ಕರ್ನಾಟಕ

karnataka

ETV Bharat / entertainment

2026ರ ವಿಧಾನಸಭೆ ಚುನಾವಣೆ ತಯಾರಿಯೇ?: ರಾಜಕೀಯ ಪ್ರವೇಶದೊಂದಿಗೆ ಸಿನಿಮಾದಿಂದ ದೂರ ಸರಿಯಲಿದ್ದಾರಾ ದಳಪತಿ ವಿಜಯ್​?

ನಟ ದಳಪತಿ ವಿಜಯ್​ ಇಂದು ತಮ್ಮ ಅಭಿಮಾನಿಗಳು ಹಾಗೂ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯರೊಂದಿಗೆ 2026ರ ವಿಧಾನಸಭೆ ಚುನಾವಣೆ ತಯಾರಿ ಕುರಿತು ಚರ್ಚಿಸಲು ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Actor Vijay
ವಿಜಯ್​

By

Published : Jul 11, 2023, 7:51 PM IST

ಕಾಲಿವುಡ್​ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ರಾಜಕೀಯ ಅಖಾಡಕ್ಕೆ ಇಳಿಯಲು ಯೋಜಿಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ತಮಿಳು ರಾಜಕೀಯದ ಅಗ್ರಮಾನ್ಯ ನಾಯಕರ ನಿಧನದಿಂದ ಉಂಟಾದ ನಿರ್ವಾತವನ್ನು ತುಂಬುವ ಗುರಿಯನ್ನು ಅವರು ಹೊಂದಿದ್ದಾರೆ ಎನ್ನಲಾಗಿತ್ತು. ಇಂದು ನಟ ತಮ್ಮ ಪನೈಯೂರ್​ ಫಾರ್ಮ್​ನಲ್ಲಿ ಅಭಿಮಾನಿಗಳು ಹಾಗೂ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯರೊಂದಿಗೆ ಸಭೆ ನಡೆಸಿರುವುದಾಗಿ ತಿಳಿದು ಬಂದಿದೆ. ಇದು ವಿಜಯ್​ ರಾಜಕೀಯ ಪ್ರವೇಶದ ವದಂತಿಗಳಿಗೆ ತುಪ್ಪ ಸುರಿದಂತಿದೆ.

ತಮಿಳುನಾಡಿನ 234 ಜಿಲ್ಲೆಗಳ ಅಭಿಮಾನಿಗಳ ಸಂಘದ ಮುಖ್ಯಸ್ಥರು ಪನೈಯೂರ್‌ನಲ್ಲಿರುವ ವಿಜಯ್​ ಫಾರ್ಮ್‌ಹೌಸ್‌ನಲ್ಲಿ 2026ರ ವಿಧಾನಸಭೆ ಚುನಾವಣೆಯ ತಯಾರಿ ಕುರಿತು ಚರ್ಚಿಸಲು ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಮಧ್ಯಾಹ್ನ 3 ಗಂಟೆಗೆ ಸಭೆಗೆ ಆಗಮಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಟಾರ್ ನಟ ತಮ್ಮ ಕಾರಿನಿಂದ ಇಳಿಯುವಾಗ ಡೆನಿಮ್ ಶರ್ಟ್ ಮತ್ತು ಡಾರ್ಕ್ ಪ್ಯಾಂಟ್​ನಲ್ಲಿ ಕಾಣಿಸಿಕೊಂಡರು.

ವಿಜಯ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಲು ಕೆಲವು ನಿವೃತ್ತ ಅಧಿಕಾರಿಗಳು, ಪತ್ರಕರ್ತರು ಮತ್ತು ಕೆಲವು ಪ್ರಭಾವಿ ಸಾಮಾಜಿಕ ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುನ್ನ ನಡೆಯನ್ನು ಯೋಜಿಸದಿದ್ದರೂ, ಅವರು 2026ರ ವಿಧಾನಸಭಾ ಚುನಾವಣೆಯನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ್ ಎರಡು ವರ್ಷಗಳ ಕಾಲ ಚಲನಚಿತ್ರಗಳಿಂದ ವಿರಾಮ ತೆಗೆದುಕೊಳ್ಳಲು ಚಿಂತಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:Watch: ಫ್ಯಾನ್ಸ್​ ಜೊತೆ ಏರ್​ಪೋರ್ಟ್​ನಲ್ಲಿ 'ಕಾವಾಲಾ' ಹಾಡಿಗೆ ಸ್ಟೆಪ್​ ಹಾಕಿದ ತಮನ್ನಾ ಭಾಟಿಯಾ

ವದಂತಿ ಹುಟ್ಟಿಕೊಂಡಿದ್ದು ಹೀಗೆ..ಕೆಲವು ದಿನಗಳ ಹಿಂದೆ ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಮೊದಲ ಮೂರು ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಸಮಾರಂಭದಲ್ಲಿ ವಿಜಯ್​ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಬಿ.ಆರ್. ಅಂಬೇಡ್ಕರ್, ತಿರುವಳ್ಳೂರ್ ಹಾಗೂ ಕಾಮರಾಜ್ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು. ವಿವಿಧ ರಾಜಕೀಯ ಪಕ್ಷಗಳಿಂದ ಹಣ ಪಡೆದು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸದಂತೆ ತಮ್ಮ ಪೋಷಕರಿಗೆ ಸಲಹೆ ನೀಡುವಂತೆ ಅವರು ಮಕ್ಕಳಿಗೆ ಕರೆ ನೀಡಿದ್ದರು. ಈ ರೀತಿಯಾಗಿ ದಳಪತಿ ವಿಜಯ್​ ಮಾತನಾಡಿದ್ದರಿಂದ ವದಂತಿಗಳು ಹುಟ್ಟಿಕೊಂಡವು.

'ವಿಜಯ್ ಮಕ್ಕಳ್ ಇಯ್ಯಕಂ': ವಿಜಯ್ ಅವರ ಅಭಿಮಾನಿಗಳ ಸಂಘವಾಗಿರುವ ಟಿವಿಎಂಐ (ತಳಪತಿ (ದಳಪತಿ) ವಿಜಯ್ ಮಕ್ಕಳ್ ಇಯ್ಯಕಂ) ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಕಳೆದ ಕೆಲವು ವರ್ಷಗಳಿಂದ, ಟಿವಿಎಂಐ ರಾಜ್ಯಾದ್ಯಂತ ತನ್ನ ಸಾಮಾಜಿಕ ಮತ್ತು ಸಮುದಾಯದ ಪ್ರಭಾವದಲ್ಲಿ ಮುಂದಿದೆ. ತಮಿಳು ರಾಜಕೀಯದ ಅಗ್ರಮಾನ್ಯ ನಾಯಕರಾದ ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರ ನಿಧನದಿಂದ ಉಂಟಾದ ನಿರ್ವಾತವನ್ನು ತುಂಬುವ ಗುರಿಯನ್ನು ವಿಜಯ್ ಹೊಂದಿದ್ದಾರೆ ಎಂದು ಈಗಾಗಲೇ ನಟನ ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:Alia Bhatt: 'ತುಮ್​ ಕ್ಯಾ ಮಿಲೇ' ಹಾಡಿನ ಚಿತ್ರೀಕರಣದ ವಿಡಿಯೋ ಹಂಚಿಕೊಂಡ ಆಲಿಯಾ ಭಟ್​

ABOUT THE AUTHOR

...view details