ್ಶನ ಪಡೆದಿದ್ದರು. ಆ ಬಳಿಕ ಸಂಜೆಯ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಬಳಿಕ ಆಗಸ್ಟ್​ 11 ರಂದು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಈ ವೇಳೆ ವಿಜಯ ರಾಘವೇಂದ್ರ, ಪುತ್ರ ಶೌರ್ಯ, ಸಹೋದರ ಶ್ರೀಮುರುಳಿ, ಚಿನ್ನೇಗೌಡ, ಸ್ಪಂದನಾರ ತಂದೆ ಬಿ.ಕೆ.ಶಿವರಾಂ ಸೇರಿದಂತೆ ಕುಟುಂಬಸ್ಥರು ಇದ್ದರು. ಪುತ್ರ ಶೌರ್ಯ ಅವರಿಗೆ ಪೂಜೆಗೂ ಮುನ್ನ ಕೇಶ ಮುಂಡನ ಮಾಡಿಸಲಾಗಿತ್ತು. ವಿಜಯ ರಾಘವೇಂದ್ರ ಅವರು ಪಿಂಡ ಪ್ರದಾನ, ನಕ್ಷತ್ರ ಹೋಮ ಸೇರಿದಂತೆ ಶ್ರಾದ್ಧಾ ವಿಧಿ-ವಿಧಾನ ನೆರವೇರಿಸಿದ ಬಳಿಕ ಅಸ್ಥಿ ವಿಸರ್ಜಿಸಿದ್ದರು.

ಇದನ್ನೂ ಓದಿ:Spandana funeral: ಪಂಚಭೂತಗಳಲ್ಲಿ ಸ್ಪಂದನಾ ಲೀನ; ಕಣ್ಣೀರಿನ ವಿದಾಯ ಹೇಳಿಕ ಪತಿ ವಿಜಯ್​ ರಾಘವೇಂದ್ರ

Last Updated : Aug 18, 2023, 3:06 PM IST

ABOUT THE AUTHOR

...view details