ವಿದ್ಯುತ್ ಜಮ್ವಾಲ್ ಬಣ್ಣದ ಜಗತ್ತಿನ ಫಿಟ್ ನಟರಲ್ಲಿ ಒಬ್ಬರು. ಫಿಟ್ನೆಸ್ ಐಕಾನ್ ಎಂದೇ ಫೇಮಸ್. ಇವರ ಕಟ್ಟುಮಸ್ತಾದ, ಸದೃಢ ದೇಹ ನೆಟ್ಟಿಗರ ಹುಬ್ಬೇರಿಸುವಂತಿದೆ. ತೆರೆ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲೂ ಫಿಟ್ನೆಸ್, ಆ್ಯಕ್ಷನ್ ವಿಚಾರವಾಗಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟ ತಮ್ಮ ವೈಯಕ್ತಿಕ ಜೀವನದ ಸಲುವಾಗಿ ಸುದ್ದಿಯಲ್ಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಖುದಾ ಹಫೀಜ್ ನಟನ ಮದುವೆ ವಿಚಾರ ಸಖತ್ ಸದ್ದು ಮಾಡುತ್ತಿದೆ. ಪ್ರೀತಿಗೆ ಮತ್ತೊಂದು ಅವಕಾಶ ಕೊಡಲಿದ್ದಾರೆಂಬ ವದಂತಿಗಳಿವೆ. ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ (ಮಾಜಿ ಪ್ರೇಯಸಿ) ಫ್ಯಾಷನ್ ಡಿಸೈನರ್ ನಂದಿತಾ ಮೆಹ್ತಾನಿ ಅವರೊಂದಿಗಿನ ರಿಲೇಶನ್ಶಿಪ್ ಅನ್ನು ಪುನರುಜ್ಜೀವನಗೊಳಿಸಬಹುದು ಎಂಬ ಗುಮಾನಿ ಇದೆ. ನಂದಿತಾ ಮೆಹ್ತಾನಿ ಮತ್ತು ವಿದ್ಯುತ್ ಜಮ್ವಾಲ್ 2021ರ ಸೆಪ್ಟೆಂಬರ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೆಪ್ಟೆಂಬರ್ 13ರಂದು ಶುಭ ಸುದ್ದಿಯನ್ನು ಘೋಷಿಸಿದ್ದರು. ಆದರೆ ಅದು ಕಾರಣಾಂತರಗಳಿಂದ ಮುರಿದು ಬಿತ್ತು ಎಂದು ಹೇಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 2021ರ ಸೆಪ್ಟೆಂಬರ್ 13ರಂದು ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದರು. ಜೋಡಿ ಕೈ ಕೈ ಹಿಡಿದು ಗೋಡೆ ಏರುತ್ತಿರುವ ಫೋಟೋ ಶೇರ್ ಮಾಡಿದ್ದರು. ಮತ್ತೊಂದು ಫೋಟೋದಲ್ಲಿ ತಾಜ್ ಮಹಲ್ ಬಳಿ ಆತ್ಮೀಯವಾಗಿ ನಿಂತಿರುವುದು ಕಂಡು ಬಂದಿತ್ತು. "01/09/21" ಕ್ಯಾಪ್ಷನ್ ಕೊಟ್ಟಿದ್ದರು.